ಮಂಡ್ಯ: ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಜಾಗಕ್ಕೆ ಕಾಯುತ್ತಿದ್ದೇನೆ ಹೊರತು ಯಾವುದೇ ರಾಜಕೀಯ ಮಾಡುತ್ತಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಡೀಸಿ, ಕೆಇಡಿಬಿ, ಕೈಗಾರಿಕಾ ಸಚಿವರ ಜತೆ ಮಾತಾಡಿದ್ದೇನೆ. ವಿಧಾನಸೌಧದಲ್ಲೂ ನಾನೇ ಸಭೆ ಮಾಡಿದ್ದೇನೆ. ಈ ವಿಚಾರದಲ್ಲಿ ರಾಜಕೀಯ ಇಲ್ಲ. ಕೆಲ ಕಾಂಗ್ರೆಸ್ ಶಾಸಕರು ಎದುರುಗಡೆ ಅಣ್ಣ ಎನ್ನುತ್ತಾರೆ. ನಿನ್ನ ಬಿಟ್ಟರೆ ಯಾರು ಇಲ್ಲ ಎನ್ನುತ್ತಾರೆ. ಹೇಳಿಕೆಗಳಲ್ಲಿ ಏನು ಮಾಡಿದ್ದೇನೆ ಎನ್ನುತ್ತಾರೆ. ಆ ವಿಚಾರದಲ್ಲಿ ರಾಜಕೀಯ ನಾನು ಬೆರಸಲ್ಲ ಎಂದರು.
ಜಿಲ್ಲೆಗೆ ಕಾರ್ಖಾನೆ ತರುವ ನನ್ನ ಬದ್ಧತೆ ವಿಫಲವಾಗಲ್ಲ. ಎಲ್ಲವನ್ನೂ ಕಾಲ ನಿರ್ಧಾರ ಮಾಡುತ್ತದೆ. ನನ್ನ ಮೇಲೆ ವಿಶ್ವಾಸವಿಟ್ಟಿರುವ ಯುವಕರು, ಜಿಲ್ಲೆಯ ಜನರ ಆಸೆ ಈಡೇರಿಸಲು ಭಗವಂತ ಶಕ್ತಿ ಕೊಡುತ್ತಾನೆ ಎಂದು ಹೇಳಿದರು.--------------------ವಿಶೇಷಚೇತನ ಬಾಲಕನಿಗೆ ಎಲೆಕ್ಟ್ರಿಕ್ ಆಟವಾಡುವ ಜೀಪ್ ಕೊಡಿಸಿದ ಎಚ್ಡಿಕೆ
ನಗರದ ಅಂಬೇಡ್ಕರ್ ಭವನದಲ್ಲಿ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅನುದಾನದಲ್ಲಿ ವಿಶೇಷ ಚೇತನರಿಗೆ ನೀಡುವ ವಿವಿಧ ಸಲಕರಣೆಗಳ ಕಾರ್ಯಕ್ರಮದಲ್ಲಿ ನಗರದ ಬೀಡಿ ಕಾಲೋನಿಯ ನಿವಾಸಿಗಳಾದ ಯೋಗೀಶ್ ಮತ್ತು ನಂದಿನಿ ದಂಪತಿ ಪುತ್ರ 8 ವರ್ಷದ ಜೀವಿತ್ ನಾಯಕ್ ಕೂಡ ಭಾಗವಹಿಸಿದ್ದರು.
ಬಾಲಕನ ಸಂತಸ ನೋಡಿ ಸ್ಥಳದಲ್ಲಿದ್ದ ತಾಯಿ ನಂದಿನಿ ಹಾಗೂ ಭಾಗವಹಿಸಿದ ಎಲ್ಲರೂ ಸಂತೋಷ ಪಟ್ಟರು. ಈ ವೇಳೆ ಎಚ್ಚರಿಕೆಯಿಂದ ಎಲೆಕ್ಟ್ರಿಕ್ ಜೀಪ್ ನೊಂದಿಗೆ ಆಟವಾಡುವಂತೆ ಎಚ್ಡಿಕೆ ಸಲಹೆ ನೀಡಿದರು.