ಪಡಿತರ ಅಂಗಡಿಯಲ್ಲಿ ಇನ್ನು ಅಕ್ಕಿ ಜೊತೆ ಜೋಳ ವಿತರಣೆ : ಆಹಾರ ನಿರೀಕ್ಷಕ ಮಂಜುನಾಥ ರೊಟ್ಟಿ

KannadaprabhaNewsNetwork |  
Published : Aug 23, 2024, 01:10 AM ISTUpdated : Aug 23, 2024, 01:25 PM IST
ಫೊಟೋ-22-ಜಿಎಲ್ಡಿ2-  ಗುಳೇದಗುಡ್ಡ ಪಟ್ಟಣದಲ್ಲಿ ನಡೆದ ಆಹಾರ ಅದಾಲತ್ನಲ್ಲಿ ತಾಲೂಕು ಆಹಾರ ನಿರೀಕ್ಷಕ ಮಂಜುನಾಥ ರೊಟ್ಟಿ ಮಾತನಾಡಿದರು. | Kannada Prabha

ಸಾರಾಂಶ

ಈ ತಿಂಗಳಿನಿಂದ ಪಡಿತರದಲ್ಲಿ ಅಕ್ಕಿಯ ಜೊತೆಗೆ ಜೋಳವನ್ನು ವಿತರಿಸಲಾಗುತ್ತಿದೆ. ಪ್ರತಿ ತಿಂಗಳು 10ನೇ ತಾರೀಖಿ ನಂತರ ಫಲಾನುಭವಿಗಳಿಗೆ ಆಹಾರಧಾನ್ಯ ವಿತರಿಸಲಾಗುತ್ತಿದೆ.  

  ಗುಳೇದಗುಡ್ಡ :  ಈ ತಿಂಗಳಿನಿಂದ ಪಡಿತರದಲ್ಲಿ ಅಕ್ಕಿಯ ಜೊತೆಗೆ ಜೋಳವನ್ನು ವಿತರಿಸಲಾಗುತ್ತಿದೆ. ಪ್ರತಿ ತಿಂಗಳು 10ನೇ ತಾರೀಖಿ ನಂತರ ಫಲಾನುಭವಿಗಳಿಗೆ ಆಹಾರಧಾನ್ಯ ವಿತರಿಸಲಾಗುತ್ತಿದೆ. ಸರಕಾರದ ಯೋಜನೆಗಳು ಅರ್ಹ ಫಲಾನುಭವಿಗಳು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕೆಂದು ತಾಲೂಕು ಆಹಾರ ನಿರೀಕ್ಷಕ ಮಂಜುನಾಥ ರೊಟ್ಟಿ ಹೇಳಿದರು.

ಅವರು ಪಟ್ಟಣದ ಕಂಜುಮರ್ ಸೊಸೈಟಿಯಲ್ಲಿ ಇತ್ತೀಚೆಗೆ ಆಹಾರ ನಾಗರಿಕರ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಬಾಗಲಕೋಟೆ, ತಹಸೀಲ್ದಾರ್‌ ಕಾರ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಆಹಾರ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯವನ್ನು ಪ್ರತಿತಿಂಗಳು ಅರ್ಹ ಫಲಾನುಭವಿಗಳಿಗೆ ವಿತರಿಸುವ ಬಗ್ಗೆ ಹಾಗೂ ಕುಂದುಕೊರೆತೆಗಳ ಬಗ್ಗೆ ವಿಚಾರಣೆ ಮಾಡಿ ಸ್ಥಳದಲ್ಲಿಯೇ ಪರಿಹರಿಸುವ ನಿಟ್ಟಿನಲ್ಲಿ ಪ್ರತಿತಿಂಗಳು ಪಡಿತರ ಅಂಗಡಿಗಳಲ್ಲಿ ಆಹಾರ ಅದಾಲತ್ ಹಮ್ಮಿಕೊಳ್ಳಲಾಗುತ್ತಿದೆ. ಇ-ಕೆವೈಸಿ ಆಗದೇ ಇದ್ದವರು ಇ-ಕೆವೈಸಿ ಮಾಡಿಸಬೇಕು ಎಂದರು.

ಆಹಾರಧಾನ್ಯ ಸರಿಯಾಗಿ ವಿತರಿಸುತ್ತಾರೋ ಇಲ್ಲವೋ ಎಂಬುವುದರ ಬಗ್ಗೆ ಅಲ್ಲಿದ್ದ ಫಲಾನುಭವಿಗಳನ್ನು ಆಹಾರ ನಿರೀಕ್ಷಕ ಮಂಜುನಾಥ ರೊಟ್ಟಿ ಅವರು ವಿಚಾರಿಸಿದರು.

ಈ ಸಂದರ್ಭದಲ್ಲಿ ಕಂಜುಮರ್ ಸೊಸೈಟಿ ಅಧ್ಯಕ್ಷ ಚಂದ್ರಶೇಖರ ಹರವಿ, ಕುಮಾರ ಅಂಗಡಿ, ರಾಜು ಹುಳಬುತ್ತಿ, ವೀರೇಶ ಮುರನಾಳ, ಹನಮಂತ ಕೌಜಗನೂರ, ಚೇತನ ಜಾನಿಕಲ್, ಚೇತನ ಅಂಗಡಿ, ಮಹಾಂತೇಶ ಸಿಂದಗಿ, ಕುಮಾರ ಗಂಗಾವತಿ, ಜಯಶ್ರೀ ಬರಹಾನಪೂರ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿ ಯೋಜನೆ ಸರ್ಕಾರಕ್ಕೆ ಒಂದಷ್ಟು ತೊಂದರೆ ನಿಜ: ಡಿಕೆಶಿ
ಗ್ಯಾರಂಟಿ ನಮ್ಮ ಬದ್ಧತೆ, ಬಜೆಟ್‌ ಕೊರತೆ ಇಲ್ಲ: ಯತೀಂದ್ರ, ರೇವಣ್ಣ