ಸ್ಕೂಲ್‌ವ್ಯಾನ್‌ ಡಿಕ್ಕಿ: ಶಾಲಾ ವೇಳೆಯಲ್ಲಿ ಟಿಪ್ಪರ್‌ ಸಂಚಾರಕ್ಕೆ ಬ್ರೇಕ್‌

KannadaprabhaNewsNetwork |  
Published : Mar 27, 2026, 01:45 AM IST
ಶಾಲಾ ವೇಳೆ ಟಿಪ್ಪರ್‌ ಸಂಚರಿಸದಂತೆ | Kannada Prabha

ಸಾರಾಂಶ

ಇತ್ತೀಚೆಗೆ ತಾಲೂಕಿನ ಚಿಕ್ಕತುಪ್ಪೂರ್‌ ಗೇಟ್‌ ಬಳಿ ಟಿಪ್ಪರ್‌ ಮತ್ತು ಶಾಲಾ ವಾಹನದ ಭೀಕರ ಅಪಘಾತದ ಬಳಿಕ ಕೊನೆಗೂ ಸರ್ಕಾರ ಎಚ್ಚೆತ್ತಿದ್ದು, ಶಾಲಾ ಅವಧಿಯಲ್ಲಿ ಟಿಪ್ಪರ್‌ಗಳ ಸಂಚಾರಕ್ಕೆ ತಡೆ ಕೊಟ್ಟಿದೆ. ಶಾಲೆ ಶುರು ಮತ್ತು ಬಿಡುವ ವೇಳೆಯಲ್ಲಿ ಟಿಪ್ಪರ್‌ಗಳು ಸಂಚರಿಸಬಾರದೆಂದು ಜಿಲ್ಲಾ ಮತ್ತು ಭೂ ವಿಜ್ಞಾನ ಇಲಾಖೆಯ ಭೂವಿಜ್ಞಾನಿ ರಾಜೇಶ್‌ ಸೂಚನೆ ಹೊರಡಿಸಿದ್ದಾರೆ.

ಬೆಳಗ್ಗೆ ೮.೩೦ರಿಂದ ೯.೩೦, ಮಧ್ಯಾಹ್ನ ೩.೩೦ರಿಂದ ೪ರವರೆಗೆ ಸಂಚಾರ ಬೇಡ

---ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಇತ್ತೀಚೆಗೆ ತಾಲೂಕಿನ ಚಿಕ್ಕತುಪ್ಪೂರ್‌ ಗೇಟ್‌ ಬಳಿ ಟಿಪ್ಪರ್‌ ಮತ್ತು ಶಾಲಾ ವಾಹನದ ಭೀಕರ ಅಪಘಾತದ ಬಳಿಕ ಕೊನೆಗೂ ಸರ್ಕಾರ ಎಚ್ಚೆತ್ತಿದ್ದು, ಶಾಲಾ ಅವಧಿಯಲ್ಲಿ ಟಿಪ್ಪರ್‌ಗಳ ಸಂಚಾರಕ್ಕೆ ತಡೆ ಕೊಟ್ಟಿದೆ. ಶಾಲೆ ಶುರು ಮತ್ತು ಬಿಡುವ ವೇಳೆಯಲ್ಲಿ ಟಿಪ್ಪರ್‌ಗಳು ಸಂಚರಿಸಬಾರದೆಂದು ಜಿಲ್ಲಾ ಮತ್ತು ಭೂ ವಿಜ್ಞಾನ ಇಲಾಖೆಯ ಭೂವಿಜ್ಞಾನಿ ರಾಜೇಶ್‌ ಸೂಚನೆ ಹೊರಡಿಸಿದ್ದಾರೆ.

ಪ್ರತಿ ದಿನ ಬೆಳಗ್ಗೆ ೮.೩೦ರಿಂದ ೯.೩೦ರ ತನಕ ಮತ್ತು ಶಾಲಾ ಬಿಡುವ ಮುನ್ನ ೪ರಿಂದ ೫ ಗಂಟೆವರೆಗೆ ಸಾರ್ವಜನಿಕ ಹಿತದೃಷ್ಟಿಯಿಂದ ಟಿಪ್ಪರ್‌ಗಳು ಸಂಚರಿಸದಂತೆ ಎಚ್ಚರವಹಿಸಬೇಕು ಎಂದು ಜಿಲ್ಲೆಯ ಎಲ್ಲಾ ಕ್ವಾರಿ ಹಾಗೂ ಕ್ರಸರ್‌ ಮಾಲೀಕರಿಗೆ ಸೂಚಿಸಿದ್ದಾರೆ.

ಮಾ.17ರಂದು ಸಂಭವಿಸಿದ ಅಪಘಾತದಿಂದಾಗಿ ಚಾಲಕ ಹಾಗೂ ನಾಲ್ವರು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದರು. ಇದಾದ ಬಳಿಕ ಸಾರ್ವಜನಿಕರಿಂದ ಟಿಪ್ಪರ್‌ಗಳ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಭೂವಿಜ್ಞಾನಿ ರಾಜೇಶ್‌ ಅವರು ತಮ್ಮ ಆದೇಶಪ್ರತಿಯಲ್ಲಿ ಪತ್ರಿಕೆಗಳು, ರೈತ ಸಂಘಟನೆಗಳು, ಮಾಜಿ ಶಾಸಕರು, ಶಿಂಡನಪುರ, ಕಂದೇಗಾಲ ಗ್ರಾಮಸ್ಥರ ಪ್ರತಿಭಟನೆಯನ್ನು ಮೆಲುಕು ಹಾಕಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀ ಶಂಕರರ ಜೀವನವೇ ನಮಗೆ ಸಂದೇಶ: ಶ್ರೀ ವಿಜಯ ಗುರೂಜೀ
ವೈರಮುಡಿ ಉತ್ಸವದಲ್ಲಿ ಲೋಪವಾಗದಂತೆ ಕಟ್ಟೆಚ್ಚರ ವಹಿಸಿ: ಐಜಿಪಿ ಬೋರಲಿಂಗಯ್ಯ ಸೂಚನೆ