ಮರಳು ಬ್ಲಾಕ್‌ಗಳನ್ನು ಕಾಯ್ದಿರಿಸಲು ಸೂಚನೆ

KannadaprabhaNewsNetwork |  
Published : Feb 21, 2025, 12:48 AM IST
ಪೋಟೋ: 19ಎಸ್‌ಎಂಜಿಕೆಪಿ05ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಮರಳು ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿದರು. | Kannada Prabha

ಸಾರಾಂಶ

ಶಿವಮೊಗ್ಗ: ಜಿಲ್ಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವ್ಯಾಪ್ತಿಗೊಳಪಡುವ ವಿವಿಧ ತಾಲೂಕುಗಳಲ್ಲಿನ ಮರಳು ಬ್ಲಾಕ್‌ಗಳನ್ನು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ವಿವಿಧ ಕಾರ್ಯಾನುಷ್ಠಾನ ಇಲಾಖೆಗಳಿಂದ ಸರ್ಕಾರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಿರಿಸುವಂತೆ ಕೋರಿರುವ ಹಿನ್ನೆಲೆಯಲ್ಲಿ ಸರ್ಕಾರದ ನಿಬಂಧನೆಗಳಿಗೊಳಪಟ್ಟು ಕಾಯ್ದಿರಿಸಲು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ ನೀಡಿದರು.

ಶಿವಮೊಗ್ಗ: ಜಿಲ್ಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವ್ಯಾಪ್ತಿಗೊಳಪಡುವ ವಿವಿಧ ತಾಲೂಕುಗಳಲ್ಲಿನ ಮರಳು ಬ್ಲಾಕ್‌ಗಳನ್ನು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ವಿವಿಧ ಕಾರ್ಯಾನುಷ್ಠಾನ ಇಲಾಖೆಗಳಿಂದ ಸರ್ಕಾರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಿರಿಸುವಂತೆ ಕೋರಿರುವ ಹಿನ್ನೆಲೆಯಲ್ಲಿ ಸರ್ಕಾರದ ನಿಬಂಧನೆಗಳಿಗೊಳಪಟ್ಟು ಕಾಯ್ದಿರಿಸಲು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ ನೀಡಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಅವರು ಮಾತನಾಡಿ, ಮರಳು ಬ್ಲಾಕ್‌ಗಳನ್ನು ನಿರ್ವಹಿಸುವ ಕಾರ್ಯಾನುಷ್ಠಾನ ಇಲಾಖೆಯ ಜವಾಬ್ದಾರಿಯುತ ಹಿರಿಯ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಳ್ಳುವ ಬ್ಲಾಕ್‌ಗಳನ್ನು ಯಾವುದೇ ಲೋಪಗಳಿಗೆ ಅವಕಾಶವಿಲ್ಲದಂತೆ ಹಾಗೂ ದೂರುಗಳು ಬಾರದಂತೆ ವ್ಯವಸ್ಥಿತವಾಗಿ ನಿರ್ವಹಿಸಬೇಕಲ್ಲದೇ, ಸ್ಥಳದಲ್ಲಿ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳುವಂತೆ ಸೂಚಿಸಿದರು.ಪ್ರತಿ ಮರಳು ಬ್ಲಾಕ್‌ಗಳಲ್ಲಿ ನಿಯಮಾನುಸಾರ ವೇಬ್ರಿಡ್ಜ್, ಕಣ್ಗಾವಲಿಗಾಗಿ ಸಿ.ಸಿ.ಕ್ಯಾಮರಾ ಅಳವಡಿಸಿಕೊಳ್ಳುವಂತೆ ಸೂಚಿಸಿದ ಅವರು, ಮರಳು ಬ್ಲಾಕ್‌ಗಳನ್ನು ವಶಕ್ಕೆ ಪಡೆದವರು ಕಟ್ಟುನಿಟ್ಟಾಗಿ ನಿಯಮವನ್ನು ಪಾಲಿಸಿರುವ ಬಗ್ಗೆ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನಾ ವರದಿ ನೀಡಿದ ನಂತರ ಬ್ಲಾಕ್‌ಗಳ ಹಸ್ತಾಂತರಕ್ಕೆ ಕ್ರಮ ವಹಿಸಲಾಗುವುದು. ಈ ನಿಯಮ ಅನುಸರಣೆಯಲ್ಲಿ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆಗಳು, ದೂರುಗಳು ಬಂದಲ್ಲಿ ತಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.ಇದೇ ಸಂದರ್ಭದಲ್ಲಿ ಸರ್ಕಾರಿ ಕಾಮಗಾರಿಗಳಿಗೆ ಕಾಯ್ದಿರಿಸಿದ ಮರಳು ಬ್ಲಾಕ್‌ಗಳನ್ನು ಹೊರತುಪಡಿಸಿ, ಉಳಿದ ಬ್ಲಾಕ್‌ಗಳನ್ನು ಮೀಸಲಾತಿಯನ್ವಯ ವಿಲೇಮಾಡಲು ಸೂಚಿಸಿದ ಅವರು, ಸರ್ಕಾರದ ಮಾರ್ಗಸೂಚಿಯಂತೆ ಉಪಸ್ಥಿತ ಸಮಿತಿ ಸದಸ್ಯರ ಸಮ್ಮುಖದಲ್ಲಿ ೨೫ ಮರಳು ಬ್ಲಾಕ್‌ಗಳಿಗೆ ಲಾಟರಿ ಮೂಲಕ ಮೀಸಲಾತಿ ನಿಗದಿಪಡಿಸಿ ಘೋಷಿಸಿದರು.ಉಪಖನಿಜ ಕಾಯ್ದೆಗಳ ನಿಯಮಾನುಸಾರ ಈ ಹಿಂದೆ ಜಿಲ್ಲಾ ವ್ಯಾಪ್ತಿಯಲ್ಲಿ ಈಗಾಗಲೇ ಗುರುತಿಸಲಾಗಿದ್ದ ಮರಳು ಬ್ಲಾಕ್‌ಗಳನ್ನು ವಿಲೇಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದು ತಿಳಿಸಿದ ಅವರು, ಮೀಸಲಿರಿಸಿದ ಮರಳು ಬ್ಲಾಕ್‌ಗಳನ್ನು ಹೊರತುಪಡಿಸಿ, ಉಳಿದವುಗಳಿಗೆ ಮೀಸಲಾತಿ ಪ್ರಕಟಿಸಿರುವುದಾಗಿ ತಿಳಿಸಿದರು.ಹುಣಸವಳ್ಳಿ-1 (ಪ.ಜಾ), ನಂಬಳ (ಇತರೆ), ಮಳಲೂರು-1(ಪ.ಪಂ.), ತೂದೂರು-1 (ಇತರೆ), ಬೇಗುವಳ್ಳಿ-3 (ಇತರೆ), ಬೇಗುವಳ್ಳಿ-1 (ಇತರೆ), ದಬ್ಬಣಗದ್ದೆ-3 (ಇತರೆ), ಸಿದ್ಲೀಪುರ-2 (ವಿಕಲಚೇತನ), ಗುರುವಿನಕಟ್ಟೆ-(ಪ.ಜಾ.), ದಬ್ಬಣಗದ್ದೆ-1 (ಇತರೆ), ಕೂಡಲಿ- 1 (ಇತರೆ), ದಬ್ಬಣಗದ್ದೆ-6 (ಇತರೆ), ಸುತ್ತಾ-2 (ಇತರೆ), ದಬ್ಬಣಗದ್ದೆ-7 (ಪ.ಜಾ), ಬಗ್ಗೋಡಿಗೆ-2 (ಇತರೆ), ಮಣಶೆಟ್ಟಿ- (ಇತರೆ), ಸನ್ಯಾಸಿಕೋಡಮಗ್ಗಿ-2 (ಪ.ಪಂ.), ತೂದೂರು-3 (ಇತರೆ), ಮಳಲೂರು-2 (ಇತರೆ), ಅರೆಹಳ್ಳಿ-( ಇತರೆ), ಸೋನಲೆ-1 (ಇತರೆ), ಕೂಡಲಿ-1 (ವಿಕಲಚೇತನ ಪ.ಜಾ.) ಮರಳು ಬ್ಲಾಕ್‌ಗಳಿಗೆ ಮೀಸಲಾತಿ ನಿಗದಿಪಡಿಸಿ ಪ್ರಕಟಿಸಿದರು.ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಹಿರಿಯ ಭೂವಿಜ್ಞಾನಿ ಪಿ.ಕೆ.ನಾಯ್ಕ್ ಸೇರಿದಂತೆ ಸಂಬಂಧಿತ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''