ಒಕೆ.... ಇದು ಆಸ್ಪತ್ರೆಯೋ ಇಲ್ಲ, ಯಮನ ವಾಸದ ಮನೆಯೋ ?

KannadaprabhaNewsNetwork |  
Published : May 17, 2025, 01:35 AM ISTUpdated : May 17, 2025, 01:36 AM IST
ಫೋಟೋ 16ಪಿವಿಡಿ1ಪಾವಗಡ,ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಸಂಸದ ಗೋವಿಂದ ಕಾರಜೋಳ ದಿಢೀರ್ ಭೇಟಿ,ಅವ್ಯವಸ್ಥೆ ಹಾಗೂ ಕುಂದುಕೊರತೆಗಳ ಬಗ್ಗೆ ಆಸ್ಪತ್ರೆಯ ಆಡಳಿತಾಧಿಕಾರಿ ಬಾಬು ಅವರಿಂದ ಮಾಹಿತಿ ಪಡೆದರು.         | Kannada Prabha

ಸಾರಾಂಶ

100 ಹಾಸಿಗೆಯ ಪಟ್ಟಣದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಶುಕ್ರವಾರ ಸಂಸದ ಗೋವಿಂದ ಕಾರಜೋಳ ಅವರು ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ವಾರ್ಡ್‌ ಹಾಗೂ ದಾಖಲಾದ ರೋಗಿಗಳ ಸಂಖ್ಯೆ ಕುರಿತು ಪರಿಶೀಲನೆ ನಡೆಸಿದರು.

ಕನ್ನಡಪ್ರಭವಾರ್ತೆ ಪಾವಗಡ

100 ಹಾಸಿಗೆಯ ಪಟ್ಟಣದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಶುಕ್ರವಾರ ಸಂಸದ ಗೋವಿಂದ ಕಾರಜೋಳ ಅವರು ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ವಾರ್ಡ್‌ ಹಾಗೂ ದಾಖಲಾದ ರೋಗಿಗಳ ಸಂಖ್ಯೆ ಕುರಿತು ಪರಿಶೀಲನೆ ನಡೆಸಿದರು.

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದ ಆಸ್ಪತ್ರೆಗೆ ದಾಖಲಾದ ರೋಗಿಗಳು ಅನುಭವಿಸುತ್ತಿರುವ ಯಾತನೆ ವಿರುದ್ಧ ಭಾರಿ ಬೇಸರ ವ್ಯಕ್ತಪಡಿಸಿ,ಆ ಸ್ಪತ್ರೆಯ ಆಡಳಿತಾಧಿಕಾರಿ ಎಸ್‌.ಎಲ್‌.ಬಾಬು ಅವರಿಂದ ವಿವರ ಪಡೆದರು. ಆಸ್ಪತ್ರೆಯ ಸಮಸ್ಯೆ ಕುರಿತು ಸ್ಥಳದಲ್ಲಿದ್ದ ಸಾರ್ವಜನಿಕರಿಂದ ದೂರು ಅಲಿಸಿದ ಬಳಿಕ ರಾಜ್ಯ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರಿಗೆ ಕರೆ ಮಾಡಿ ಇಲ್ಲಿನ ಆಸ್ಪತ್ರೆಯ ಅವ್ಯವಸ್ಥೆ ಹಾಗೂ ವೈದ್ಯರ ಕೊರತೆ ಕುರಿತು ಮನವರಿಕೆ ಮಾಡಿ ಅಸಮಾಧಾನ ಹೊರಹಾಕಿದರು. ಗಡಿಪ್ರದೇಶದಲ್ಲಿ ಇಂತಹ ಅವ್ಯವಸ್ಥೆ ಇದ್ದರೆ ಹೇಗೆ, ಆಸ್ಪತ್ರೆಯ ಸುಚ್ಚಿತ್ವ ಹಾಗೂ ಆಸ್ಪತ್ರೆಗೆ ಬಂದಿದ್ದ ರೋಗಿಗಳ ಬಗ್ಗೆ ಕಾಳಜಿವಹಿಸಬೇಕಲ್ವೇ ಇಂತಹ ಯಾವುದೇ ಉತ್ತಮ ವಾತವಾರಣ ಇಲ್ಲಿ ಕಾಣುತ್ತಿಲ್ಲ, ಇದು ಆಸ್ಪತ್ರೆಯೋ ಇಲ್ಲ, ಯಮನ ವಾಸದ ಮನೆಯೋ ಗೊತ್ತಾಗುತ್ತಿಲ್ಲ. ಗಂಭೀರವಾಗಿ ಪರಿಗಣಿಸುವ ಮೂಲಕ ಸೂಕ್ತ ಔಷಧೋಪಚಾರ ಹಾಗೂ ನಿಗದಿತ ಪ್ರಮಾಣದ ವೈದ್ಯರ ನೇಮಕಾತಿ ಪ್ರಕ್ರಿಯೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಅವರಿಗೆ ಸೂಚಿಸಿದರು. ಇಲ್ಲಿನ ಆಸ್ಪತ್ರೆಯ ಕೊಠಡಿಗಳಿಗೆ ತೆರಳಿ ಪರಿಶೀಲಿಸುತ್ತಿರುವ ವೇಳೆ ವಿವಿಧ ವಿಭಾಗದ 14ಮಂದಿ ತಜ್ಞ ವೈದ್ಯರ ಪೈಕಿ ಕೇವಲ ಇಬ್ಬರು ಮಾತ್ರ ಕರ್ತವ್ಯ ನಿರತರಾಗಿದ್ದು ಇಷ್ಟು ದೊಡ್ಡ ಮಟ್ಟದಲ್ಲಿ 100ಹಾಸಿಗೆ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವಂತಹ ರೋಗಿಗಳಿಗೆ ಕೇವಲ ಇಬ್ಬರು ವೈದ್ಯರು ಕರ್ತವ್ಯ ನಿರತರಾಗಿದ್ದಾರೆ. ಇವರಿಂದ ಎಷ್ಟು ಪ್ರಮಾಣದ ವೈದ್ಯ ಸೇವೆ ನಿರೀಕ್ಷಿಸಲು ಸಾಧ್ಯ.ಆಸ್ಪತ್ರೆಯ ಪ್ರಗತಿಗೆ ಕೇಂದ್ರ ಸರ್ಕಾರ ಅನೇಕ ಯೋಜನೆ ಜಾರಿಪಡಿಸಿದೆ.ಇದರ ಜತೆ ರಾಜ್ಯ ಸರ್ಕಾರ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮವಹಿಸುವ ಅಗತ್ಯವಿದ್ದು, ಗ್ರಾಮೀಣ ಬಡ ರೋಗಿಗಳ ಬಗ್ಗೆ ರಾಜ್ಯ ಸರ್ಕಾರದ ಬದ್ದತೆ ತೋರುವ ಅಗತ್ಯವಿದೆ ಎಂದರು.

ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ ಕಳೆದ ಏಳೆಂಟು ವರ್ಷದಿಂದ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ವೈದ್ಯರಿಲ್ಲದೇ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಆಸ್ಪತ್ರೆಗೆ ಹೆಚ್ಚಿನ ವೈದ್ಯರನ್ನು ನಿಯೋಜಿಸುವಂತೆ ಅನೇಕ ರೀತಿಯ ಪ್ರತಿಭಟನೆ ನಡೆಸಲಾಗಿದೆ. ಇಲ್ಲಿ 14ಮಂದಿ ವೈದ್ಯರ ಪೈಕಿ ಕೇವಲ 4ಮಂದಿ ವೈದ್ಯರು ಮಾತ್ರ ಸೇವೆ ನಿರತರಾಗಿದ್ದು ಇನ್ನೂ ಕಣ್ಣು ಕಿವಿ ಹೆರಿಗೆ, ದಂತ ಹಾಗೂ ನರರೋಗ ವಿಭಾಗದಲ್ಲಿ ವೈದ್ಯರೇ ಇಲ್ಲ. ಇಲ್ಲಿ ಏನಾಗುತ್ತಿದೆ.ಇಲ್ಲಿನ ಆಸ್ಪತ್ರೆಯಲ್ಲಿ ಯಾರಿಂದ ಹಾಗೂ ಯಾವ ವೈದ್ಯರಿಂದ ಸಮಸ್ಯೆ ಎದುರಾಗಿದೆ ಎನ್ನುವುದೇ ಅರ್ಥವಾಗುತ್ತಿಲ್ಲ.ಆದರೆ ಇಲ್ಲಿಗೆ ನಿಯೋಜಿತರಾಗುವ ತಜ್ಞ ವೈದ್ಯರು ಮಾತ್ರ, ಒಂದು ತಿಂಗಳಲ್ಲಿಯೆ ಬೇರೆಡೆ ವರ್ಗಾವಣೆ ಪಡೆಯುವುದು ಸಾಮಾನ್ಯವಾಗಿದೆ. ಕಾರಣ ಗೊತ್ತಾಗುತ್ತಿಲ್ಲ.ಇಲ್ಲಿನ ಸರ್ಕಾರಿ ಆಸ್ಪತ್ರೆ ಅದೋಗತಿಗೆ ಜಾರಿದ್ದು ಹೇಳುವರು ಹಾಗೂ ಕೇಳುವರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಯ ಸುವ್ಯವಸ್ಥೆ ಹಾಗೂ ಔಷಧೋಪಚಾರ ಸಮಸ್ಯೆ ನಿವಾರಣೆ ಸೇರಿದಂತೆ ವಿವಿಧ ವಿಭಾಗದ ತಜ್ಞ ವೈದ್ಯರನ್ನು ನಿಯೋಜಿಸುವಲ್ಲಿ ರಾಜ್ಯ ಸರ್ಕಾರ ನಿದ್ದೆಗೆ ಜಾರಿದ್ದು ದೇವರೆ ಕಾಪಾಡಬೇಕು.ಪರಿಸ್ಥಿತಿ ಹೀಗೆ ಮುಂದುವರಿದರೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಸಜ್ಜಾಗುವ ಅನಿರ್ವಾತೆ ಸೃಷ್ಟಿಯಾಗಿದೆ ಎಂದು ಎಚ್ಚರಿಸಿದರು.

ಇದೇ ವೇಳೆ ಜೆಡಿಎಸ್‌ ಮುಖಂಡರಾದ ಎಂ.ಕೆ.ನಾರಾಯಣಪ್ಪ,ತಾಲೂಕು ಬಿಜೆಪಿ ಅಧ್ಯಕ್ಷ ದೊಡ್ಡಹಳ್ಳಿ ಅಶೋಕ್‌, ನಾಗೇಂದ್ರಕುಮಾರ್‌, ಬಿಜೆಪಿ ಜಿಲ್ಲಾ ಸಮಿತಿಯ ಶಿವಕುಮಾರ್‌ ಸಾಕೇಲ್‌, ರವಿ, ಮಂಜುನಾಥ್‌, ಮಹಾಲಿಂಗಪ್ಪ, ಪುರುಷೋತ್ತಮ್‌ ಇತರರಿದ್ದರು.

ಫೋಟೋ 16ಪಿವಿಡಿ1

ಪಾವಗಡ,ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಸಂಸದ ಗೋವಿಂದ ಕಾರಜೋಳ ದಿಢೀರ್ ಭೇಟಿ,ಅವ್ಯವಸ್ಥೆ ಹಾಗೂ ಕುಂದುಕೊರತೆಗಳ ಬಗ್ಗೆ ಆಸ್ಪತ್ರೆಯ ಆಡಳಿತಾಧಿಕಾರಿ ಬಾಬು ಅವರಿಂದ ಮಾಹಿತಿ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು