ನಾಯಕರ ಮುಂದಾಳತ್ವದಲ್ಲಿ ಪಕ್ಷಾತೀತ ಚುನಾವಣೆ

KannadaprabhaNewsNetwork |  
Published : Aug 09, 2025, 12:10 AM IST
ಚ.ಕಿತ್ತೂರು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಚನ್ನಮನ ಕಿತ್ತೂರು ಬಿಡಿಸಿಸಿ ಬ್ಯಾಂಕ್ ಚುನಾವಣೆ ಪಕ್ಷಾತೀತವಾಗಿ ಮಾಡಬೇಕೆಂಬುವುದು ನಮ್ಮ ಬಯಕೆ. ಅದಕ್ಕಾಗಿ ಜಿಲ್ಲೆಯ ಎಲ್ಲ ಪಕ್ಷದ ನಾಯಕರ ಮುಂದಾಳತ್ವದಲ್ಲಿ ಪಕ್ಷಾತೀತವಾಗಿ ಚುನಾವಣೆಗೆ ಮುಂದಾಗಿದ್ದೇವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನಮನ ಕಿತ್ತೂರು

ಬಿಡಿಸಿಸಿ ಬ್ಯಾಂಕ್ ಚುನಾವಣೆ ಪಕ್ಷಾತೀತವಾಗಿ ಮಾಡಬೇಕೆಂಬುವುದು ನಮ್ಮ ಬಯಕೆ. ಅದಕ್ಕಾಗಿ ಜಿಲ್ಲೆಯ ಎಲ್ಲ ಪಕ್ಷದ ನಾಯಕರ ಮುಂದಾಳತ್ವದಲ್ಲಿ ಪಕ್ಷಾತೀತವಾಗಿ ಚುನಾವಣೆಗೆ ಮುಂದಾಗಿದ್ದೇವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಸಮೀಪದ ಗದ್ದಿಕರವಿನಕೊಪ್ಪ ಸಮೀಪದ ಬಿ.ಎಸ್.ಯಡಿಯೂರಪ್ಪ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಬೈಲಹೊಂಗಲ ಮತ್ತು ಕಿತ್ತೂರು ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರ ಸೌಹಾರ್ದಯುತ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ರೈತರಿಗೆ ಸಾಕಷ್ಟು ಸಾಲ ಸೌಲಭ್ಯಗಳನ್ನು ವದಗಿಸುತ್ತಿದೆ. ಶೂನ್ಯ ಬಡ್ಡಿದರಲ್ಲಿ ರೈತರಿಗೆ ಸಾಲ ವದಗಿಸಿ ನೆರವಾಗುತ್ತಿದೆ. ಕಳೆದ ೩೦ ವರ್ಷಗಳಿಂದ ಬೈಲಹೊಂಗಲ ಮತ್ತು ಕಿತ್ತೂರು ಅಖಂಡ ತಾಲೂಕಿನ ಬಿಡಿಸಿಸಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಮಾಜಿ ಶಾಸಕ ಮಹಾಂತೇಶ ದೊಡಗೌಡರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ರೈತರು ಶ್ಯೂನ್ಯ ಬಡ್ಡಿ ದರದಲ್ಲಿ ಹೆಚ್ಚು ಸಾಲ ಸೌಲಭ್ಯ ವದಗಿಸಿ ರೈತರ ಅಭಿವೃದ್ಧಿ ಜೊತೆಗೆ ಸಹಕಾರಿ ಸಂಘಗಳನ್ನು ಸದೃಢಗೊಳಿಸಿದ್ದಾರೆ ಎಂದರು.

ಬೈಲಹೊಂಗಲದಿಂದ ಕಿತ್ತೂರು ತಾಲೂಕು ವಿಭಜನೆಯಿಂದ ಈಗ ಹೊಸದಾಗಿ ಮತ್ತೊಂದು ನಿರ್ದೇಶಕ ಸ್ಥಾನವಿದೆ. ಅಲ್ಲಿ ನಮ್ಮ ಪೆನಲ್ ಅಭ್ಯರ್ಥಿಯನ್ನಾಗಿ ಮಾಜಿ ಸಚಿವ ದಿ.ಡಿ.ಬಿ.ಇನಾಮದಾರ ಪುತ್ರ ವಿಕ್ರಮ ಇನಾಮದಾರ ನಮ್ಮ ತಂಡದ ಅಭ್ಯರ್ಥಿಯನ್ನಾಗಿಸಿದ್ದೇವೆ. ಬೈಲಹೊಂಗಲದಿಂದ ಮಹಾಂತೇಶ ದೊಡಗೌಡರ ಅಭ್ಯರ್ಥಿಯಾಗಿದ್ದಾರೆ. ಇಬ್ಬರನ್ನು ಎರಡು ತಾಲೂಕಿನ ಎಲ್ಲ ಪ್ರಾಥಮಿಕ ಸಹಕಾರಿ ಸಂಘಗಳ ಪದಾಧಿಕಾರಿಗಳು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಕೋಟ್‌....

ಮಾಜಿ ಶಾಸಕ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡಗೌಡರ, ಮಾಜಿ ಸಂಸದ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅಣ್ಣಾಸಾಹೇಬ ಜೊಲ್ಲೆ, ಚಿದಾನಂದ ಸವದಿ, ವಿಕ್ರಮ ಇನಾಮದಾರ, ಮಾಜಿ ಶಾಸಕ ಜಗದೀಶ ಮೆಟಗುಡ ಮಾತನಾಡಿದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗೋಡೆ, ರಾಜೇಂದ್ರ ಅಂಕಲಗಿ, ಅರವಿಂದ ಪಾಟೀಲ, ವೀರುಪಾಕ್ಷ ಮಾಮನಿ, ಡಾ.ಬಸವರಾಜ ಪರವಣ್ಣವರ, ಶಂಕರ ಮಾಡಲಗಿ, ಚನ್ನಬಸಪ್ಪ ಮೊಕಾಶಿ, ವಿಜಯ ಮೆಟಗುಡ, ಪ್ರಕಾಶ ಮೂಗಬಸವ, ಸುನೀಲ ಮುರಕುಂಬಿ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರು, ಪ್ರಾಥಮಿಕ ಸಹಕಾರಿ ಸಂಘಗಳ ಪದಾಧಿಕಾರಿಗಳು, ರೈತರು ಇದ್ದರು.-----------

ಕೋಟ್...

ಈಗಿರುವ ಕಾಂಗ್ರೆಸ್ ಸರ್ಕಾರವಂತು ರೈತರ ಸಾಲಮನ್ನಾ ಮಾಡುವುದಿಲ್ಲ. ಮುಂದೆ ನಮ್ಮ ಬಿಜೆಪಿ ಸರ್ಕಾರ ಬಂದಾಗ ಸಾಲಮನ್ನಾ. ಆದರೆ, ರೈತರಿಗೆ ಇದು ಅನೂಕುಲವಲ್ಲವೆ. ಹಾಗಾಗಿ ರೈತರು ಪ್ರಾಥಮಿಕ ಸಹಕಾರಿ ಸಂಘಗಳ ಮೂಲಕ ಹೆಚ್ಚೆಚ್ಚು ಸಾಲ ಪಡಡೆದುಕೊಳ್ಳಿ.

-ಬಾಲಚಂದ್ರ ಜಾರಕಿಹೊಳಿ, ಶಾಸಕರು.----------

PREV

Recommended Stories

ಬೆಳ್ತಂಗಡಿ: ಆಧಾರ್‌ ನೋಂದಣಿ, ತಿದ್ದುಪಡಿ ಶಿಬಿರ
ಲಾಯಿಲ ರಾಘವೇಂದ್ರ ಮಠ ಅಭಿವೃದ್ಧಿಗೆ 20 ಲಕ್ಷ ರು. ನೆರವು: ಶಾಸಕ ಗವಿಯಪ್ಪ ಭರವಸೆ