ಶ್ರೀ ಬಸವೇಶ್ವರ ಜಯಂತಿಯಂದು ಬೇರೆಯಾವ ಜಯಂತಿ ಆಚರಣೆ ಬೇಡ: ಪಾಂಡೋಮಟ್ಟಿ ಶ್ರೀ

KannadaprabhaNewsNetwork |  
Published : Apr 13, 2025, 02:12 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಬಸವಣ್ಣ ಸಮಾಜ ಸುಧಾರಕರು, ಲಿಂಗವಂತ ಧರ್ಮದ ಸ್ಥಾಪಕರಾಗಿದ್ದಾರೆ. ಇಡೀ ಜಗತ್ತಿಗೆ ವಚನ ಸಾಹಿತ್ಯದ ಮೂಲಕ ಬೆಳಕನ್ನು ಚೆಲ್ಲುತ್ತಾ ಕ್ರಿಯಾತ್ಮಕವಾಗಿ ಸಮಾಜ ಸುಧಾರಣೆಗಾಗಿ ಶ್ರಮಿಸಿದ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಡಾ.ಶ್ರೀ.ಗುರುಬಸವ ಮಹಾಸ್ವಾಮಿಗಳು ತಿಳಿಸಿದ್ದಾರೆ.

- ಬಸವ ಜಯಂತಿ ಜೊತೆಗೆ ಶ್ರೀ ರೇಣುಕಾ ಜಯಂತಿ ಧರ್ಮಬಾಹಿರ

- - -

ಚನ್ನಗಿರಿ: ಬಸವಣ್ಣ ಸಮಾಜ ಸುಧಾರಕರು, ಲಿಂಗವಂತ ಧರ್ಮದ ಸ್ಥಾಪಕರಾಗಿದ್ದಾರೆ. ಇಡೀ ಜಗತ್ತಿಗೆ ವಚನ ಸಾಹಿತ್ಯದ ಮೂಲಕ ಬೆಳಕನ್ನು ಚೆಲ್ಲುತ್ತಾ ಕ್ರಿಯಾತ್ಮಕವಾಗಿ ಸಮಾಜ ಸುಧಾರಣೆಗಾಗಿ ಶ್ರಮಿಸಿದ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಡಾ.ಶ್ರೀ.ಗುರುಬಸವ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಶ್ರೀ ರೇಣುಕಾ ಜಯಂತಿಯನ್ನು ಆಚರಣೆ ಮಾಡಲು ಸರ್ಕಾರ ಬೇರೆ ದಿನಾಂಕವನ್ನು ನಿಗದಿಪಡಿಸಿದೆ. ಸರ್ಕಾರ ನಿಗದಿಪಡಿಸಿದ ದಿನದಂದು ಶ್ರೀ ರೇಣುಕಾ ಜಯಂತಿ ಆಚರಿಸಲಿ. ನಮ್ಮ ಅಭ್ಯಂತರ ಇಲ್ಲ. ಬೇರೊಂದು ಸಂಘಟನೆ ಬಸವ ಜಯಂತಿ ಜೊತೆಗೆ ಶ್ರೀ ರೇಣುಕಾ ಜಯಂತಿ ಮತ್ತು ಅವರ ಭಾವಚಿತ್ರ ಇದರಲ್ಲಿ ಬಳಸಿದರೆ ಧರ್ಮಬಾಹಿರ ಆಗಲಿದೆ ಎಂದು ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

ಬಸವ ಜಯಂತಿ ಇಡೀ ನಾಡಿನ ಮಾನವ ಜನಾಂಗದ ಪ್ರತೀಕವಾಗಿದೆ. ಜಾತ್ಯತೀತವಾಗಿ ಬದುಕಿ, ಅದೇ ರೀತಿ ಸುಧಾರಣೆ ಮಾಡಿದ ಮಹಾನ್ ಮಾನವತಾವಾದಿ ಬಸವೇಶ್ವರರು. ಅಸ್ಪೃಶ್ಯರ ಆಶಾಕಿರಣ, ದಲಿತರ ಧ್ವನಿ, ಮಹಿಳೆಯರಿಗೆ ಮನ್ನಣೆ ಕೊಟ್ಟ ಮಹಾನುಭಾವ ಬಸವಣ್ಣ. ಅಂತವರಿಗೆ ಗೌರವ ಕೊಡುವುದು ನಮ್ಮೆಲ್ಲರ ಜವಾಬ್ದಾರಿ, ಕರ್ತವ್ಯ ಎಂದಿದ್ದಾರೆ.

ಆದ್ದರಿಂದ ಬಸವಣ್ಣನವರ ಭಾವಚಿತ್ರದ ಜೊತೆಗೆ 12ನೇ ಶತಮಾನದ ಶರಣರ ಭಾವಚಿತ್ರಗಳನ್ನು ಬಿಟ್ಟರೆ ಬೇರೆ ಯಾವ ಭಾವಚಿತ್ರಗಳೂ ಇರಬಾರದು. ಬಸವ ಜಯಂತಿ ದಿನ ಬೇರೆ ಯಾವುದೇ ಜಯಂತಿಯನ್ನು ಆಚರಣೆ ಮಾಡಬಾರದು ಎಂದು ಹೇಳಿದ್ದಾರೆ.

- - -

-12ಕೆಸಿಎನ್‌ಜಿ2: ಪಾಂಡೋಮಟ್ಟಿ ಶ್ರೀ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''