ಕನ್ನಡಪ್ರಭ ವಾರ್ತೆ ಮೈಸೂರು
ವಿವಿಧ ಪ್ರಭೇದದ ಸುಮಾರು 200 ಸಸಿಗಳನ್ನು ಕಾಲೇಜು ಉದ್ಯಾನವನದಲ್ಲಿ ನೆಡಲಾಯಿತು. ಕಾಲೇಜಿನಲ್ಲಿರುವ ಎರಡು ಘಟಕಗಳ ಸುಮಾರು 200 ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟು ನೀರೆರೆದರು.
ಕಾಲೇಜಿನ ಅಧ್ಯಾಪಕರು ಮತ್ತು ಅಧ್ಯಾಪಕೇತರ ಸಿಬ್ಬಂದಿ ಸುಮಾರು 7 ಸಾವಿರ ರೂಪಾಯಿ ಮೌಲ್ಯದ ಸಸಿಗಳನ್ನು ಕೊಡುಗೆಯಾಗಿ ನೀಡಿದರು. ವಿದ್ಯಾರ್ಥಿಗಳು ಅವುಗಳನ್ನು ನೆಟ್ಟು ನೀರೆರೆದರು.ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ. ನಟರಾಜ್ ಗಿಡಗಳನ್ನು ಉಳಿಸಿ ಬೆಳೆಸಲು ಸಲಹೆ ನೀಡಿದರು.
ಗಿಡಗಳನ್ನು ನಾವು ನೆಡುವ ಸ್ಥಿತಿಗೆ ತಲುಪಿದ್ದೇವೆ. ಇದು ಅನಿವಾರ್ಯ. ಆದರೂ ಗಿಡ ನೆಟ್ಟು, ಉಳಿಸಿ ಬೆಳೆಸುವುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಎಂದರು.
ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಅಧಿಕಾರಿಗಳಾದ ಡಾ.ಬಿ. ಲಕ್ಷ್ಮಣ, ಪ್ರೊ.ಬಿ.ಎಸ್. ಶುಭಾ, ಅಧ್ಯಾಪಕ ಸಂಘದ ಕಾರ್ಯದರ್ಶಿ ಕೆ.ಎಲ್. ರಮೇಶ, ಸಾಂಸ್ಕೃತಿಕ ಸಮಿತಿ ಸಂಚಾಲಕ ಗೋವಿಂದರಾಜು, ಅಧ್ಯಾಪಕರಾದ ಸುಧಾ, ಲೀಲಾವತಿ, ಎಚ್.ಸಿ. ಪ್ರಮೀಳಾ, ಎನ್. ಬೃಂದಾ, ಮಧುಮತಿ, ಸುರೇಶ್, ಅಧ್ಯಾಪಕೇತರರು, ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿ ಪ್ರತಿನಿಧಿಗಳಾದ ರಮ್ಯಾ ಡಿ, ಶಿವಾಲಿ, ಸುಚಿತ್ರಾ, ಸ್ನೇಹ, ಸೌಂದರ್ಯ, ಆರ್. ರಂಜಿತ, ಸುಮಾರು 200 ಸ್ವಯಂ ಸೇವಕರು ಪಾಲ್ಗೊಂಡಿದ್ದರು.