ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಆಹ್ವಾನ ಬಂದಿಲ್ಲ

KannadaprabhaNewsNetwork | Published : Oct 30, 2024 12:32 AM

ಸಾರಾಂಶ

ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರದ ವಿಚಾರದಲ್ಲಿ ಇನ್ನು ಯಾವ ತೀರ್ಮಾನ ಮಾಡಿಲ್ಲ. ನನಗೆ ಕೂಡ ಯಾವ ಆಹ್ವಾನ ಬಂದಿರುವುದಿಲ್ಲ ಎಂದು ಶಾಸಕ ಹಾಗೂ ಜೆಡಿಎಸ್ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ತಿಳಿಸಿದರು. ಕುಟುಂಬ ಸಮೇತರಾಗಿ ಮಂಗಳವಾರ ಹಾಸನಾಂಬೆ ದೇವಿ ದರ್ಶನ ಪಡೆದ ನಂತರ ಜಿಲ್ಲಾಡಳಿತದಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಜೀವನದಲ್ಲಿ ಎರಡನೇ ಬಾರಿ ಹಾಸನಾಂಬೆ ತಾಯಿ ದರ್ಶನವನ್ನು ಮಾಡುತ್ತಿದ್ದೇನೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರದ ವಿಚಾರದಲ್ಲಿ ಇನ್ನು ಯಾವ ತೀರ್ಮಾನ ಮಾಡಿಲ್ಲ. ನನಗೆ ಕೂಡ ಯಾವ ಆಹ್ವಾನ ಬಂದಿರುವುದಿಲ್ಲ ಎಂದು ಶಾಸಕ ಹಾಗೂ ಜೆಡಿಎಸ್ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ತಿಳಿಸಿದರು. ಕುಟುಂಬ ಸಮೇತರಾಗಿ ಮಂಗಳವಾರ ಹಾಸನಾಂಬೆ ದೇವಿ ದರ್ಶನ ಪಡೆದ ನಂತರ ಜಿಲ್ಲಾಡಳಿತದಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಜೀವನದಲ್ಲಿ ಎರಡನೇ ಬಾರಿ ಹಾಸನಾಂಬೆ ತಾಯಿ ದರ್ಶನವನ್ನು ಮಾಡುತ್ತಿದ್ದೇನೆ. ಹಾಸನಾಂಬೆ ದೇವಿ ಬಾಗಿಲು ತೆರೆಯುವಾಗ ಜ್ಯೋತಿ ಉರಿಯುತ್ತಿರುತ್ತದೆ. ಹೂವು ಬಾಡಿರುವುದಿಲ್ಲ. ಎಲ್ಲಾ ಜನರಿಗೂ ಪ್ರೀತಿ, ಶಾಂತಿ, ಆರೋಗ್ಯ, ಮಳೆ, ಬೆಳೆ, ಸೌಖ್ಯ, ಸಮೃದ್ಧಿಯನ್ನ ಆ ತಾಯಿ ನೀಡಬೇಕು. ಎಲ್ಲರೂ ಕೂಡ ಪ್ರೀತಿ, ವಿಶ್ವಾಸದಿಂದ ಬದುಕುವಂತಾಗಲಿ. ಎಲ್ಲರಿಗೂ ಆರೋಗ್ಯವನ್ನು ಕೊಡು ಎಂದು ಆ ತಾಯಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಎಲ್ಲಾ ಜನರಿಗೂ ಒಳ್ಳೆಯ ಧಾರ್ಮಿಕ, ಆಧ್ಯಾತ್ಮಿಕ ಚಿಂತನೆಗಳನ್ನು ಮಾಡುವಂತಾಗಬೇಕು. ದೇವರು ಇರವುದಕ್ಕೆ ಇದೆಲ್ಲಾ ಜೀವಂತ ಉಳಿದಿದೆ ಮತ್ತು ಮಳೆ, ಬೆಳೆ ಆಗುತ್ತಿದೆ. ಜನರ ಕಷ್ಟಗಳನ್ನು ಪರಿಹಾರ ಮಾಡಿ ಸುಖ, ಶಾಂತಿ, ನೆಮ್ಮದಿಯಿಂದ ಬದುಕಬೇಕು ಎಂಬುದೇ ಆ ತಾಯಿಯಲ್ಲಿ ಮನವಿ ಮಾಡಿದ್ದೇನೆ ಎಂದರು.

ಉಪಚುನಾವಣೆ ವಿಚಾರವಾಗಿ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕರು, ಚನ್ನಪಟ್ಟಣದಲ್ಲಿ ನಿಖಿಲ್‌ ಪರ ಪ್ರಚಾರ ಮಾಡುವ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ನನಗೆ ಯಾವುದೇ ಆಹ್ವಾನ ಬಂದಿಲ್ಲ. ನಾನು ಯಾವುದೇ ತೀರ್ಮಾನಗಳನ್ನು ಮಾಡಿರುವುದಿಲ್ಲ. ಕ್ಷೇತ್ರದ ಕೆಲಸಗಳ ಒತ್ತಡದಲ್ಲಿ ಇದ್ದೀನಿ. ಮುಂದೆ ನೋಡೋಣ! ಚನ್ನಪಟ್ಟಣ ಚುನಾವಣೆ ಬಗ್ಗೆ ಮಾಹಿತಿ ಗೊತ್ತಿಲ್ಲ, ಮಾಹಿತಿ ಪಡೆದಿಲ್ಲ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದಷ್ಟೇ ಹೇಳಿದರು.

Share this article