ಕನ್ನಡ ಕಟ್ಟಲು ಹಿಂಸಾತ್ಮಕವಾದ ಸಿಟ್ಟು ಬೇಕಿಲ್ಲ: ವೈ.ಎಸ್.ವಿ. ದತ್ತ

KannadaprabhaNewsNetwork |  
Published : Oct 13, 2025, 02:00 AM IST
12 ಬೀರೂರು 5ಸಮ್ಮೇಳನದ ಸಮಾರೋಪ ಸಮಾರಂಭದ ನಂತರ ಕನ್ನಡ ಸಿರಿ ಪುರಸ್ಕೃತರಾದ ಶೂದ್ರ ಶ್ರೀನಿವಾಸ್, ಬೀರೂರು ಹರಿಪ್ರಸಾದ್, ಶಿಕ್ಷಕ ಮುಗಳಿ ಕಟ್ಟೆ ಲೋಕೇಶ್ ಸೇರಿದಂತೆ ಮತ್ತಿತರನ್ನು ಮಾಜಿ ಶಾಸಕ ವೈ.ಎಸ್.ವಿ.ದತ್ತ, ಸಮ್ಮೇಳನಾಧ್ಯಕ್ಷೆ ಡಾ.ಪಿ.ಎಚ್.ವಿಜಯಲಕ್ಷ್ಮಿ, ಜಿಲ್ಲಾಧ್ಯಕ್ಷ ಸೂರಿಶ್ರೀನಿವಾಸ್ ಸನ್ಮಾನಿಸಿ ಗೌರವಿಸಿದರು. | Kannada Prabha

ಸಾರಾಂಶ

ಕಡೂರು, ಕನ್ನಡ ಕಟ್ಟಲು ಈಗ ತುರ್ತಾಗಿ ಸಾತ್ವಿಕವಾದ ರೋಷ ಮತ್ತು ಸಿಟ್ಟು ಅಗತ್ಯವಿದೆಯೇ ವಿನಃ ಹಿಂಸಾತ್ಮಕವಾದ ಸಿಟ್ಟು ಬೇಕಿಲ್ಲ ಎಂದು ಚಿಂತಕ ವೈ.ಎಸ್.ವಿ. ದತ್ತ ಅಭಿಪ್ರಾಯಪಟ್ಟರು.

7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ

ಕನ್ನಡಪ್ರಭ ವಾರ್ತೆ, ಕಡೂರು

ಕನ್ನಡ ಕಟ್ಟಲು ಈಗ ತುರ್ತಾಗಿ ಸಾತ್ವಿಕವಾದ ರೋಷ ಮತ್ತು ಸಿಟ್ಟು ಅಗತ್ಯವಿದೆಯೇ ವಿನಃ ಹಿಂಸಾತ್ಮಕವಾದ ಸಿಟ್ಟು ಬೇಕಿಲ್ಲ ಎಂದು ಚಿಂತಕ ವೈ.ಎಸ್.ವಿ. ದತ್ತ ಅಭಿಪ್ರಾಯಪಟ್ಟರು.

ದೊಡ್ಡಪಟ್ಟಣಗೆರೆಯಲ್ಲಿ ಭಾನುವಾರ ನಡೆದ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ರಾಷ್ಟ್ರಕವಿ ಕುವೆಂಪು ಸತ್ತಂತಿಹರನು ಬಡಿದೆಚ್ಚರಿಸು...ಕಚ್ಚಾಡುವವರನು ಕೂಡಿಸಿ ಒಲಿಸು ಎಂದು ಸಾತ್ವಿಕ ರೋಷ ತೋರಿಸಿದರು. ಪ್ರಸ್ತುತ ಈಗ ಅಂತಹ ರೋಷದ ಅಗತ್ಯವಿದೆ. ಕನ್ನಡ ಭಾಷೆ ಮೇಲೆ ಅಭಿಮಾನ ಮೂಡಿಸುವ ಕಾರ್ಯ ವಾಗಬೇಕು. ಕುವೆಂಪು 60 ವರ್ಷದ ಹಿಂದೆಯೇ ದ್ವಿಭಾಷಾ ಪದ್ಧತಿ ಅಗತ್ಯ ಪ್ರತಿಪಾದಿಸಿದ್ದರು. ಆದರೆ ಅವರ ಮಾತಿನ ಆಂತರ್ಯ ವನ್ನು ಇಷ್ಟು ವರ್ಷಗಳ ನಂತರ ನಮ್ಮ ಸರ್ಕಾರ ದ್ವಿಭಾಷಾ ಶಿಕ್ಷಣ ಪದ್ಧತಿ ಜಾರಿಗೆ ತರಲು ನಿರ್ಧರಿಸಿದೆ. ಇದು ಸ್ವಾಗತಾರ್ಹವಾದರೂ ಒಂದು ಕಡೆಯಿಂದ ಈ ವಿಳಂಬ ನಮ್ಮ ಕನ್ನಡಿಗರ ನಿರಾಸಕ್ತಿ ಪ್ರತೀಕವೂ ಆಗಿದೆ ಎಂದು ವಿಷಾಧಿಸಿದರು.

ಕನ್ನಡ ಸಾಹಿತ್ಯ ಸಮ್ಮೇಳನಗಳು ಕನ್ನಡ ಭಾಷೆ ಬಗ್ಗೆ ನಿರಾಸಕ್ತಿಯಿಂದಿರುವ ಬಗ್ಗೆ ಆಕ್ರೋಶ ಹೊರಹಾಕುವ ವೇದಿಕೆ ಗಳಾಗಬೇಕು. ಆ ಸಿಟ್ಟು ಕನ್ನಡ ಭಾಷಾ ಬೆಳವಣಿಗೆಗೆ ಪೂರಕವಾಗಬೇಕೇ ವಿನಃ ಹಿಂಸಾತ್ಮಕವಾಗಬಾರದು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಕನ್ನಡ ಕಟ್ಟುವ ವೇದಿಕೆಗಳಾಗಬೇಕು ಎಂದರು.ಸಮ್ಮೇಳನಾಧ್ಯಕ್ಷೆ ಡಾ.ಪಿ.ಎಚ್.ವಿಜಯಲಕ್ಷ್ಮಿ ಮಾತನಾಡಿ, ಕಲೆ,ಸಾಹಿತ್ಯ, ಸಂಗೀತ ಮುಂತಾದ ಸಾಂಸ್ಕೃತಿಕ ರಂಗದಲ್ಲಿ ಕಡೂರು ತಾಲೂಕು ವಿಶಿಷ್ಠ ಸ್ಥಾನ ಪಡೆದಿದೆ. ಇಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತಷ್ಟು ಹೆಚ್ಚಬೇಕು. ಕಡೂರು ತಾಲೂಕಿನಲ್ಲಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ವಾತಾವರಣ ಸದಾ ಕ್ರಿಯಾಶೀಲವಾಗಿರಲು ನನ್ನ ಸಹಯೋಗ ಸದಾ ಇರುತ್ತದೆ ಎಂದರು.ಈ ಸಂದರ್ಭದಲ್ಲಿ ಶಾಸನ ತಜ್ಞ ಬೀರೂರು ಇಸ್ಮಾಯಿಲ್, ಇತಿಹಾಸ ತಜ್ಞ ಹಿರೇನಲ್ಲೂರು ಪಾಂಡುರಂಗ, ಸಾಹಿತಿ ಸಿಂಗಟಗೆರೆ ಸಿದ್ದಪ್ಪ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ, ಸಾಹಿತ್ಯ ಸಂಘಟಕರಾದ ವೈ.ಎಸ್.ರವಿಪ್ರಕಾಶ್ ಮತ್ತು ಬೀರೂರು ಸೀತಾಲಕ್ಷ್ಮಿ ಅವರಿಗೆ ಕನ್ನಡಶ್ರೀ ಪ್ರಶಸ್ತಿ ಹಾಗೂ ವಿವಿಧ ಸಾಧಕರಿಗೆ ಕನ್ನಡ ಸಿರಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಬಿ.ಹನುಮಂತಪ್ಪ, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಜಶೇಖರ್, ಕಸಾಪ ತಾಲ್ಲೂಕು ಅಧ್ಯಕ್ಷ ಚಿಕ್ಕನಲ್ಲೂರು ಪರಮೇಶ್, ಪರಿಷತ್ತಿನ ಪದಾಧಿಕಾರಿಗಳು ಇದ್ದರು.12 ಬೀರೂರು 5ಸಮ್ಮೇಳನದ ಸಮಾರೋಪ ಸಮಾರಂಭದ ನಂತರ ಕನ್ನಡ ಸಿರಿ ಪುರಸ್ಕೃತರಾದ ಶೂದ್ರ ಶ್ರೀನಿವಾಸ್, ಬೀರೂರು ಹರಿಪ್ರಸಾದ್, ಶಿಕ್ಷಕ ಮುಗಳಿ ಕಟ್ಟೆ ಲೋಕೇಶ್ ಸೇರಿದಂತೆ ಮತ್ತಿತರನ್ನು ಮಾಜಿ ಶಾಸಕ ವೈ.ಎಸ್.ವಿ.ದತ್ತ, ಸಮ್ಮೇಳನಾಧ್ಯಕ್ಷೆ ಡಾ.ಪಿ.ಎಚ್.ವಿಜಯಲಕ್ಷ್ಮಿ, ಜಿಲ್ಲಾಧ್ಯಕ್ಷ ಸೂರಿಶ್ರೀನಿವಾಸ್ ಸನ್ಮಾನಿಸಿ ಗೌರವಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ