ಅನುಭವ ಮಂಟಪ ಕಟ್ಟಡ ನಿರ್ಮಾಣಕ್ಕೆ ಹಣದ ಕೊರತೆ ಇಲ್ಲ: ಸಚಿವ ಈಶ್ವರ ಖಂಡ್ರೆ

KannadaprabhaNewsNetwork |  
Published : Oct 16, 2026, 01:30 AM IST
ಚಿತ್ರ 15ಬಿಡಿಆರ್58 | Kannada Prabha

ಸಾರಾಂಶ

ಅನುಭವ ಮಂಟಪ ಕಟ್ಟಡ ನಿರ್ಮಾಣಕ್ಕೆ ಹಣದ ಕೊರತೆ ಇಲ್ಲ. 2027ರ ಬಸವ ಜಯಂತಿಯೊಳಗೆ ನೂತನ ಅನುಭವ ಮಂಟಪದ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವ ಉದ್ದೇಶ ನಮ್ಮದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನುಡಿದರು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಅನುಭವ ಮಂಟಪ ಕಟ್ಟಡ ನಿರ್ಮಾಣಕ್ಕೆ ಹಣದ ಕೊರತೆ ಇಲ್ಲ. 2027ರ ಬಸವ ಜಯಂತಿಯೊಳಗೆ ನೂತನ ಅನುಭವ ಮಂಟಪದ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವ ಉದ್ದೇಶ ನಮ್ಮದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನುಡಿದರು.

ಅವರು ವಿಶ್ವಬಸವಧರ್ಮ ಅನುಭವಮಂಟಪ ಬಸವಕಲ್ಯಾಣ ವತಿಯಿಂದ ನ. 28 ಮತ್ತು 29ರಂದು 47ನೇ ಶರಣಕಮ್ಮಟ ಅನುಭವ ಮಂಟಪ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿ ಮಾತನಾಡಿ, ಶರಣಕಮ್ಮಟ ಅನುಭವಮಂಟಪ ಉತ್ಸವಕ್ಕೆ ಬಹುದೊಡ್ಡ ಇತಿಹಾಸವಿದೆ. ಬಸವಕಲ್ಯಾಣದ ಅಭಿವೃದ್ಧಿಗೆ ತಾಯಿ ಬೇರು ಆಗಿರುವ ಶರಣ ಕಮ್ಮಟ ಪ್ರತಿವರ್ಷ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಶರಣಕಮ್ಮಟ ಆರಂಭಿಸಿದವರು ಲಿಂ ಡಾ.ಚನ್ನಬಸವ ಪಟ್ಟದ್ದೇವರು. ಅವರಿಗೆ ಸಹಕಾರಿಯಾಗಿ ನಿಂತವರು ಡಾ.ಭೀಮಣ್ಣ ಖಂಡ್ರೆ ಅವರು. ಪೂಜ್ಯರ ಸಂಕಲ್ಪದಂತೆ ಶರಣಕಮ್ಮಟದಿಂದಲೇ ಬಸವಕಲ್ಯಾಣದ ಅಭಿವೃದ್ಧಿ ಪ್ರಾಧಿಕಾರ, ನೂತನ ಅನುಭವಮಂಟಪ, ಶರಣರ ಸ್ಮಾರಕಗಳ ರಕ್ಷಣೆ, ಪರುಷ ಕಟ್ಟೆಯ ಅಭಿವೃದ್ಧಿ ಮುಂತಾದ ಕಾರ್ಯಗಳು ನಡೆಯುತ್ತಿವೆ.

ಪೂಜ್ಯ ಬಸವಲಿಂಗ ಪಟ್ಟದ್ದೇವರ ಅವಿರತ ಪ್ರಯತ್ನದಿಂದ ನೂತನ ಅನುಭವಮಂಟಪ ಸಾಕಾರವಾಗುತ್ತಿರುವುದು ನಮ್ಮೆಲ್ಲರಿಗೆ ಸಂತೋಷ ತಂದಿದೆ. ಬಸವಕಲ್ಯಾಣ ಸಮಗ್ರ ಅಭಿವೃದ್ಧಿಯ ಯೋಜನೆ ರೂಪಿಸಲಾಗುತ್ತಿದೆ ಎಂದರು.

ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹಾಗೂ ಪೂಜ್ಯ ಗುರುಬಸವ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಸಭೆ ನಡೆಯಿತು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾಗಿ ಬಸವಕಲ್ಯಾಣದ ಶಾಸಕ ಶರಣು ಸಲಗರ ಅವರನ್ನು ನೇಮಕ ಮಾಡಲಾಯಿತು.

ಅನುಭವಮಂಟಪ ಉತ್ಸವದ ಯಶಸ್ವಿಗಾಗಿ ಬಸವರಾಜ ಧನ್ನೂರು, ನಿರ್ಮಲಾ ಶಿವಣಕರ, ಕುಪೇಂದ್ರ ಪಾಟೀಲ, ಡಾ.ಸಂಗೀತಾ ಮಂಠಾಳೆ, ಸಿದ್ಧಯ್ಯ ಕಾವಡಿಮಠ, ವಿಶ್ವನಾಥಪ್ಪ ಬಿರಾದಾರ, ರವೀಂದ್ರ ಕೊಳಕೂರು, ಸುಭಾಷ ನಾಗರಾಳೆ ಮುಂತಾದವರು ಮೌಲಿಕ ಸಲಹೆ ಸೂಚನೆಗಳು ನೀಡಿದರು.

ಪೂಜ್ಯ ಶಿವಾನಂದ ಸ್ವಾಮಿ, ಪೂಜ್ಯ ಮಹಾಲಿಂಗ ಸ್ವಾಮಿ, ಪೂಜ್ಯ ಸಿದ್ಧಬಸವ ಸ್ವಾಮಿ, ಪೂಜ್ಯ ಪ್ರಭುಲಿಂಗ ಸ್ವಾಮಿ, ಪೂಜ್ಯ ಬಸವದೇವರು, ಪೂಜ್ಯ ಸುಗುಣಾತಾಯಿ, ಪೂಜ್ಯ ಹಾಲಮ್ಮತಾಯಿ, ಪೂಜ್ಯ ಶ್ರೀಶೈಲ ದೇವರು ಉಪಸ್ಥಿತರಿದ್ದರು.

ಬಾಬು ವಾಲಿ ಸ್ವಾಗತಿಸಿ, ರಾಜು ಜುಬರೆ ನಿರೂಪಿಸಿ, ದೀಪಕ ಠಮಕೆ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈಭವದಿಂದ ಜರುಗಿದ ಶ್ರೀರಂಗಪಟ್ಟಣ ದಸರಾ
೧೦೦ ಅಡಿಗೆ ಕುಸಿದ ಕೆಆರ್‌ಎಸ್ ನೀರಿನ ಮಟ್ಟ