ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಜ್ಯದಲ್ಲಿ ಜಾತಿ ಗಣತಿ ಬಗ್ಗೆ ಚರ್ಚೆ ಆಗಿದೆ. ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಸಂಪುಟದಲ್ಲಿ ಯಾರು ವಿರೋಧ ಮಾಡಿಲ್ಲ. ಚರ್ಚೆಯ ಅಪೂರ್ಣವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ನಾನು ಸಂಪುಟದಲ್ಲಿ ಪೂರ್ಣ ಪ್ರಮಾಣ ಚರ್ಚೆ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ ಎಂದರು.ಜಾತಿ ಗಣತಿಗೆ ಸಂಪುಟದಲ್ಲಿ ಹಲವರು ವಿರೋಧಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನೇ ಕ್ಯಾಬಿನೆಟ್ ಸಭೆಯಲ್ಲಿದ್ದೆ. ಚರ್ಚೆಯಲ್ಲಿ ಎಲ್ಲರೂ ಭಾಗಿಯಾಗಿದ್ದೇವೆ. ಅವೈಜ್ಞಾನಿಕ ಎನ್ನುವ ಆರೋಪಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ. ಸಚಿವ ಶಿವಾನಂದ ಪಾಟೀಲ್ ಹಾಗೂ ಎಂ.ಬಿ.ಪಾಟೀಲ ನಡುವೆ ವಾದ ವಿವಾದ ನಡೆದಿಲ್ಲ. ಉಪಹಾಪೋಗಳಿಗೆ ಎಡೆಮಾಡಿಕೊಡುವುದು ಬೇಡ ಎಂದು ಕೋರಿದರು.
ಮುಸ್ಲಿಂ ಸಮುದಾಯ ಹೆಚ್ಚಿನ ಸಂಖ್ಯೆಯ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಯಾವುದೇ ಸಮಾಜಕ್ಕೆ ಹಾನಿಯಾಗಬಾರದು ಎಂಬ ರೀತಿಯಲ್ಲಿ ತೀರ್ಮಾನ. ಎಲ್ಲರಿಗೂ ನ್ಯಾಯ ಕೊಡಿಸಬೇಕು ಎಂಬುವುದು ನಮ್ಮ ಉದ್ದೇಶ. ಮುಂದುವರಿದ ಹಾಗೂ ಹಿಂದುಳಿದ ಸಮುದಾಯಕ್ಕೆ ತೊಂದರೆಯಾಗಬಾರದು ಎಂಬ ರೀತಿಯಲ್ಲಿ ತೀರ್ಮಾನ ಮಾಡಲಾಗುತ್ತದೆ ಎಂದರು. ಆಯೋಗದ ಅಧ್ಯಕ್ಷ, ಸದಸ್ಯ ನೇಮಕ ಮಾಡಿದ್ದ ಕುಮಾರಸ್ವಾಮಿ, ಬೊಮ್ಮಾಯಿ, ಸದಸ್ಯರನ್ನು ನೇಮಕ ಮಾಡಿದ್ದು ಬಿಜೆಪಿ ಸರ್ಕಾರ. ಬಿಜೆಪಿ ಅವಧಿಯಲ್ಲಿ ಜಾತಿ ಗಣತಿ ಆಗಿದೆ. ಜಾತಿ ಗಣತಿಯನ್ನು ಅಧ್ಯಯನ ಮಾಡಿದ್ದು ಬಿಜೆಪಿ. ಬೊಮ್ಮಾಯಿ, ಯಡಿಯೂರಪ್ಪ ವರದಿ ತಿರಸ್ಕಾರ ಮಾಡಬಹುದಾಗಿತ್ತು. ಬರೀ ಅವೈಜ್ಞಾನಿಕ ಅವೈಜ್ಞಾನಿಕ ಎನ್ನುತ್ತಾರೆ. ಲೋಪದೋಷ ಇದ್ದರೇ ಒಪ್ಪಿಕೊಳ್ಳೊಣ. ಎಲ್ಲಿ ಲೋಪವಾಗಿದೆ ಎಂದು ಸ್ಪಷ್ಟವಾಗಿಲ್ಲ ಎಂದು ತಿಳಿಸಿದರು.ಸಿಇಟಿ ಪರೀಕ್ಷೆ ವೇಳೆಯಲ್ಲಿ ಜನಿವಾರ ತೆಗೆಸಿದ ಪ್ರಕರಣ ಈ ರೀತಿ ಆಗಬಾರದಿತ್ತು, ಇದು ತಪ್ಪು. ನನ್ನ ವಾಹನ ಅಪಘಾತಕ್ಕೆ ಸಂಬಂಧಿಸಿದಂತೆ ಅಪಘಾತ ಪಡಿಸಿದ ಆರೋಪಿಯನ್ನು 3 ತಿಂಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆರೋಪಿಯನ್ನು ಪೊಲೀಸರು ಬಂಧಿಸುತ್ತಾರೆಂದು ನನಗೆ ಅನಿಸಿರಲಿಲ್ಲ. ಕಲರ್ ಮ್ಯಾಚ್ ಮಾಡಲು ಎಫ್‌ಎಸ್‌ಎಲ್ ಮೊರೆ ಸಹ ಹೋಗಿದ್ದರು. ಹಿಟ್ ಆ್ಯಂಡ್ ರನ್ ಕೇಸ್ ಬಹುತೇಕ ಪತ್ತೆ ಆಗಲ್ಲ. ಅಪಘಾದ ಬಗ್ಗೆ ನನಗೆ ಯಾವುದೇ ಅನುಮಾನ ಇಲ್ಲ.-ಲಕ್ಷ್ಮೀ ಹೆಬ್ಬಾಳಕರ,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ.