ಕನ್ನಡಪ್ರಭ ವಾರ್ತೆ, ತುಮಕೂರು
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಹಲವಾರು ಮನವಿಗಳ ನಂತರ 2018 ರಲ್ಲಿ ಆಟೋ ದರ ಪರಿಷ್ಕರಣೆ ಮಾಡಿ, ಕನಿಷ್ಠ 25 ರು ಹಾಗೂ ಅದರ ನಂತರದ ಒಂದು ಕಿ.ಮಿ. 12.50 ದರ ನಿಗದಿ ಮಾಡಿದ್ದರೂ ಇದುವರೆಗೂ ಜಾರಿಗೆ ಬಂದಿಲ್ಲ. ಮೀಟರ್ ಅಳವಡಿಸುವುದನ್ನು ಕಡ್ಡಾಯಗೊಳಿಸಿಲ್ಲ. ಕೂಡಲೇ ಪರಿಷ್ಕೃತ ದರ ಮತ್ತು ಆಟೋ ಮೀಟರ್ ಕಡ್ಡಾಯವಾಗಿ ಜಾರಿಗೆ ತರಬೇಕು. ಅಲ್ಲದೆ ಹೊಸದಾಗಿ ದರ ಪರಿಷ್ಕರಣೆಗೆ ಸಾರಿಗೆ ಪ್ರಾಧಿಕಾರ ಮುಂದಾಗಬೇಕು ಎಂದರು.
2018 ರಲ್ಲಿ ದರ ಪರಿಷ್ಕರಣೆ ಮಾಡಿದ ಒಂದು ಕೆ.ಜಿ.ಗ್ಯಾಸ್ ಬೆಲೆ 42 ರು. ಇತ್ತು. ಇಂದು 60 ರು.ಗಳಿಗೆ ಹೆಚ್ಚಳವಾಗಿದೆ. ಹಳೆಯ ದರವೇ ಇನ್ನು ಜಾರಿಗೆ ಬಂದಿಲ್ಲ.ಈಗಾದರೆ ಆಟೋ ಚಾಲಕರು ಬದುಕುವುದು ಹೇಗೆ ಎಂದು ಪ್ರಶ್ನಿಸಿದರು.ತುಮಕೂರು ನಗರ ಸೇರಿದಂತೆ ಜಿಲ್ಲೆಯ 10 ತಾಲೂಕುಗಳಿಂದ ಸುಮಾರು 12 ಸಾವಿರ ಆಟೋಗಳಿವೆ. ಅವುಗಳಲ್ಲಿ ಸುಮಾರು 8 ಸಾವಿರ ಆಟೋಗಳು ತುಮಕೂರು ನಗರದಲ್ಲಿಯೇ ಸಂಚರಿಸುತ್ತಿವೆ. ಆದರೆ 3184 ಆಟೋಗಳಿಗೆ ಮಾತ್ರ ಟಿಟಿಪಿ ನಂಬರ್ ನೀಡಲಾಗಿದೆ. ನಗರದಲ್ಲಿ ಸಂಚರಿಸುವ ಶೇ40ರಷ್ಟು ಆಟೋಗಳಿಗೆ ಮಾತ್ರ ನಗರದಲ್ಲಿ ಕಾರ್ಯಾಚರಿಸಲು ಪರ್ಮಿಟ್ ಇದೆ. ಉಳಿದವು ಬೇರೆ ಬೇರೆ ತಾಲೂಕುಗಳಿಂದ ಬಂದು ನಗರದಲ್ಲಿ ಸಂಚರಿಸುತ್ತಿವೆ. ಇದರಿಂದ ತುಮಕೂರು ನಗರದಲ್ಲಿ ಪರ್ಮಿಟ್ ಪಡೆದ ಆಟೋಗಳಿಗೆ ಬಾಡಿಗೆ ಕಡಿಮೆಯಾಗಿದೆ ಎಂದರು.
ಆಗಸ್ಟ್ 7 ರಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ಹಿಂದಿನ ಸಭೆಯ ನಿರ್ಣಯಗಳನ್ನು ಮೊದಲು ಜಾರಿಗೆ ತರಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಕನ್ನಡ ಕಸ್ತೂರಿ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ರವಿಕಿರಣ್, ಇಂತ್ತಿಯಾಜ್,ಶೌಕತ್ ಆಲಿ, ಇಲಿಯಾಜ್, ಯಲ್ಲಪ್ಪ, ಅಮಾನುಲ್ಲಾ, ರವಿಕುಮಾರ್ ಸೇರಿದಂತೆ ಹತ್ತಾರು ಆಟೋ ಚಾಲಕರು ಪಾಲ್ಗೊಂಡಿದ್ದರು.