ರೈತರ ಒತ್ತುವರಿ ತೆರವು ಆತಂಕ ಪಡುವ ಅಗತ್ಯವಿಲ್ಲ: ನಟರಾಜ್‌

KannadaprabhaNewsNetwork |  
Published : Aug 15, 2024, 01:55 AM IST
ೇಾೀಾ | Kannada Prabha

ಸಾರಾಂಶ

ಶೃಂಗೇರಿ, ನ್ಯಾಯಾಲಯದಲ್ಲಿರುವ ಒತ್ತುವರಿ ಪ್ರಕರಣಗಳು, ಅರಣ್ಯ ಇಲಾಖೆ ಮೀಸಲು ಪ್ರದೇಶಗಳ ಒತ್ತುವರಿ ಪ್ರಕರಣಗಳ ತೆರವು ಹೊರತು ಪಡಿಸಿ ರೈತರ ಒತ್ತುವರಿಯನ್ನು ಖುಲ್ಲಾ ಮಾಡಲಾಗುವುದಿಲ್ಲ ಎಂದು ತಾಲೂಕು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಾರನಕೊಡಿಗೆ ನಟರಾಜ್ ಹೇಳಿದರು.

ಕನ್ನಡಪ್ರಭ ವಾರ್ತೆ, ಶೃಂಗೇರಿ

ನ್ಯಾಯಾಲಯದಲ್ಲಿರುವ ಒತ್ತುವರಿ ಪ್ರಕರಣಗಳು, ಅರಣ್ಯ ಇಲಾಖೆ ಮೀಸಲು ಪ್ರದೇಶಗಳ ಒತ್ತುವರಿ ಪ್ರಕರಣಗಳ ತೆರವು ಹೊರತು ಪಡಿಸಿ ರೈತರ ಒತ್ತುವರಿಯನ್ನು ಖುಲ್ಲಾ ಮಾಡಲಾಗುವುದಿಲ್ಲ ಎಂದು ತಾಲೂಕು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಾರನಕೊಡಿಗೆ ನಟರಾಜ್ ಹೇಳಿದರು.

ಪಟ್ಟಣದ ಕಾಂಗ್ರೇಸ್ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಶೃಂಗೇರಿ ತಾಲೂಕಿನಲ್ಲಿ ಡಿಎಫ್ಒ ರವರ ಮಾಹಿತಿಯಂತೆ 276 ಪ್ರಕರಣಗಳಿವೆ. ನ್ಯಾಯಾಲಯದಲ್ಲಿದ್ದ ಪ್ರಕರಣಗಳ ಒತ್ತುವರಿಗಳನ್ನು ಮಾತ್ರ ತೆರವು ಗೊಳಿಸಲಾಗುತ್ತಿದೆ. ಸಚಿವ ಈಶ್ವರ್ ಖಂಡ್ರೆಯವರು ರೈತರ ಒತ್ತುವರಿ ತೆರವುಗೊಳಿಸಿ ಎಂದು ಹೇಳಿಲ್ಲ. ಈ ಬಗ್ಗೆ ಗೊಂದಲ ಬೇಡ. ಸೆಕ್ಷನ್ 4(1), 17ಗಳಲ್ಲಿನ ಒತ್ತುವರಿ ಬಗ್ಗೆ ಜಂಟಿ ಸರ್ವೆ ನಡೆಸಲಾಗುವುದು. ಈ ಬಗ್ಗೆ ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ.

ಕಾಯ್ದಿರಿಸಿದ ಮೀಸಲು ಅರಣ್ಯ,ರಾಷ್ಟ್ರೀಯ ಉದ್ಯಾನವನ, ಕಸ್ತೂರಿ ರಂಗನ್ ವರದಿ, ಹುಲಿ ಯೋಜನೆ ಎಲ್ಲವೂ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದೆ. ಇವು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿಲ್ಲ. ರಾಜ್ಯ ಸರ್ಕಾರ ರೈತರ ಪರವಾಗಿದೆ. ನಾವು ಕೂಡ ರೈತರು, ರೈತರ ಪರವಾಗಿ ಹೋರಾಡುತ್ತಲೇ ಬಂದಿದ್ದೇವೆ. ರೈತರ ಜೊತೆಗಿದ್ದೇವೆ. ಒತ್ತುವರಿ ತೆರವುಗೊಳಿಸಲು ಬಿಡುವುದಿಲ್ಲ.

ಆ. 17 ರಂದು ಕರೆ ನೀಡಿರುವ ಶೃಂಗೇರಿ ಕ್ಷೇತ್ರ ಬಂದ್ ಗೆ ನಮ್ಮ ಬೆಂಬಲವಿಲ್ಲ. ನಾವು ರೈತರ ಪರವಾಗಿದ್ದೇವೆ. ಆ. 25 ರಂದು ಒತ್ತುವರಿ ಸಮಸ್ಯೆ ಸಂಬಂಧಿಸಿದಂತೆ ಶೃಂಗೇರಿ ಪಟ್ಟಣದ ಗೌರೀಶಂಕರ ಸಭಾಂಗಣದಲ್ಲಿ ಶಾಸಕ ಟಿ.ಡಿ.ರಾಜೇಗೌಡರು ಅಧಿಕಾರಿಗಲ ಸಭೆ ಕರೆದಿದ್ದಾರೆ. ಸಭೆಯಲ್ಲಿ ತಾಲೂಕಿನ ಒತ್ತುವರಿ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು. ರೈತಬಾಂಧವರು ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಕಾಂಗ್ರೇಸ್ ಮುಖಂಡ ಕೆ.ಆರ್,ವೆಂಕಟೇಶ್, ಸೌಭಾಗ್ಯ ಗೋಪಾಲನ್, ತ್ರಿಮೂರ್ತಿ, ಕಲ್ಕುಳಿ ವೆಂಕಟೇಶ್, ಶಿವಕುಮಾರ್, ಅಗಸೊಳ್ಳಿ ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

14 ಶ್ರೀ ಚಿತ್ರ 1-ಶೃಂಗೇರಿ ಪಟ್ಟಣದ ಕಾಂಗ್ರೇಸ್ ಭವನದಲ್ಲಿ ನಡೆದ ಸಭೆಯಲ್ಲಿ ತಾಲೂಕು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಾರನಕೊಡಿಗೆ ನಟರಾಜ್ ಮಾತನಾಡಿದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ