ನಾದೂರು ವ್ಯಾಪ್ತಿಯಲ್ಲಿ ಮಲತ್ಯಾಜ್ಯ ಸಂಸ್ಕರಣಾ ಘಟಕ ಬೇಡ

KannadaprabhaNewsNetwork |  
Published : May 06, 2026, 01:30 AM IST
೫ಶಿರಾ೨: ಶಿರಾ ತಾಲ್ಲೂಕಿನ ನಾದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಮಲತ್ಯಾಜ್ಯ ಸಂಸ್ಕರಣಾ ಘಟಕ ಕಾಮಗಾರಿ ಅನುಷ್ಠಾನಕ್ಕೆ ಬೇಡ ಎಂದು ತಾ.ಪಂ. ಕಾರ್ಯನಿರ್ವಹಕ ಅಧಿಕಾರಿ ಹರೀಶ್ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಶಿರಾ ತಾಲ್ಲೂಕಿನ ನಾದೂರು ಗ್ರಾ ಪಂ ವ್ಯಾಪ್ತಿಯಲ್ಲಿ ಮಲತ್ಯಾಜ್ಯ ಸಂಸ್ಕರಣಾ ಘಟಕ ಕಾಮಗಾರಿಯನ್ನು ಜನಾಭಿಪ್ರಾಯ ಪಡೆಯದೇ ಏಕಾಏಕಿ ಪ್ರಾರಂಭಿಸಿರುವುದು ಸರಿಯಲ್ಲ ಎಂದು ಮುಖಂಡ ಎನ್.ಈ ಪರಮೇಶ್ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಶಿರಾ ಶಿರಾ ತಾಲ್ಲೂಕಿನ ನಾದೂರು ಗ್ರಾ ಪಂ ವ್ಯಾಪ್ತಿಯಲ್ಲಿ ಮಲತ್ಯಾಜ್ಯ ಸಂಸ್ಕರಣಾ ಘಟಕ ಕಾಮಗಾರಿಯನ್ನು ಜನಾಭಿಪ್ರಾಯ ಪಡೆಯದೇ ಏಕಾಏಕಿ ಪ್ರಾರಂಭಿಸಿರುವುದು ಸರಿಯಲ್ಲ ಎಂದು ಮುಖಂಡ ಎನ್.ಈ ಪರಮೇಶ್ ಆಕ್ರೋಶ ವ್ಯಕ್ತಪಡಿಸಿದರು. ಶಿರಾ ತಾಲೂಕಿನ ನಾದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಮಲತ್ಯಾಜ್ಯ ಸಂಸ್ಕರಣಾ ಘಟಕ ಕಾಮಗಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಾದೂರು ಸಮೀಪದ ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿ ಸರ್ಕಾರದ ಯೋಜನೆಗೆ ನಮ್ಮ ವಿರೋಧವಿಲ್ಲ ಅದರೆ ಅನುಷ್ಠಾನಕ್ಕೆ ತರಲು ಹೊರಟಿರುವ ಸ್ಥಳದಾಅಯ್ಕೆ ಸರಿ ಇಲ್ಲ ಬದಲಾವಣೆ ಮಾಡಿ ಎಂಬುದಷ್ಟೇ ನಮ್ಮ ವಾದ ಎಂದರು.ದಲಿತ ಮುಖಂಡ ದೇವರಾಜ್ ಮಾತನಾಡಿ ಶಿರಾ ತಾಲೂಕಿನ ಜೊತೆಗೆ ತುಮಕೂರಿನಿಂದ ಮಲ ತಂದು ಇಲ್ಲಿ ಸಂಸ್ಕರಣೆ ಮಾಡುವ ಅವಶ್ಯಕತೆ ಇಲ್ಲ. ಕಾಮಗಾರಿ ಅನುಷ್ಠಾನದ ಸ್ಥಳದ ಪಕ್ಕ ಕೆರೆ, ಆಶ್ರಯ ನಿವೇಶನ ಇದ್ದು ಸಾಧಕಬಾಧಕಗಳನ್ನು ನೋಡದೆ ಯೋಜನೆಯ ಅನುಷ್ಠಾನ ಬೇಡ ಎಂದರು.ಹಿಂದೂ ಸಂಘಟನೆಯ ಹರೀಶ್ ಮಾತನಾಡಿ, ಕಾಮಗಾರಿ ಆರಂಭದ ಮುಂಚೆ ಗ್ರಾಮಸ್ಥರ ಜೊತೆಗೆ ಚರ್ಚಿಸದೆ ಏಕಾಏಕಿ ತರಾತುರಿಯಲ್ಲಿ ಕಾಮಗಾರಿ ಆರಂಭದ ಹಿಂದೆ ಹುನ್ನಾರ ಅಡಗಿದೆ. ಮೂರು ದಿನಗಳಲ್ಲಿ ಜಾಗ ಹಸ್ತಾಂತರ ಪ್ರಕ್ರಿಯೆ ಮುಗಿದಿದೆ. ಇದನ್ನು ನೋಡಿದರೆ ಭ್ರಷ್ಟಾಚಾರ ನಡೆದಿದ್ದು ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.ತಾ.ಪಂ.ಮಾಜಿ ಸದಸ್ಯ ಶ್ರೀನಿವಾಸ್ ಮಾತನಾಡಿ ಯೋಜನೆಯ ಆರಂಭದಲ್ಲಿಯೇ ನಾವು ಆಕ್ಷೇಪಣೆಗಳನ್ನು ಸೂಚಿಸಿ ಮನವಿ ಕೊಟ್ಟರು ಅರೆಬರೆ ಕೆಲಸಕ್ಕೆ ೧೫ ಲಕ್ಷ ಬಿಲ್ ಪಾವತಿ ಮಾಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.ಸ್ಥಳದಲ್ಲಿದ್ದ ತಾ ಪಂ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಮಾತನಾಡಿ ನಿಮ್ಮ ಮನವಿಯನ್ನು ಅಲಿಸಿದ್ದು ಯೋಜನೆಯ ಅನುಷ್ಠಾನದ ಬಗ್ಗೆ ತಜ್ಞರಿಂದ ಮರುಪರಿಶೀಲನೆ ಮಾಡಿಸಿ ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಅಲ್ಲಿಯವರೆಗೂ ಕಾಮಗಾರಿ ಸ್ಥಗಿತಗೊಳಿಸಲಾಗುವುದು ಎಂದು ಸಭೆಯಲ್ಲಿ ಹೇಳಿದರು.ಈ ಸಂದರ್ಭದಲ್ಲಿ ನಾದೂರು ಗ್ರಾ.ಪಂ. ಅಡಳಿತಾಧಿಕಾರಿ ರಾಜಣ್ಣ, ಪಿಡಿಒ ಮಹೇಶ್, ಕಾರ್ಯದರ್ಶಿ ತಿಪ್ಪೇಸ್ವಾಮಿ ಮುಖಂಡರಾದ ನಾಗಭೂಷಣ್ ಅರಾಧ್ಯ, ಮುರುಳಿ, ಮಹದೇವ್ ,ನವೀನ್, ಭೂತರಾಜ್, ಅಶೋಕ್, ಮಧುಸೂದನ್, ಕೆಂಚಪ್ಪ, ಈರಣ್ಣ ಕೃಷ್ಣಪ್ಪ, ಹೇಮಂತ್ ಸೇರಿದಂತೆ ಹಲವರು ಹಾಜರಿದ್ದರು. ಕೋಟ್‌...

ಮಲತ್ಯಾಜ್ಯ ಸಂಸ್ಕಾರಣಾ ಘಟಕ ನಿರ್ಮಾಣದ ಕುರಿತು ಗ್ರಾಮಸಭೆ ಮೂಲಕ ಗ್ರಾಮಸ್ಥರ ಗಮನಕ್ಕೆ ತರಬೇಕಿತ್ತು. ಕನಿಷ್ಠಪಕ್ಷ ಗ್ರಾಪಂನಲ್ಲಿಯಾದರೂ ಈ ಬಗ್ಗೆ ಹೇಳಬೇಕಿತ್ತು. ಆದರೆ ಅಧಿಕಾರಿಗಳು ಯಾವ ನಿಯಮಗಳನ್ನು ಸಹ ಪಾಲಿಸದೆ ಏಕಾಏಕಿ ಇಲ್ಲಿ ಸಂಸ್ಕರಣ ಘಟಕ ಸ್ಥಾಪಿಸುತ್ತಿರುವುದು ಸರಿಯಲ್ಲ. ಜೊತೆಗೆ ಈಗಿರುವ ಜಾಗವು ಸಹ ಸರಿಯಾದುದಲ್ಲ. ಇದರಿಂದ ಗ್ರಾಮಸ್ಥರಿಗೆ ತೊಂದರೆಯಾಗಲಿದ್ದು ಗ್ರಾಮಸ್ಥರೊಂದಿಗೆ ಚರ್ಚಿಸಿ ನಂತರ ಕಾಮಗಾರಿ ಆರಂಭಿಸಲಿ.

- ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಫ್‌ಐಡಿ ಆದೇಶ ಕೈಬಿಟ್ಟು, ಸಮರ್ಪಕ ಬೀಜ, ರಸಗೊಬ್ಬರ ಪೂರೈಸಿ
ಬೀಗ ಪ್ರಕರಣ ತನಿಖೆಗೆ ಕಠಿಣ ಕ್ರಮಕ್ಕೆ ಶಿವಕುಮಾರಪ್ಪ ಒತ್ತಾಯ