ಪ್ರಕೃತಿಯೆಡೆಗೆ ತಿರುಗಲು ಎನ್‌ಎಸ್‌ಎಸ್ ಸಹಕಾರಿ: ಡಾ.ವಿನ್ಸೆಂಟ್ ಆಳ್ವ

KannadaprabhaNewsNetwork |  
Published : Oct 04, 2026, 03:00 AM IST
02ಎಂಜಿಎಂ | Kannada Prabha

ಸಾರಾಂಶ

ಜೆನ್‌ಜಿ ಜನಾಂಗಕ್ಕೆ ಹಿತವಚನ ಇಷ್ಟವಲ್ಲ, ಜೆನ್‌ಜಿ‌ಗಳು ಅಂತರ್ಮುಖಿಗಳಾಗಿದ್ದಾರೆ ಎಂಬೆಲ್ಲಾ ಸಂಗತಿಗಳ ನಡುವೆ ಪ್ರಕೃತಿಯ ನಡುವೆ ಶಿಬಿರ ನಡೆಸಲು ಅವಕಾಶ ಸಿಕ್ಕಿದೆ. ಶ್ರಮದಾನದ ಜೊತೆ ಶಿಸ್ತು, ಸಹಬಾಳ್ವೆ, ಸಹಜೀವನವನ್ನು ರೂಪಿಸಿಕೊಳ್ಳಿ ಎಂದು ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ ಹೇಳಿದರು.

ಉಡುಪಿ: ಜೆನ್‌ಜಿ ಜನಾಂಗಕ್ಕೆ ಹಿತವಚನ ಇಷ್ಟವಲ್ಲ, ಜೆನ್‌ಜಿ‌ಗಳು ಅಂತರ್ಮುಖಿಗಳಾಗಿದ್ದಾರೆ ಎಂಬೆಲ್ಲಾ ಸಂಗತಿಗಳ ನಡುವೆ ಪ್ರಕೃತಿಯ ನಡುವೆ ಶಿಬಿರ ನಡೆಸಲು ಅವಕಾಶ ಸಿಕ್ಕಿದೆ. ಶ್ರಮದಾನದ ಜೊತೆ ಶಿಸ್ತು, ಸಹಬಾಳ್ವೆ, ಸಹಜೀವನವನ್ನು ರೂಪಿಸಿಕೊಳ್ಳಿ ಎಂದು ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ ಹೇಳಿದರು.ಪಡುಬೆಳ್ಳೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಜಿಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಶಾಲೆಯ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಉದ್ಯಮಿ ಹರೀಶ್ ಶೆಟ್ಟಿ ಕಕ್ರಮನೆ ವಿದ್ಯಾರ್ಥಿಗಳ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾಲೇಜಿನ ಪ್ರಾಂಶುಪಾಲೆ ಡಾ. ಗಾಯತ್ರಿ ಪೈ ಅಧ್ಯಕ್ಷತೆ ವಹಿಸಿದರು. ಉಪಪ್ರಾಂಶುಪಾಲ ಡಾ. ವಿಶ್ವನಾಥ ಪೈ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ ಎಸ್. ನಾಯ್ಕ, ಸ.ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯಿನಿ ವಿದ್ಯಾವತಿ, ಎನ್ಎಸ್‌ಎಸ್ ಘಟಕ 2 ರ ಅಧಿಕಾರಿ ಡಾ. ರೇಖಾ ಎನ್. ಚಂದ್ರ, ಎನ್‌ಎಸ್‌ಎಸ್ ನಾಯಕರಾದ ಸುಮಿತ್, ಅನಘ ಜಿ. ಮೇಲಂಟ ಉಪಸ್ಥಿತರಿದ್ದರು.

ಎನ್‌ಎಸ್‌ಎಸ್ ಅಧಿಕಾರಿ ಸುಚಿತ್ ಕೋಟ್ಯಾನ್ ಸ್ವಾಗತಿಸಿ, ವಿದ್ಯಾರ್ಥಿನಿ ಅಂಕಿತಾ ವಂದಿಸಿದರು. ವಿದ್ಯಾರ್ಥಿನಿ ಸೋನಿ ಪ್ರಕಾಶ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ
ಭ್ರಷ್ಟರ ಕೈಯಲ್ಲಿ ಸಿಕ್ಕು ಕಸಾಪ ಸಂಸ್ಥೆಯ ನೈತಿಕತೆ ಹಾಳು: ಪ್ರೊ.ಎಸ್.ಜಿ.ಸಿದ್ದರಾಮಯ್ಯ