ಸಮಾಜದಲ್ಲಿ ಯಾರೂ ಮೇಲಲ್ಲ, ಕೀಳಲ್ಲ: ಸರ್ದಾರ್

KannadaprabhaNewsNetwork |  
Published : Mar 22, 2026, 01:15 AM IST
21ಕೆಆರ್ ಎಂಎನ್ 5.ಜೆಪಿಜಿಕುದೂರು ಗ್ರಾಮದ ಸಂತೇಮಾಳದ ಸಭಾಂಗಣದಲ್ಲಿ ಬಲ್ಜ್ ಸಂಸ್ಥೆಯ ವತಿಯಿಂದ ತರಬೇತಿ ಪಡೆದ ಮಹಿಳೆಯರ ವಸ್ತುಗಳ ಪ್ರದರ್ಶನ ಕಾರ್ಯಕ್ರಮವನ್ನು ಸಬ್‌ ಇನ್ಸ್‌ಪೆಕ್ಟರ್ ಸರ್ದಾರ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಕುದೂರು: ಸಮಾಜ ಎನ್ನುವ ಪಕ್ಷಿ ಸುಗಮವಾಗಿ ಹಾರಬೇಕಾದರೆ ಅಲ್ಲಿ ಗಂಡು ಹೆಣ್ಣು ಎಂಬ ಎರಡು ರೆಕ್ಕೆಗಳು ಆರೋಗ್ಯವಾಗಿ ಬಲಿಷ್ಠವಾಗಿದ್ದಾಗ ಮಾತ್ರ ಸಾಧ್ಯ, ಆದ್ದರಿಂದ ಇಂದು ಯಾರೂ ಮೇಲಲ್ಲ, ಯಾರೂ ಕೀಳಲ್ಲ ಎಂಬುದನ್ನು ಪ್ರತಿ ಹಂತದಲ್ಲೂ ಸಾಬೀತಾಗುತ್ತಿದೆ ಎಂದು ಸಬ್ ಇನ್ಸ್‌ಪೆಕ್ಟರ್ ಸರ್ದಾರ್ ಹೇಳಿದರು

ಕುದೂರು: ಸಮಾಜ ಎನ್ನುವ ಪಕ್ಷಿ ಸುಗಮವಾಗಿ ಹಾರಬೇಕಾದರೆ ಅಲ್ಲಿ ಗಂಡು ಹೆಣ್ಣು ಎಂಬ ಎರಡು ರೆಕ್ಕೆಗಳು ಆರೋಗ್ಯವಾಗಿ ಬಲಿಷ್ಠವಾಗಿದ್ದಾಗ ಮಾತ್ರ ಸಾಧ್ಯ, ಆದ್ದರಿಂದ ಇಂದು ಯಾರೂ ಮೇಲಲ್ಲ, ಯಾರೂ ಕೀಳಲ್ಲ ಎಂಬುದನ್ನು ಪ್ರತಿ ಹಂತದಲ್ಲೂ ಸಾಬೀತಾಗುತ್ತಿದೆ ಎಂದು ಸಬ್ ಇನ್ಸ್‌ಪೆಕ್ಟರ್ ಸರ್ದಾರ್ ಹೇಳಿದರು.

ಕುದೂರು ಗ್ರಾಮ ಪಂಚಾಯಿತಿ ಸಂತೇಮಾಳದ ಸಭಾಂಗಣದಲ್ಲಿ ಬಲ್ಜ್ ಸಂಸ್ಥೆ ಏರ್ಪಡಿಸಿದ್ದ ತರಬೇತಿ ಪಡೆದ ಮಹಿಳೆಯರು ಸಿದ್ದಪಡಿಸಿದ ವಸ್ತುಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದಲ್ಲಿ ಇಂದು ಮಹಿಳೆಯರು ಸ್ವಯಂ ಉದ್ಯೋಗ ಮಾಡಲು ಆರ್ಥಿಕ ನೆರವಿಗೆ ಸಾಕಷ್ಟು ಯೋಜನೆಗಳನ್ನು ಪರಿಚಯಿಸಿದೆ. ಬ್ಯಾಂಕುಗಳಲ್ಲಿ ಸಾಲ ಮಂಜೂರು ಮಾಡುತ್ತದೆ. ಇದರಿಂದ ಶ್ರೇಷ್ಠ ಉದ್ಯಮಿಯಾಗುವ ಅವಕಾಶಗಳು ಪ್ರತಿಯೊಬ್ಬ ಛಲವಂತ ಮಹಿಳೆಯರ ಮುಂದೆ ಇರುತ್ತದೆ ಎಂದು ಹೇಳಿದರು.

ಕುದೂರು ಗ್ರಾಮಪಂಚಾಯ್ತಿ ಕಾರ್ಯದರ್ಶಿ ವೆಂಕಟೇಶ್ ಮಾತನಾಡಿ, ಕುಟುಂಬದ ಆರ್ಥಿಕ ಸ್ಥಿತಿಗತಿಗಳನ್ನು ಸುದಾರಿಸಲು ಮಹಿಳೆಯರು ಸ್ವಾವಲಂಬಿಗಳಾಗುತ್ತಿದ್ದಾರೆ. ಗ್ರಾಮಪಂಚಾಯ್ತಿ ವತಿಯಿಂದ ಮಹಿಳೆಯರ ತರಬೇತಿಗೆ ಪೂರ್ಣ ಸಹಕಾರ ನೀಡಲಾಗುತ್ತದೆ ಎಂದು ತಿಳಿಸಿದರು.

ಬಲ್ಜ್ ಸಂಸ್ಥೆಯ ಪೀಲ್ಡ್ ಅಸೋಸಿಯೇಟೆಡ್ ಪಲ್ಲವಿ ಮಾತನಾಡಿ, ಮಹಿಳೆಯರಿಗೆ ಅಣಬೆ ಬೆಳೆಯುವ, ಮಸಾಲೆ ವಸ್ತುಗಳನ್ನು ತಯಾರಿಸುವ, ಟೈಲರಿಂಗ್ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತರಬೇತಿ ನೀಡಲಾಗುತ್ತದೆ. ಈ ಸಮಾಜದಲ್ಲಿ ಹೇಗೆ ಧೈರ್‍ಯದಿಂದ ಮುನ್ನಡೆದರೆ ಮಹಿಳೆಯರು ತಮ್ಮ ಅಸ್ಥಿತ್ವವನ್ನು ಕಾಪಾಡಿಕೊಳ್ಳಬೇಕೆಂಬ ಬಲಾವದ ಇಚ್ಚಾಶಕ್ತಿಯನ್ನು ತರಬೇತಿ ಮೂಲಕ ನೀಡಲಾಗುತ್ತದೆ ಎಂದು ಹೇಳಿದರು.

ಬಲ್ಜ್ ಸಂಸ್ಥೆಯ ಪ್ರೋಗ್ರಾಂ ಆಫೀಸರ್ ವೆಂಕಟೇಶ್ ಮಾತನಾಡಿ, ಮಹಿಳೆಯರ ಕೌಶಲಾಭಿವೃದ್ದಿಗೆ ಉತ್ತಮ ರೀತಿಯ ತರಬೇತಿ ನೀಡಿ ಅವರಿಗೆ ಮಾರುಕಟ್ಟೆ ಕೌಶಲ್ಯವನ್ನು ತಿಳಿಸಿಕೊಡಲಾಗುತ್ತದೆ ಎಂದು ತಿಳಿಸಿದರು.

ವಲಯ ವ್ಯವಸ್ಥಾಪಕ ರಾಜೇಶ್, ಮೇಜೇನರ್ ಶ್ರೀನಿವಾಸ್, ರಾಮನಗರದ ವ್ಯವಸ್ಥಾಪಕಿ ನಿರ್ಮಲ, ಮಾಗಡಿಯ ಜಯಂತಿ, ಪಲ್ಲವಿ ಹಾಜರಿದ್ದರು.

21ಕೆಆರ್ ಎಂಎನ್ 5.ಜೆಪಿಜಿ

ಕುದೂರು ಗ್ರಾಮದ ಸಂತೇಮಾಳದ ಸಭಾಂಗಣದಲ್ಲಿ ಬಲ್ಜ್ ಸಂಸ್ಥೆಯ ವತಿಯಿಂದ ತರಬೇತಿ ಪಡೆದ ಮಹಿಳೆಯರ ವಸ್ತುಗಳ ಪ್ರದರ್ಶನ ಕಾರ್ಯಕ್ರಮವನ್ನು ಸಬ್‌ ಇನ್ಸ್‌ಪೆಕ್ಟರ್ ಸರ್ದಾರ್ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವಕುಲದ ಒಳಿತಿಗೆ ಪ್ರಾರ್ಥಿಸುವುದು ಅವಶ್ಯ: ಶಾಸಕ ಪ್ರದೀಪ್ ಈಶ್ವರ್
ಶಾಶ್ವತವಾಗಿ ಉಳಿಯುವಂತಹ ಕೆಲಸ ಮಾಡುವೆ