ಭಾರತದಲ್ಲಿನ ಜ್ಞಾನಸಂಪತ್ತು ಯಾರು ಕದಿಯಲು ಸಾಧ್ಯವಿಲ್ಲ

KannadaprabhaNewsNetwork |  
Published : Dec 23, 2023, 01:47 AM IST
ಚಿತ್ರ ಮಾಹಿತಿ ೨೨ಬಿಡಿಎಂ೧ ಗದಗ ಡೋಣಿ ಕಪ್ಪತ್ತಗುಡ್ಡ ಮಠದ ಶಿವಕುಮಾರ ಮಾಹಾಸ್ವಾಮೀಜಿಯವರನ್ನ ಶ್ರೀ ಎಸ್.ಬಿ. ಮಮದಾಪೂರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಮಹಾವಿದ್ಯಾಲಯದ ಸಂಸ್ಥೆವತಿಯಿAದ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಜಗತ್ತಿನಲ್ಲಿ ಭಾರತದ ಜ್ಞಾನವನ್ನು ಯಾರು ಕದಿಯಲು ಸಾಧ್ಯವಿಲ್ಲ. ಇಲ್ಲಿರುವ ಆಧ್ಯಾತ್ಮಿಕ ಶಕ್ತಿ ಬೇರೆ ಯಾವ ದೇಶದಲ್ಲಿ ಸಿಗಲು ಸಾಧ್ಯವಿಲ್ಲ, ಇಂದಿನ ಯುವಕರು ಉತ್ತಮ ಸಂಸ್ಕಾರ ಬೆಳೆಸಿಕೊಂಡು ನಿಮ್ಮ ಬದುಕು ಕಟ್ಟಿಕೊಳ್ಳಿ ಎಂದು ಕಪ್ಪತ್ತಗುಡ್ಡದ ಗದಗ ಡೋಣಿ ಮಠದ ಶಿವಕುಮಾರ ಮಾಹಾಸ್ವಾಮೀಜಿ ಹೇಳಿದರು.

ಕನ್ನಡಪ್ರಭವಾರ್ತೆ ಬಾದಾಮಿ

ಜಗತ್ತಿನಲ್ಲಿ ಭಾರತದ ಜ್ಞಾನವನ್ನು ಯಾರು ಕದಿಯಲು ಸಾಧ್ಯವಿಲ್ಲ. ಇಲ್ಲಿರುವ ಆಧ್ಯಾತ್ಮಿಕ ಶಕ್ತಿ ಬೇರೆ ಯಾವ ದೇಶದಲ್ಲಿ ಸಿಗಲು ಸಾಧ್ಯವಿಲ್ಲ, ಇಂದಿನ ಯುವಕರು ಉತ್ತಮ ಸಂಸ್ಕಾರ ಬೆಳೆಸಿಕೊಂಡು ನಿಮ್ಮ ಬದುಕು ಕಟ್ಟಿಕೊಳ್ಳಿ ಎಂದು ಕಪ್ಪತ್ತಗುಡ್ಡದ ಗದಗ ಡೋಣಿ ಮಠದ ಶಿವಕುಮಾರ ಮಾಹಾಸ್ವಾಮೀಜಿ ಹೇಳಿದರು.

ಶುಕ್ರವಾರ ನಗರದ ಶ್ರೀ ಎಸ್.ಬಿ. ಮಮದಾಪೂರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಮಹಾವಿದ್ಯಾಲಯದ ೨೦೨೩-೨೪ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿ, ಇಂದನಿ ಯುವಜನಾಂಗ ತಮ್ಮ ಬದುಕನ್ನು ಧೈರ್ಯದಿಂದ, ಆತ್ಮವಿಶ್ವಾಸದೊಂದಿಗೆ ಕಟ್ಟಿಕೊಂಡು ಉತ್ತಮ ಸಾಧನೆ ಮಾಡಬೇಕು. ವಿಧ್ಯಾರ್ಥಿ ಜೀವನದಲ್ಲಿ ಗ್ರಂಥಾಲಯ ಪ್ರಮುಖ ಪಾತ್ರವಾಗಿರುತ್ತೆ. ಅದನ್ನು ಸರಿಯಾಗಿ ಸದ್ಭಳಿಕೆ ಮಾಡಿಕೊಳ್ಳಬೇಕು. ಪುಸ್ತಕಗಳು ನಿಮ್ಮನ್ನು ಹುಡಿಕಿ ಬರುವುದಿಲ್ಲ. ನೀವೇ ಅವುಗಳನ್ನು ಅರಿಸಿ ಹೋದರೆ ಮಾತ್ರ ಅಪಾರ ಜ್ಞಾನ ಭಂಡಾರ ನಿಮ್ಮದಾಗುತ್ತದೆ. ಸಮಾಜದಲ್ಲಿ ಉತ್ತಮ ಸ್ಥಾನ ಸಿಗುವುದು ಸತತ ಹಾಗೂ ಕಠಿಣ ಪರಿಶ್ರಮದಿಂದ ಮಾತ್ರ ಸಾಧ್ಯ ಎಂದರು.

ಎಲ್ಲರೂ ಪರಿಸರ ಪ್ರೀತಿಸಬೇಕು. ಇಂದು ನಾವು ಗಿಡ - ಮರಗಳನ್ನು ಬೆಳೆಸಿದರೆ ಅವು ನಮ್ಮ ಮುಂದಿನ ಪೀಳಿಗೆಗೆ ನೆರವಾಗುತ್ತವೆ. ಉತ್ತರ ಕರ್ನಾಟಕದ ಕಪ್ಪತಗುಡ್ಡದಲ್ಲಿರುವ ಸಂಪನ್ಮೂಲ ಬಹಳಷ್ಟು ಪರಿಶುದ್ಧವಾಗಿದ್ದು, ಇಂದಿನ ಯುವ ಪೀಳಿಗೆ ಅದನ್ನು ಕಾಪಾಡಿಕೊಂಡು ಹೋಗುವ ಜವ್ಹಾಬ್ದಾರಿ ಹೊತ್ತು, ಮುಂದಿನ ಪೀಳಿಗೆಗೆ ಅದರ ಸದುಪಯೋಗದ ಮನವರಿಗೆ ಮಾಡಬೇಕು ಎಂದು ಹೇಳೀದರು.

ಈ ವೇಳೆ ಸಂಸ್ಥೆಯ ಚೇರಮನ್ನ ಎ.ಸಿ. ಪಟ್ಟಣದ, ಉದ್ಘಾಟಕರಾಗಿ ಸಿ.ಎಸ್. ಕಾಚಟ್ಟಿ, ಗೌರವ ಉಪಸ್ಥಿತಿ ಎಸ್.ಜಿ. ಕಾರುಡಗಿಮಠ, ನಿರ್ದೇಶಕರಾದ ವಿ.ಕೆ. ಬಾಗಲೆ, ಪ್ರಧಾನ ಕಾರ‍್ಯದರ್ಶಿ ರಾಜೇಂದ್ರ ಕುಲಕರ್ಣಿ ಇದ್ದರು. ಪ್ರಾಚಾರ್ಯ ರವೀಂದ್ರ ಮೂಲಿಮನಿ ಕಾಲೇಜಿನ ವಾರ್ಷಿಕ ವಿವರಣೆಯೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕನ್ನಡ ಸಹ ಪ್ರಾಧ್ಯಾಪಕ ಶಿವುಕುಮಾರ ಅಂಗಡಿ ಅತಿಥಿಗಳ ಪರಿಚಯ ಮಾಡಿದರು. ಮಾರುತಿ ಬಿಂಗೇರಿ, ಸ್ವಾತಿ ತೋಟರ ಕಾರ್ಯಕ್ರಮ ನಿರೂಪಿಸಿದರು. ಸಹ ಪ್ರಾಧ್ಯಾಪಕ ಎನ್.ಬಿ. ಸೋಮನಕಟ್ಟಿ ವಂದಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ