ಎನ್‌ಎಸ್‌ಎಸ್‌ ಶಿಬಿರ ಗ್ರಾಮೀಣ ಬದುಕಿಗೆ ಬೆಸೆಯುವ ಕೊಂಡಿ: ಡಾ. ಗಣೇಶ ಪೂಜಾರಿ

KannadaprabhaNewsNetwork | Published : Nov 14, 2024 12:55 AM

ಸಾರಾಂಶ

ಶಿಬಿರದಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರನ್ನು ಅಭಿನಂದಿಸಲಾಯಿತು. ಶಿಬಿರ ನಡೆದ ಸವಿನೆನಪಿಗೆ ಅಜೆಕಾರ್ ಪದ್ಮಗೋಪಾಲ್‌ ಎಜುಕೇಶನ್‌ಟ್ರಸ್ಟ್ ನ ವತಿಯಿಂದ 10, 000 ದತ್ತಿನಿಧಿಯನ್ನು ಆತಿಥೇಯ ಶಾಲೆಗೆ ನೀಡಿ ಅದರ ಬಡ್ಡಿ ಮೊತ್ತವನ್ನು ಪ್ರತಿವರ್ಷ ಏಳನೇ ತರಗತಿಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆವ ವಿದ್ಯಾರ್ಥಿಗೆ ಕೊಡುವ ಯೋಜನೆ ಪ್ರಸ್ತಾಪಿಸಲಾಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಎನ್ಎಸ್ಎಸ್ ಶಿಬಿರಗಳು ವಿದ್ಯಾರ್ಥಿಗಳನ್ನು ಗ್ರಾಮೀಣ ಬದುಕಿಗೆ ಬೆಸೆಯುವ ಕೊಂಡಿಯಾಗಿದೆ. ಆ ಮೂಲಕ ವಿದ್ಯಾರ್ಥಿಗಳಿಗೆ ಶಿಬಿರಗಳು ಗ್ರಾಮೀಣ ಬದುಕಿನ ಸೊಗಡನ್ನು ಬಿಚ್ಚಿಟ್ಟು ಶೈಕ್ಷಣಿಕ ಬದುಕಿಗೆ ಹೊಸ ರೂಪ ಕೊಡುತ್ತಿದೆ. ನನ್ನ ವಿದ್ಯಾರ್ಥಿ ಜೀವನದಲ್ಲೂ ಎನ್.ಎಸ್.ಎಸ್. ನಲ್ಲಿ ತೊಡಗಿಸಿಕೊಂಡ ಸ್ವಅನುಭವದಿಂದ ಈ ಅರಿವಾಗಿದೆ ಎಂದು ಎನ್.ಎಂ.ಎ.ಎ.ಇಂಜಿನಿಯರಿಂಗ್‌ ಕಾಲೇಜು ನಿಟ್ಟೆಯ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಗಣೇಶ ಪೂಜಾರಿ ಹೇಳಿದ್ದಾರೆ.

ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಲಂಬಾಡಿ ಪದವು ಇಲ್ಲಿ ನಡೆದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ಅಜೆಕಾರ್ ಪದ್ಮಗೋಪಾಲ್‌ಎಜುಕೇಶನ್‌ ಟ್ರಸ್ಟ್ನಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹತ್ತು ಶಿಬಿರಗಳನ್ನು ಯಶಸ್ವಿಯಾಗಿ ಸಂಘಟಿಸಿದ ಎನ್.ಎಸ್.ಎಸ್. ಶಿಬಿರಾಧಿಕಾರಿ ರವಿ ಜಿ. ಅವರನ್ನು ಸನ್ಮಾನಿಸಿ, ಪ್ರಸ್ತುತ ಶಿಬಿರಕ್ಕೆ ಸಹಕರಿಸಿದ ಸರ್ವರನ್ನು ಪ್ರಶಂಸಿಸಿದರು.

ಉಡುಪಿ ಜಿಲ್ಲಾ ಎನ್.ಎಸ್.ಎಸ್. ನೋಡಲ್‌ ಅಧಿಕಾರಿ ಡಾ.ಜಯಶಂಕರಕ ಗಣ್ಣಾರು ಮಾತನಾಡಿ ಎನ್.ಎಸ್.ಎಸ್. ಶಿಬಿರದ ಮಹತ್ವ ತಿಳಿಸಿದರು. ಶಿಬಿರದಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರನ್ನು ಅಭಿನಂದಿಸಲಾಯಿತು. ಶಿಬಿರ ನಡೆದ ಸವಿನೆನಪಿಗೆ ಅಜೆಕಾರ್ ಪದ್ಮಗೋಪಾಲ್‌ ಎಜುಕೇಶನ್‌ಟ್ರಸ್ಟ್ ನ ವತಿಯಿಂದ 10, 000 ದತ್ತಿನಿಧಿಯನ್ನು ಆತಿಥೇಯ ಶಾಲೆಗೆ ನೀಡಿ ಅದರ ಬಡ್ಡಿ ಮೊತ್ತವನ್ನು ಪ್ರತಿವರ್ಷ ಏಳನೇ ತರಗತಿಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆವ ವಿದ್ಯಾರ್ಥಿಗೆ ಕೊಡುವ ಯೋಜನೆ ಪ್ರಸ್ತಾಪಿಸಲಾಯಿತು.ಅಜೆಕಾರ್ ಪದ್ಮಗೋಪಾಲ್‌ಎಜ್ಯುಕೇಶನ್‌ ಟ್ರಸ್ಟ್‌ ಟ್ರಸ್ಟಿಗಳಾದ ಅನಿಲ್ ಕುಮಾರ್‌ ಜೈನ್, ಸಿ.ಎ. ನಿತ್ಯಾನಂದ ಪ್ರಭು, ಅಜೆಕಾರ್ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ ಆಡಳಿತ ಮಂಡಳಿಯ ಸದಸ್ಯರಾದ ಶಾಂತಿರಾಜ ಹೆಗ್ಡೆ, ಉಡುಪಿ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಸಂತೋಷ್, ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಸಾಹಿತ್ಯ, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಡೀನ್ ಸ್ಟೂಡೆಂಟ್‌ ಅಫರ್ಸ್‌ ಶಕುಂತಲಾ ಎಂ. ಸುವರ್ಣ, ನಿಟ್ಟೆ ಗ್ರಾ.ಪಂ. ಉಪಾಧ್ಯಕ್ಷ ನಿತಿನ್ ಸಾಲ್ಯಾನ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಂಬಾಡಿ ಪದವು ಎಸ್.ಡಿ.ಎಂ.ಸಿ.ಉಪಾಧ್ಯಕ್ಷರಾದ ಜಯಂತ್ ನಾಯಕ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಓ. ದಿನೇಶ್ ಎಂ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್. ಶಿಬಿರಾಧಿಕಾರಿ ರವಿ ಜಿ. ವಂದಿಸಿದರು. ಮಣಿಪಾಲ ಜ್ಞಾನಸುಧಾ ಆಂಗ್ಲಭಾಷಾ ಉಪನ್ಯಾಸಕಿ ಶಮಿತಾ ಕಾರ್ಯಕ್ರಮ ನಿರೂಪಿಸಿದರು.

Share this article