ಕನ್ನಡಪ್ರಭ ವಾರ್ತೆ ರಾಮನಗರ
ಚಂದ್ರಶೇಖರ್ ಮೇಲೆ ೫೦ ಪ್ರಕರಣ: ಇನ್ನು ಬಂಧಿತ ಚಂದ್ರಶೇಖರ್ @ ಮಾಟ ಇದಲ್ಲದೇ ಸಾಕಷ್ಟು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಆತನ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಸುಲಿಗೆಗೆ ಸಂಬಂಧಿಸಿದಂತೆ ಸುಮಾರು ೫೦ ಪ್ರಕರಣಗಳು ದಾಖಲಾಗಿದ್ದವು. ೧೦ಕ್ಕೂ ಹೆಚ್ಚು ಪೊಲೀಸ್ ಠಾಣೆಗಳಲ್ಲಿ ವಾರಂಟ್ ಬಾಕಿ ಇತ್ತು. ಎಸ್.ಪಿ.ಕಾರ್ತಿಕ್ ರೆಡ್ಡಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ದಿನಕರ್ ಶೆಟ್ಟಿ ನೇತೃತ್ವದಲ್ಲಿ ಬಿಡದಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶಂಕರ ನಾಯ್ಕ, ದೇವರಾಜು, ಪಿಎಸ್‌ಐ ನರಸಿಂಹಮೂರ್ತಿ, ಸಿಬ್ಬಂದಿ ಶ್ರೀನಿವಾಸ್, ಅನ್ವರ್, ವಸಂತ್, ನರೇಶ್, ಪ್ರಜ್ವಲ್, ಸಂತೋಷ್, ಸದ್ದಾಂ, ಧನಂಜಯ್ಯ, ೪೧೬ ದೇವೆಂದ್ರ, ಗಂಗಾಧರ್, ಮಹದೇವಯ್ಯ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮನೆಗಳ್ಳನ ಬಂಧನ:ರಾಮನಗರ: ಮನೆ ಕಳ್ಳತನ ಮಾಡುತ್ತಿದ್ದವನನ್ನು ಬಂಧಿಸಿ ಒಂದು ದ್ವಿಚಕ್ರ ವಾಹನ ಸೇರಿ ಸುಮಾರು ೬.೫ ಲಕ್ಷ ರು. ಮೌಲ್ಯದ ೮೦ ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ರಾಮನಗರ ಗ್ರಾಮಾಂತರ ಪೊಲೀಸರು ಸಫಲರಾಗಿದ್ದಾರೆ. ಬೆಂಗಳೂರಿನ ಹಳೇಗುಡದಹಳ್ಳಿಯ ನಾಗರಾಜ @ ಡೈಮಂಡ್ ನಾಗ (೩೨) ಬಂಧಿತ. ನಾಗರಾಜ ಸುಮಾರು ೧೯ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿಯೇ ಇವನ ಮೇಲೆ ೪ ಪ್ರಕರಣಗಳು ದಾಖಲಾಗಿದ್ದವು. ಎಸ್.ಪಿ. ಕಾರ್ತಿಕ್ ರೆಡ್ಡಿ, ಡಿವೈಎಸ್‌ಪಿ, ದಿನಕರ್ ಶೆಟ್ಟಿ ಮಾರ್ಗದರ್ಶನದಲ್ಲಿ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ಪಿ.ಐ.ರಮೇಶ್ ನೇತೃತ್ವದಲ್ಲಿ ಪಿಎಸ್‌ಐಗಳಾದ ಜಾರ್ಜ್ ಪ್ರಕಾಶ್, ಸಿದ್ದರಾಜು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.