ನೃತ್ಯನಿಕೇತನ ಕೇಂದ್ರ, ರಾಜ್ಯಮಟ್ಟದಲ್ಲಿ ಪ್ರಜ್ವಲಿಸಿ: ಶಾಸಕ ರಘುಮೂರ್ತಿ

KannadaprabhaNewsNetwork |  
Published : Jan 24, 2024, 02:03 AM IST
ಪೋಟೋ೨೩ಸಿಎಲ್‌ಕೆ೦೧ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶಿಸಿದರು. | Kannada Prabha

ಸಾರಾಂಶ

ಚಳ್ಳಕೆರೆ ತಾಲೂಕಿನಂತಹ ಬಯಲುಸೀಮೆಯಲ್ಲಿ ಸಂಗೀತ ಮತ್ತು ನೃತ್ಯದ ತಂಗಾಳಿ ಹಿತವಾಗಿ ಬೀಸುವಂತೆ ಮಾಡುವಲ್ಲಿ ನೃತ್ಯನಿಕೇತನ ಪ್ರಾಚಾರ್ಯರಾದ ಸುಧಾ ಮೂರ್ತಿ, ಸಂಚಾಲಕ ಕೃಷ್ಣಮೂರ್ತಿರಾವ್‌ ಅವರ ಸೇವಾಕಾರ್ಯ ಪ್ರಶಂಸನೀಯ.

ಚಳ್ಳಕೆರೆ: ಚಳ್ಳಕೆರೆ ತಾಲೂಕಿನಂತಹ ಬಯಲುಸೀಮೆಯಲ್ಲಿ ಸಂಗೀತ ಮತ್ತು ನೃತ್ಯದ ತಂಗಾಳಿ ಹಿತವಾಗಿ ಬೀಸುವಂತೆ ಮಾಡುವಲ್ಲಿ ನೃತ್ಯನಿಕೇತನ ಪ್ರಾಚಾರ್ಯರಾದ ಸುಧಾ ಮೂರ್ತಿ, ಸಂಚಾಲಕ ಕೃಷ್ಣಮೂರ್ತಿರಾವ್‌ ಅವರ ಸೇವಾಕಾರ್ಯ ಪ್ರಶಂಸನೀಯ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ನಗರದ ಕೃಷ್ಣ ವಿದ್ಯಾರ್ಥಿನಿಯಲದ ಸಭಾಂಗಣದಲ್ಲಿ ನೃತ್ಯನಿಕೇತನ ಶಾಸ್ತ್ರಿಯ ನೃತ್ಯ ಸಂಗೀತ ಶಿಕ್ಷಣ ಕೇಂದ್ರ, ಕನ್ನಡ ರಾಜ್ಯೋತ್ಸವದ ಸುವರ್ಣ ಮಹೋತ್ಸವ, ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಹಾಗೂ ನೃತ್ಯನಿಕೇತನದ ೩೮ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಬಡಾವಣೆಗಳಲ್ಲಿ ಭರತನಾಟ್ಯದ ಸೊಬಗು ಕಾರ್ಯಕ್ರಮದಲ್ಲಿ ಜ್ಯೋತಿಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕಳೆದ ಸುಮಾರು 15 ವರ್ಷಗಳಿಂದ ನೃತ್ಯನಿಕೇತನದ ಹಲವಾರು ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿ, ಮಕ್ಕಳು ಅಭಿನಯಿಸುವ ವಿಭಿನ್ನ ನೃತ್ಯ ಹಾಗೂ ಪ್ರದರ್ಶಿಸುವ ವಿಶೇಷ ಭಂಗಿಗಳನ್ನು ಕಂಡು ಸಂತೋಷಪಟ್ಟಿದ್ದೇನೆ. ಮಕ್ಕಳಿಗೆ ನೃತ್ಯ, ಸಂಗೀತ ಅಭ್ಯಾಸ ಮಾಡಿಸುವುದು ಸುಲಭದ ಮಾತಲ್ಲ. ಕೇವಲ ನಗರ ಪ್ರದೇಶವಷ್ಟೇಯಲ್ಲದೆ, ತಾಲೂಕಿನ ಗ್ರಾಮಾಂತರ ಪ್ರದೇಶಗಳು ಹಾಗೂ ರಾಜ್ಯದ ವಿವಿಧ ಭಾಗಗಳಲ್ಲೂ ಸಹ ನೃತ್ಯನಿಕೇತನ ಸಂಸ್ಥೆ ಉತ್ತಮ ಕಾರ್ಯಕ್ರಮ ನೀಡುವ ಮೂಲಕ ರಾಜ್ಯದಲ್ಲಿ ನೃತ್ಯನಿಕೇತನ ತನ್ನದೇಯಾದ ವಿಶೇಷ ಖ್ಯಾತಿ ಪಡೆದಿದೆ. ಚಳ್ಳಕೆರೆಯ ಕಲಾವಿದರು, ಕಲಾಪೋಷಕರು ಹಾಗೂ ಜನತೆಯ ಸಹಕಾರದಿಂದ ಈ ಸಂಸ್ಥೆ ಶೀಘ್ರದಲ್ಲೇ ತನ್ನ ಸುವರ್ಣಮಹೋತ್ಸವವನ್ನು ಆಚರಿಸುವಂತಾಗಲಿ ಎಂದರು.

ಇದೇ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಿರಿಯ ರಂಗಕರ್ಮಿ ಪಿ.ತಿಪ್ಪೇಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನೃತ್ಯ ನಿಕೇತನ ಈ ಭಾಗದ ನೃತ್ಯಕಲೆಯ ಜೀವಾಳವಾಗಿದೆ. ಸಾವಿರಾರು ಬಾಲ ಕಲಾವಿದರು ಹಾಗೂ ಹಿರಿಯ ಕಲಾವಿದರನ್ನು ಬೆಳೆಸುವಲ್ಲಿ ಹೆಚ್ಚು ಶ್ರಮವಹಿಸಿದ್ದಾರೆ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ ಹಲವಾರು ಕ್ಷೇತ್ರಗಳಲ್ಲಿ ತೊಡಗಿಕೊಂಡು ಸಮಾಜಮುಖಿ ಕಾರ್ಯ ಮಾಡುವ ಮೂಲಕ ಹೆಸರುವಾಸಿಯಾಗಿದ್ದು, ಅವರಿಗೆ ಸಮಾಜ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನೃತ್ಯ ನಿಕೇತನ ಬಾಲಕಲಾವಿದೆ, ತಾಲೂಕಿನ ತಿಪ್ಪಾರೆಡ್ಡಿಹಳ್ಳಿ ಗ್ರಾಮದ ಮಾನಸರಿಗೆ ನಾಟ್ಯಕಲಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಿವೈಎಸ್ಪಿ ರಾಜಣ್ಣ, ನಗರಸಭಾ ಸದಸ್ಯ ಎಸ್.ಜಯಣ್ಣ, ಸೂರ್ಯಪ್ರಭ ವೀರಭದ್ರಪ್ಪ, ಪುಷ್ಪಾ ಚಂದ್ರನಾಯ್ಕ, ವೆಂಕಟಪ್ಪ, ಎಂ.ಎನ್.ಮೃತ್ಯುಂಜಯ, ಹನುಮಂತಪ್ಪ ಮುಂತಾದವರು ಭಾಗವಹಿಸಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ