ನರೇಗಾ ಯೋಜನೆ: 2ನೇ ವರ್ಷವೂ ಶೇ.100 ಗುರಿ ಸಾಧನೆ

KannadaprabhaNewsNetwork |  
Published : Apr 14, 2025, 01:24 AM IST
ಮನರೇಗಾ ಯೋಜನೆಯಡಿ ಕೆಲಸ ನಡೆಯುತ್ತಿರುವುದು. | Kannada Prabha

ಸಾರಾಂಶ

2023-24ರ ಅವಧಿಯಲ್ಲೂ ಶೇ.100 ಸಾಧನೆ ಮಾಡಲಾಗಿತ್ತು.

ಕಾರವಾರ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2024-25ನೇ ಸಾಲಿನಲ್ಲಿ ನಿಗದಿತ ಮಾನವ ದಿನಗಳನ್ನು ಸೃಜಿಸುವಲ್ಲಿ ಶೇ.100 ಸಾಧನೆ ಮಾಡಲಾಗಿದೆ.2023-24ರ ಅವಧಿಯಲ್ಲೂ ಶೇ.100 ಸಾಧನೆ ಮಾಡಲಾಗಿತ್ತು. ಸತತ ಎರಡನೇ ವರ್ಷವೂ ಗುರಿ ಸಾಧಿಸುವ ಮೂಲಕ ವಿಶೇಷ ಸಾಧನೆ ಮಾಡಿದೆ. ಆಯುಕ್ತಾಲಯದಿಂದ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ 17 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ನೀಡಲಾಗಿದ್ದು, ಈ ಗುರಿಗೆ ಎದುರಾಗಿ ಒಟ್ಟು 17.46 ಲಕ್ಷ ಮಾನವ ದಿನಗಳನ್ನು ಸೃಜಿಸುವ ಮೂಲಕ ಶೇ. 102.73 ರಷ್ಟು ಸಾಧನೆ ಮಾಡಲಾಗಿದೆ. ಕಳೆದ 2023-24ನೇ ಸಾಲಿನಲ್ಲಿ 18 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿಗೆ ಎದುರಾಗಿ 18.29 ಲಕ್ಷ ಮಾನವ ದಿನಗಳನ್ನು ಸೃಜಿಸುವ ಮೂಲಕ ಶೇ.101.61 ಸಾಧನೆ ಮಾಡಲಾಗಿತ್ತು.

ಅಂಕೋಲಾ ತಾಲೂಕಿನಲ್ಲಿ 1.33 ಲಕ್ಷ ಮಾನವ ದಿನಗಳ ಸೃಜನೆಯ ಗುರಿಗೆ 1.40 ಲಕ್ಷ ಮಾನವ ದಿನಗಳನ್ನು ಸೃಜಿಸಿದ್ದು, ಭಟ್ಕಳದಲ್ಲಿ 33 ಸಾವಿರ ಗುರಿಗೆ 47 ಸಾವಿರ, ದಾಂಡೇಲಿಯಲ್ಲಿ 23 ಸಾವಿರ ಗುರಿಗೆ 22 ಸಾವಿರ, ಹಳಿಯಾಳದಲ್ಲಿ 2.31 ಲಕ್ಷ ಗುರಿಗೆ 2.42 ಲಕ್ಷ, ಹೊನ್ನಾವರದಲ್ಲಿ 93 ಸಾವಿರ ಗುರಿಗೆ 1.06 ಲಕ್ಷ, ಕಾರವಾರದಲ್ಲಿ 79 ಸಾವಿರ ಗುರಿಗೆ 82 ಸಾವಿರ, ಕುಮಟಾದಲ್ಲಿ 83 ಸಾವಿರ ಗುರಿಗೆ 82 ಸಾವಿರ, ಮುಂಡಗೋಡದಲ್ಲಿ 2.41 ಲಕ್ಷ ಗುರಿಗೆ 2.41 ಲಕ್ಷ, ಸಿದ್ದಾಪುರದಲ್ಲಿ 1.39 ಲಕ್ಷ ಗುರಿಗೆ 1.52 ಲಕ್ಷ, ಶಿರಸಿಯಲ್ಲಿ 2.10 ಲಕ್ಷ ಗುರಿಗೆ 2.22 ಲಕ್ಷ, ಜೋಯಿಡಾ 1.02 ಲಕ್ಷ ಗುರಿಗೆ 94 ಸಾವಿರ, ಯಲ್ಲಾಪುರದಲ್ಲಿ 3.24 ಲಕ್ಷ ಗುರಿಗೆ 3.15 ಲಕ್ಷ ಮಾನವ ದಿನಗಳನ್ನು ಸೃಜಿಸಿದ್ದು ಒಟ್ಟು ₹95.30 ಕೋಟಿ ಆರ್ಥಿಕ ಸಾಧನೆ ಮಾಡಲಾಗಿದೆ.

ಜಿಲ್ಲೆಯಾದ್ಯಂತ ಏ.1ರಿಂದ ಜೂ.30ರವರೆಗೆ ಸ್ತ್ರೀ ಚೇತನ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಬಾರಿಯೂ ಗುರಿ ಸಾಧಿಸಿ ಹ್ಯಾಟ್ರಿಕ್ ಸಾಧನೆ ಮಾಡಲಾಗುವುದು ಎನ್ನುತ್ತಾರೆ ಜಿಪಂ ಈಶ್ವರಕುಮಾರ ಕಾಂದೂ ಸಿಇಒ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...