ಕೊನೇ ಭಾಗಕ್ಕಿಲ್ಲ ನೀರು: ಅಧಿಕಾರಿಗಳ ವಿರುದ್ಧ ಶಾಸಕ ಎಚ್‌.ಟಿ. ಮಂಜು ಗರಂ

KannadaprabhaNewsNetwork | Published : Oct 11, 2024 11:50 PM

ಸಾರಾಂಶ

ಕೆ.ಆರ್.ಪೇಟೆ ತಾಲೂಕಿನ ಗುಡ್ಡೇನಹಳ್ಳಿ, ವಿಠಲಾಪುರ, ಮಡುವಿನಕೋಡಿ, ಯಗಚಗುಪ್ಪೆ, ಹೊಸಕೋಟೆ, ಕತ್ತರಘಟ್ಟ ಸೇರಿದಂತೆ ಹಲವು ಗ್ರಾಮಗಳ ನಾಲಾ ಏರಿ ಮೇಲೆ ನೀರಾವರಿ ಅಧಿಕಾರಿಗಳೊಂದಿಗೆ ಸಂಚಾರ ನಡೆಸಿದ ಶಾಸಕರು ಕಾಲುವೆಗಳ ಹೂಳು ತೆಗೆಸಿ ಕೊನೇ ಭಾಗಕ್ಕೆ ನೀರು ಹರಿಸದಿರುವುದನ್ನು ಕಂಡು ಎಂಜಿನಿಯರ್‌ಗಳ ಮೇಲೆ ಹರಿಹಾಯ್ದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಹೇಮಾವತಿ ನಾಲಾ ವ್ಯಾಪ್ತಿ ಕಾಲುವೆಗಳ ಮೂಲಕ ಕೊನೇ ಭಾಗಕ್ಕೆ ನೀರು ಹರಿಸದ ಮತ್ತು ಕೆರೆಗಳಿಗೆ ನೀರು ತುಂಬಿಸದ ಹೇಮಾವತಿ ನೀರಾವರಿ ಇಲಾಖೆ ಅಧಿಕಾರಿಗಳನ್ನು ಶಾಸಕ ಎಚ್.ಟಿ.ಮಂಜು ತೀವ್ರ ತರಾಟೆಗೆ ತೆಗೆದುಕೊಂಡರು.

ತಾಲೂಕಿನ ಗುಡ್ಡೇನಹಳ್ಳಿ, ವಿಠಲಾಪುರ, ಮಡುವಿನಕೋಡಿ, ಯಗಚಗುಪ್ಪೆ, ಹೊಸಕೋಟೆ, ಕತ್ತರಘಟ್ಟ ಸೇರಿದಂತೆ ಹಲವು ಗ್ರಾಮಗಳ ನಾಲಾ ಏರಿ ಮೇಲೆ ನೀರಾವರಿ ಅಧಿಕಾರಿಗಳೊಂದಿಗೆ ಸಂಚಾರ ನಡೆಸಿದ ಶಾಸಕರು ಕಾಲುವೆಗಳ ಹೂಳು ತೆಗೆಸಿ ಕೊನೇ ಭಾಗಕ್ಕೆ ನೀರು ಹರಿಸದಿರುವುದನ್ನು ಕಂಡು ಎಂಜಿನಿಯರ್‌ಗಳ ಮೇಲೆ ಹರಿಹಾಯ್ದರು.

ತಾಲೂಕಿನ ಹೇಮಾವತಿ ಮುಖ್ಯ ಕಾಲುವೆ ಮತ್ತು ನದಿ ಅಣೆಕಟ್ಟೆ ನಾಲೆಗಳಿಗೆ ನೀರು ಬಿಟ್ಟು ಮೂರು ತಿಂಗಳಾಗಿದೆ. ಆದರೆ, ಇದುವರೆಗೂ ನಾಲೆ ಕೊನೇ ಭಾಗಕ್ಕೆ ಸಮರ್ಪಕ ನೀರು ಪೂರೈಕೆಯಾಗಿಲ್ಲ. ನೀರಿಲ್ಲದೇ, ರೈತರ ಬೆಳೆಗಳು ಒಣಗುತ್ತಿವೆ ಎಂದು ಕಿಡಿಕಾರಿದರು.

ಹೇಮಾವತಿ ಮುಖ್ಯ ನಾಲೆಯಲ್ಲಿ ನೀರು ಹರಿಯುತ್ತಿದ್ದರೂ ತಾಲೂಕಿನಲ್ಲಿ ಹಲವು ಕೆರೆಗಳಿಗೆ ಹೇಮೆ ನೀರು ತುಂಬಿಸುವಲ್ಲಿ ಎಂಜಿನಿಯರ್‌ಗಳು ವಿಫಲರಾಗಿದ್ದಾರೆ. ನಿಮ್ಮ ಬೇಜವಾಬ್ದಾರಿಗೆ ರೈತರು ಬಲಿಯಾಗಬೇಕಾಗಿದೆ. ಹೂಳು ತೆಗೆಯದಿರುವುದರಿಂದ ಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿಯಲು ಸಾಧ್ಯಾವಾಗದೆ ಕೊನೇ ಭಾಗಕ್ಕೆ ನೀರು ಹರಿಯುತ್ತಿಲ್ಲ. ಇದರಿಂದ ರೈತರಿಗೆ ಬಾರಿ ನಷ್ಟವಾಗುತ್ತಿದೆ ಎಂದು ಸ್ಥಳದಲ್ಲಿದ್ದ ರೈತರು ಕೂಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತಾಲೂಕಿನ ನಾಲಾ ವ್ಯಾಪ್ತಿಯಲ್ಲಿ ಕಾಲುವೆಗಳ ಹೂಳೆತ್ತಲು ಮತ್ತು ಜಂಗಲ್ ಕಟ್ಟಿಂಗ್‌ಗಾಗಿ ಹಣ ಬಿಡುಗಡೆಯಾಗಿದೆ. ಗುತ್ತಿಗೆದಾರರು ಅಲ್ಲಲ್ಲಿ ಹೂಳು ಮತ್ತು ಜಂಗಲ್ ಕಟ್ಟಿಂಗ್ ಮಾಡಿದಂತೆ ನಾಟಕ ಮಾಡಿದ್ದಾರೆ. ಆಯಾ ನಾಲಾ ವ್ಯಾಪ್ತಿಯ ಉಸ್ತುವಾರಿ ಜವಾಬ್ದಾರಿ ಹೊತ್ತಿರುವ ಎಂನಿಯರ್‌ಗಳು ಗುತ್ತಿಗೆದಾರರ ಜೊತೆ ಶಾಮೀಲಾಗಿ ಹೂಳೆತುವ ನಾಟಕದಲ್ಲಿ ಪಾತ್ರದಾರಿಗಳಾಗಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ರೈತರು ಒತ್ತಾಯಿಸಿದರು.

ನಾಲಾ ಬಯಲಿನಲ್ಲಿ ಎಲ್ಲೂ ಕೂಡ ಹೂಳು ಮತ್ತು ಜಂಗಲ್ ತೆಗೆದಿರುವುದು ಕಂಡುಬರಲಿಲ್ಲ ಇದನ್ನು ಕಣ್ಣಾರೆ ಕಂಡ ಶಾಸಕರು ಬೆಳೆಗಳಿಗೆ ಹಾಕಿದ ಬಂಡವಾಳ ಕೂಡ ರೈತರಿಗೆ ಸಿಗದಂತಾಗಿದೆ. ಒಬ್ಬ ಶಾಸಕನಾಗಿ ರೈತರಿಗೆ ಏನು ಉತ್ತರ ನೀಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಲ್ಟ್ ಮತ್ತು ಜಂಗಲ್ ತೆಗೆಯದಿರುವುದು ಕಣ್ಣಾರೆ ಕಂಡ ಮುಖ್ಯ ಎಂಜಿನಿಯರ್ ಸಿ.ಇ.ಮಂಜುನಾಥ್ ಕೂಡಲೇ ಎರಡು ಮೂರು ದಿನಗಳ ಕಾಲ ನೀರು ನಿಲ್ಲಿಸಿ ಹೂಳು ತೆಗೆಸಿ ನೀರು ಸರಾಗವಾಗಿ ಹರಿಯಲು ಅನುಕೂಲ ಮಾಡಿಕೊಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡದರು.

ಬಿಲ್ ಪಾವತಿಸಬೇಡಿ:

ಕಾಮಗಾರಿ ವೀಕ್ಷೀಸಿದ ಸಿ.ಇ.ಮಂಜುನಾಥ್ ಎಲ್ಲೂ ಕೂಡ ಗುತ್ತಿಗೆದಾರರು ಸರಿಯಾಗಿ ಕಾಮಗಾರಿ ನಡೆಸಿದಿರುವುದು ಕಂಡು ಬಂದ ಹಿನ್ನೆಲೆ ಮುಂದಿನ ಆದೇಶದ ವರೆಗೆ ಗುತ್ತಿಗೆದಾರರಿಗೆ ಬಿಲ್ ಪಾವತಿಸದಂತೆ ನಿರ್ದೇಶನ ನೀಡಿದರು.

ಅಧಿಕಾರಿಗಳಲ್ಲೆ ಭಿನಾಭಿಪ್ರಾಯ:

ಕಾಮಗಾರಿ ವೀಕ್ಷಣೆ ವೇಳೆ ಮೇಲಧಿಕಾರಿಗಳ ಮಾತಿಗೆ ಕೆಳಹಂತದ ಅಧಿಕಾರಿಗಳು ಸರಿಯಾದ ಉತ್ತರ ನೀಡದೆ ಅವರಲ್ಲೇ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಕಾರ್ಯಪಾಲಕ ಎಂಜಿನಿಯರ್ ಆನಂದ್ ಅವರ ಮಾತುಗಳಿಗೆ ಅವರ ಕೈಕೆಳಗಿನ ಎಂಜಿನಿಯರ್‌ಗಳು ಲಘು ಉತ್ತರ ನೀಡುತ್ತಿದ್ದರು.

ಇದರಿಂದ ಕೆರಳಿದ ಶಾಸಕ ಮಂಜು ಮೊದಲು ಕೆಳ ಹಂತದ ಎಂಜಿನಿಯರ್‌ಗಳು ಮೇಲಸ್ತರದ ಅಧಿಕಾರಿಗಳಿಗೆ ಗೌರವ ಕೊಡುವುದನ್ನು ಕಲಿತು ಕೊಳ್ಳಬೇಕು. ನಿಮ್ಮ ನಡುವಿನ ಸಮನ್ವಯತೆಯ ಕೊರತೆಯಿಂದ ರೈತರು ನರಳುವಂತಾಗಿದೆ. ನಿಯಮಾನುಸಾರ ರೈತರ ಕೆಲಸ ಮಾಡುವುದಾದರೆ ಇಲ್ಲಿರಿ. ಇಲ್ಲದ್ದಿದ್ದರೆ ನಿಮ್ಮೆಲ್ಲರನ್ನೂ ವರ್ಗಾವಣೆ ಮಾಡಲು ಸರ್ಕಾರಕ್ಕೆ ಬರೆಯಬೇಕಾಗುತ್ತದೆಂದು ಶಾಸಕರು ಎಚ್ಚರಿಸಿದರು.

ಈ ವೇಳೆ ಗೊರೂರು ಜಲಾಶಯದ ಮುಖ್ಯ ಅಧೀಕ್ಷಕ ಇಂಜಿನಿಯರ್ ಮಂಜುನಾಥ್, ಎಸ್.ಇ.ಕಿಶೋರ್, ಇ.ಇ.ಆನಂದ್, ಎ.ಇ.ಇ ವಿಶ್ವನಾಥ್, ಸುಧಾ, ಎ.ಇ.ರಾಘವೇಂದ್ರ, ಜೆ.ಇ.ಗಳಾದ ಮೋಹನ್, ಮಹೇಶ್ ಒಳಗೊಂಡಂತೆ ಹಲವು

Share this article