ತಾಯಿನಾಡಿಗಿಂತ ಮಿಗಿಲಾದುದು ಯಾವುದು ಇಲ್ಲ

KannadaprabhaNewsNetwork | Published : Aug 4, 2024 1:20 AM
Follow Us

ಸಾರಾಂಶ

ಶಹಾಬಂದರ ಗ್ರಾಮದಲ್ಲಿ ನಡೆದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ಬಾಳಪ್ಪ ವಟವಟಿ ಸ್ವಾಗತ ಅದ್ಧೂರಿ ಸ್ವಾಗತ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಯಮಕನಮರಡಿ

ತಾಯಿ ಮತ್ತು ತಾಯಿನಾಡಿಗಿಂತ ಮಿಗಿಲಾದುದು ಯಾವುದು ಇಲ್ಲ. ತಾಯಿನಾಡಿನ ಸೇವೆಗಾಗಿ ಸುದೀರ್ಘ 24 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ಬಾಳಪ್ಪ ವಟವಟಿ ಯುವಕರಿಗೆ ಮಾದರಿಯಾಗಿದ್ದಾರೆ ಎಂದು ಶಹಾಬಂದರ ಗ್ರಾಪಂ ಪಿಡಿಒ ರಮೇಶ ತೇಲಿ ಹೇಳಿದರು.

ಶಹಾಬಂದರ ಗ್ರಾಮದಲ್ಲಿ ನಡೆದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ಬಾಳಪ್ಪ ವಟವಟಿ ಸ್ವಾಗತ ಅದ್ಧೂರಿ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.

ಶ್ರೀ ಶಿವಾನಂದ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಗಂಗರಾಮ ಪಾಟೀಲ, ಮಾಜಿ ಗ್ರಾಪಂ ಅಧ್ಯಕ್ಷ ಶಂಕರ ಡೊಂಬಾರಿ ಪ್ರಕಾಶ್ ಮಠದವರು, ಕರವೇ ಜಿಲ್ಲಾ ಉಪಾಧ್ಯಕ್ಷ ರಾಜು ನಾಶಿಪುಡಿ, ಗ್ರಾಮದ ಹಿರಿಯರಾದ ಶಿವರಾಯಿ ಬುಕನಟ್ಟಿ, ಮಾರುತಿ ಬಿರಂಜಿ, ಬಸ್ಸು ಮಲ್ಲನಾಯಕ, ನಿಂಗಪ್ಪ ಜಕ್ಕನವರ, ಮಹಾಬಾಳೇಶ್ವರ ಬಡಿಗೇರ, ಮಾರುತಿ ನಡಗಡ್ಡಿ, ಪಿಕೆಪಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ ಹಗೆದಾಳ, ಸಿದ್ದಪ್ಪ ಮುದಮಾಶನವರ, ರಾಮು ಶಿರಣ್ಣವರ, ಎಸ್.ಡಿ.ಎಂ.ಸಿ. ಅಧ್ಯಕ್ಷ ಸೂಮಲಿಂಗ ಮುದಮಾಶನವರ, ಉಪಾದ್ಯಕ್ಷ ಪ್ರಕಾಶ ಬಿರಂಜಿ, ಗ್ರಾಮ ಆಡಳಿತಾಧಿಕಾರಿ ವಿಠ್ಠಲ ಬುಕ್ಕನಟ್ಟಿ, ಶಿಕ್ಷಕರಾದ ಬಿ.ಎಸ್. ಜಕಾತಿ, ಪ್ರಕಾಶ್ ಜಕ್ಕನವರ, ಪರಶುರಾಮ ಬೀರನೋಳ್ಳಿ, ಸೈನಿಕರಾದ ಎಸ್ ಕಡಿಮನಿ, ಬಸವರಾಜ ಆದಿ, ಶ್ರೀಶೈಲ ಜೆ.ಸಿ ,ಭೀಮಪ್ಪ, ಸಂತೋಷ ಶಕೀಲ್‌, ಬಹದ್ದೂರ ಅಪ್ಪುಬಾಯಿ, ದಸ್ತಗೀರಸಾಬ ಮದಾರಸಾಬ ಒಂಟಿಗಾರ, ಮೌಲ ಸನದಿ, ಅಸ್ಕರ್‌ ಅಲಿ ಕಾಶ್ಯಾನಟ್ಟಿ, ದಸ್ತಗೀರ್‌ ಫಕ್ರುಸಾಬ ಗಿಡಮುಲ್ಲಾ, ಹುಸೇನ್‌ ಮೋದಿನಸಾಬ ತಹಸಿಲ್ದಾರ್, ರಫೀಕ್‌ ಮಕ್ತುಮಸಾಬ್‌ ಬಡೆಬಾಯಿ, ಮೋದಿನಸಾಬ್ ಫಕ್ರುಸಾಬ್‌ ಶಂಭುಮುಲ್ಲಾ, ಇನೂಸ್‌ ಹುಸೇನಸಾಬ್‌ ಒಂಟಿಗಾರ, ಮೋದಿನಸಾಬ್‌ ಮಕ್ತುಮಸಾಬ್‌ ಬೇಪಾರಿ, ಖಾದೀರ್ ಮಕ್ತುಮಸಾಬ್‌ ಬಢೇಬಾಯಿ, ಸಲೀಂ ಮಹಮ್ಮದ್ ಹುಸೇನ್ ಮುಲ್ಲಾ, ರಜಾಕ್‌ ಫಕ್ರುಸಾಬ ಗಿಡಮುಲ್ಲಾ, ಈರಪ್ಪ ನಾವ್ಹಿ , ಇಮ್ರಾನ್ ಒಂಟಿಗಾರ, ಸುಲ್ತಾನ್ ಒಂಟಿಗಾರ, ಸರಪ್ರಾಜ ದೇಸಾಯಿ, ವಾಲ್ಮೀಕಿ ಕರೆಪ್ಪ ಹೆಗ್ಗನಾಯಕ, ಲಗಮಣ್ಣ ಗಡಕರಿ, ಗ್ರಾಪಂ ಸದಸ್ಯರು ಹಾಲಿ ಮತ್ತು ಮಾಜಿ ಸೈನಿಕರು ಶಹಾಬಂದರ ಗ್ರಾಮದ ಯುವಕರು, ಸೈನಿಕರು, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.