ಕನ್ನಡಪ್ರಭ ವಾರ್ತೆ ಮಂಗಳೂರು
ವರ್ಟೆಕ್ಸ್ ಮ್ಯಾನೇಜ್ಡ್ ವರ್ಕ್‌ಸ್ಪೇಸ್ ವತಿಯಿಂದ ಯಶಸ್ವಿ ಸ್ವದೇಶಿ ಐಟಿ ಉದ್ಯಮಗಳಲ್ಲಿ ಒಂದಾದ ನೋವಿಗೋ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕರೊಂದಿಗೆ ‘ದಿ ನೋವಿಗೋ ಸ್ಟೋರಿ’ ಎಂಬ ಶೀರ್ಷಿಕೆಯಲ್ಲಿ ಸಂವಾದ ಕಾರ್ಯಕ್ರಮ ಜು.೧೮ರಂದು ಬೆಜೈ-ಕಾಪಿಕಾಡ್‌ನ ಅಜಂತಾ ಬಿಸಿನೆಸ್ ಸೆಂಟರ್‌ನಲ್ಲಿ ನಡೆಯಿತು. ವರ್ಟೆಕ್ಸ್ ಮ್ಯಾನೇಜ್ಡ್ ವರ್ಕ್‌ಸ್ಪೇಸ್‌ನ ವ್ಯವಸ್ಥಾಪಕ ಪಾಲುದಾರ ಗುರುದತ್ತ ಶೆಣೈ ಅವರು ‘ಜಾಗತಿಕ ತಂತ್ರಜ್ಞಾನ ಶ್ರೇಷ್ಟತೆಯಲ್ಲಿ ಮಂಗಳೂರಿನ ದಾರಿದೀಪವಾಗಿ ನೋವಿಗೊ ಸೊಲ್ಯೂಷನ್ಸ್’ ಎಂಬ ವಿಷಯದ ಬಗ್ಗೆ ಸಂವಾದ ನಡೆಸಿಕೊಟ್ಟರು. ಉದ್ಯಮಶೀಲತೆ, ಸ್ಥಳೀಯ ಪ್ರತಿಭೆ ಮತ್ತು ದೂರದೃಷ್ಟಿಯ ಚಿಂತನೆಗೆ ಕಾರ್ಯಕ್ರಮದಲ್ಲಿ ವಿಶೇಷ ಒತ್ತು ನೀಡಲಾಗಿತ್ತು. ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಪ್ರವೀಣ್ ಕುಮಾರ್ ಕಲ್ಬಾವಿ ಮಾತನಾಡಿ, ಆರಂಭಿಕ ಇನ್ಫೋಸಿಸ್ ಉದ್ಯೋಗಿಯಾಗಿದ್ದು, ಮೂರು ಕ್ರಿಯಾತ್ಮಕ ಸಹ-ಸಂಸ್ಥಾಪಕರೊಂದಿಗೆ ಉದ್ಯಮಿಯಾಗಿ ಟೆಕ್ ಜಗತ್ತಿಗೆ ಪಾದಾರ್ಪಣೆ ಮಾಡಿದೆ. ದುಬೈಗೆ ಹೋಲಿಸಿದರೆ ಅಮೆರಿಕ ಹೆಚ್ಚು ಸ್ಪರ್ಧಾತ್ಮಕ ಮಾರುಕಟ್ಟೆಯಾಗಿದೆ. ಆದರೂ, ನಮ್ಮ ಪ್ರಯಾಣದ ಉದ್ದಕ್ಕೂ, ನಾವು ಬೇರೂರಿದ್ದೇವೆ ನಮ್ಮ ಉದ್ಯೋಗಿಗಳಲ್ಲಿ ಶೇ.೫೦ರಷ್ಟು ಮಂದಿ ಮಂಗಳೂರಿನವರು ಇದ್ದಾರೆ ಎಂದರು.ಸಹ-ಸಂಸ್ಥಾಪಕ ಮತ್ತು ಸಿಟಿಒ ಮೊಹಮ್ಮದ್ ಹನೀಫ್ ಮಾತನಾಡಿ, ನಾವು ಅಪಾಯವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಸಮತೋಲಿತತೆಯನ್ನು ಒಟ್ಟಿಗೆ ತಂದಿದ್ದೇವೆ. ಈ ಸಂಯೋಜನೆಯು ನಮಗೆ ಫಲಿತಾಂಶ ನೀಡಿದೆ. ಮಧ್ಯಪ್ರಾಚ್ಯ ವಿಶೇಷವಾಗಿ ದುಬೈ, ನೋವಿಗೊಗೆ ಆರಂಭಿಕ ಬ್ರೇಕ್ ನೀಡಿತು ಎಂದರು.ಸಹ-ಸಂಸ್ಥಾಪಕ ಮತ್ತು ಸಿಸಿಒ ಶಿಹಾಬ್ ಖಲಂದರ್ ಮಾತನಾಡಿ, ನೋವಿಗೊದ ಗುರುತು ಅದರ ಜನ್ಮಸ್ಥಳದೊಂದಿಗೆ ಆಳವಾಗಿ ಹೆಣೆದುಕೊಂಡಿದೆ. ಮಂಗಳೂರು ನಮ್ಮ ಹೃದಯಕ್ಕೆ ಹತ್ತಿರವಾಗಿದೆ. ನಮ್ಮ ಐವತ್ತು ಪ್ರತಿಶತ ಉದ್ಯೋಗಿಗಳು ಸ್ವದೇಶಿಯಾಗಿದ್ದಾರೆ ಮತ್ತು ನಾವು ಆ ಮಾನದಂಡವನ್ನು ಕಾಪಾಡಿಕೊಳ್ಳಲು ಉದ್ದೇಶಿಸಿದ್ದೇವೆ ಎಂದರು. ಹಾಂಗ್ಯೋ ಐಸ್ ಕ್ರೀಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಜಿ. ಪೈ ಅವರು ನೋವಿಗೋ ಸಂಸ್ಥಾಪಕರನ್ನು ಸನ್ಮಾನಿಸಿದರು. ಇಂಡಿಯಂಟಾ ಇ-ಮೊಬಿಲಿಟಿ ಪ್ರೈ. ಲಿಮಿಟೆಡ್, ಸ್ಥಾಪಕ ಮತ್ತು ಸಿಇಒ ಡಾ. ಆರನ್ ಡಿಸೋಜಾ ಅವರ ಪರವಾಗಿ ತಂಡದ ಸದಸ್ಯರಾದ ವಸಂತಿ ಮತ್ತು ಶ್ರಾವ್ಯ ಪ್ರತಿನಿಧಿಸಿದರು. ಅಪ್‌ಡಾಪ್ಟ್ ಸಿಎಸ್‌ಆರ್ ಪ್ರೈ.ಲಿ. ಸಹ-ಸಂಸ್ಥಾಪಕ ಮತ್ತು ಸಿಇಒ ಮಿಥುನ್ ಸುವರ್ಣ ಗೌರವ ಸ್ವೀಕರಿಸಿದರು. ವ್ಯವಸ್ಥಾಪಕ ಪಾಲುದಾರ ಮಂಗಲ್‌ದೀಪ್ ಇದ್ದರು.ವರ್ಟೆಕ್ಸ್ ಮ್ಯಾನೇಜ್ಡ್ ವರ್ಕ್‌ಸ್ಪೇಸ್‌ನ ವ್ಯವಸ್ಥಾಪಕ ಪಾಲುದಾರ ಮಹೇಶ್ ಶೆಟ್ಟಿ ವಂದಿಸಿದರು. ಮಂಗಳೂರು ಅನಾಲಿಟಿಕ್ಸ್ ಮತ್ತು ರಿಸರ್ಚ್ ಕನ್ಸಲ್ಟಿಂಗ್‌ನ ವ್ಯವಹಾರ ಅಭಿವೃದ್ಧಿ ವ್ಯವಸ್ಥಾಪಕಿ ರೂಪಾ ಭಟ್ ಜಾಕೋಬ್ ನಿರೂಪಿಸಿದರು.