ಸಮಾಜದಲ್ಲಿ ದುಶ್ಚಟಗಳಿಗೆ ಬಲಿಯಾಗುವವರ ಸಂಖ್ಯೆ ವೃದ್ಧಿಸಿದೆ: ಡಿವೈಎಸ್‍ಪಿ ಪ್ರಶಾಂತ

KannadaprabhaNewsNetwork |  
Published : Jan 17, 2024, 01:46 AM IST
ಹೊನ್ನಾಳಿ ಫೋಟೋ 16ಎಚ್.ಎಲ್.ಐ1.  ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇನಲ್ಲಿ ರಸ್ತೆ  ಸುರಕ್ಷಾ ಸಪ್ತಾಹ  ಮತ್ತು ಮಾದಕ ವಸ್ತುಗಳಿಂದಾಗುವ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮವನ್ನು ಡಿವೈಎಸ್ಪಿ ಪ್ರಶಾಂತ ಮನ್ನೋಳಿ ಅವರು ಉದ್ಘಾಟಿಸಿ ಮಾತನಾಡಿದರು.: | Kannada Prabha

ಸಾರಾಂಶ

ರಸ್ತೆ ನಿಯಮ ಸರಿಯಾಗಿ ಪಾಲಿಸದಿದ್ದರೆ ಅಪಘಾತಗಳೇ ಹೆಚ್ಚುತ್ತವೆ ವಿದ್ಯಾರ್ಥಿಗಳು ಅನುತ್ತೀರ್ಣರಾದರೆ ಪಾಸಗಲೂ ಅವಕಾಶವಿದೆ ಆದರೆ ಅಪಘಾತದಲ್ಲಿ ಮೃತಪಟ್ಟರೆ ಜೀವ ತರಲು ಸಾಧ್ಯವಿಲ್ಲ. ರಸ್ತೆಯಲ್ಲಿ ದ್ವಿ ಚಕ್ರ ವಾಹನ ಚಲಾಯಿಸುವ ಪ್ರತಿಯೊಬ್ಬರು ರಸ್ತೆ ನಿಯಮ ಪಾಲಿಸಿ ಯುವ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮಾದಕ ವಸ್ತುಗಳ ಸೇವನೆಯಿಂದ ಯುವ ಸಮೂಹ ಆರೋಗ್ಯದ ದುಷ್ಪರಿಣಾಮಕ್ಕೆ ಸಿಲುಕುವವರ ಸಂಖ್ಯೆ ಹೆಚ್ಚುತ್ತಿದ್ದು, ಸ್ವಾಸ್ಥ್ಯ ಸಮಾಜದ ನಿರ್ಮಾಣ ಇಳಿಮುಖವಾಗಿದೆ ಎಂದು ಚನ್ನಗಿರಿ ಪೊಲೀಸ್ ಉಪವಿಭಾಗದ ಡಿವೈಎಸ್‍ಪಿ ಪ್ರಶಾಂತ ಮುನ್ನೋಳಿ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಮತ್ತು ಮಾದಕ ವಸ್ತುಗಳ ಸಮಸ್ಯೆ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮದ್ಯಸೇವನೆ ಮತ್ತು ಡ್ರಗ್ಸ್ ಹಾಗೂ ಇತರೆ ಸೇವನೆಗಳ ದುಶ್ಚಟಗಳಿಗೆ ಬಲಿಯಾದರೆ ಆರೋಗ್ಯ ಹಾಳಾಗುತ್ತದೆ ಒಮ್ಮೆ ವ್ಯಸನಕ್ಕೆ ಬಲಿಯಾದರೆ ಲಾಭಕ್ಕಿಂತ ನಷ್ಟವನ್ನೇ ಜೀವನಪೂರ್ತಿ ಎದುರಿಸಬೇಕಾಗುತ್ತದೆ ಎಂದರು.

ರಸ್ತೆ ನಿಯಮ ಸರಿಯಾಗಿ ಪಾಲಿಸದಿದ್ದರೆ ಅಪಘಾತಗಳೇ ಹೆಚ್ಚುತ್ತವೆ ವಿದ್ಯಾರ್ಥಿಗಳು ಅನುತ್ತೀರ್ಣರಾದರೆ ಪಾಸಗಲೂ ಅವಕಾಶವಿದೆ ಆದರೆ ಅಪಘಾತದಲ್ಲಿ ಮೃತಪಟ್ಟರೆ ಜೀವ ತರಲು ಸಾಧ್ಯವಿಲ್ಲ. ರಸ್ತೆಯಲ್ಲಿ ದ್ವಿ ಚಕ್ರ ವಾಹನ ಚಲಾಯಿಸುವ ಪ್ರತಿಯೊಬ್ಬರು ರಸ್ತೆ ನಿಯಮ ಪಾಲಿಸಿ ಯುವ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.

ಸರ್ಕಲ್ ಇನ್ಸಪೆಕ್ಟರ್ ಸುನಿಲ್‍ ಕುಮಾರ ಮಾತನಾಡಿ, ದ್ವಿಚಕ್ರ ಮತ್ತು ಇತರೆ ವಾಹನಗಳ ಓಡಿಸುವ ಪ್ರತಿಯೊಬ್ಬರು ಚಾಲನಾ ಪರವಾನಗಿ, ವಿಮೆ, ಹೆಲ್ಮೆಟ್ಇಲ್ಲದೆ ವಾಹನಗಳ ಓಡಿಸಬಾರದು. ಪ್ರತಿಯೊಬ್ಬರು ರಸ್ತೆ ಮತ್ತು ವಾಹನಗಳ ಬಗ್ಗೆ ಸಂಪೂರ್ಣ ಮಾಹಿತಿ ಅನುಭವವಿದ್ದರೆ ಚಲಾಯಿಸಿ ವಾಹನಗಳ ಚಾಲನೆ ಮಾಡಿ ಅನುಭವ ಇಲ್ಲದವರು ಚಲಾಯಿಸಿದರೆ ಅಂತವರಿಗೆ ನ್ಯಾಯಾಲಯವೇ ಶಿಕ್ಷೆ ವಿಧಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಬಿ.ಜಿ.ಧನಂಜಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈ ವೇಳೆ ನ್ಯಾಮತಿ ಸಿಪಿಐ ರವಿ, ವಿಜಯ, ದೊಡ್ಡಬಸಪ್ಪ, ಉಪನ್ಯಾಸಕರಾದ ಧನಂಜಯಮೂರ್ತಿ, ಪಿಎಸ್ ಹರೀಶ್, ನಾಗರಾಜ ನಾಯ್ಕ, ವಿದ್ಯಾರ್ಥಿಗಳಿದ್ದರು.

ವಾಹನ ಚಾಲಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಅರಿವು

ಪಟ್ಟಣದ ಸಂಗೊಳ್ಳಿರಾಯಣ್ಣ ವೃತ್ತದಲ್ಲಿ ಚನ್ನಗಿರಿ ಪೊಲೀಸ್ ಉಪವಿಭಾಗದ ಡಿವೈಎಸ್‍ಪಿ ಪ್ರಶಾಂತ, ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಸುನಿಲ್‍ಕುಮಾರ, ಎಎಸ್‌ಐ ತಿಪ್ಪೇಸ್ವಾಮಿ, ಪೊಲೀಸ್‌ ಸಿಬ್ಬಂದಿಗಳಾದ ತೀರ್ಥಪ್ಪ, ವಿಜಯ್, ದೊಡ್ಡಬಸಪ್ಪ ಇತರರು ವಾಹನ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿ ಬೈಕ್‍ ಚಲಾಯಿಸಿದ ಮಹಿಳೆಯರು ಮತ್ತು ಪುರುಷರಿಗೆ ಹೂ ನೀಡಿ ಸುರಕ್ಷತೆ ಬಗ್ಗೆ ಅರಿವು ಮೂಡಿಸಿದರು.ಚನ್ನಗಿರಿ ಪೊಲೀಸ್ ಉಪವಿಭಾಗದ ಡಿವೈಎಸ್‍ಪಿ ಪ್ರಶಾಂತ್‌ ಮಾತನಾಡಿ ನಿಮ್ಮ-ನಿಮ್ಮ ಜೀವ ರಕ್ಷಣೆಗೆ ಬದ್ಧರಾಗಬೇಕು. ವಾಹನಗಳು ಹೊಗೆರಹಿತವಾಗಿರಬೇಕು ಹೆಚ್ಚು ಹೊಗೆಯಿರುವ ವಾಹನಗಳು ಕಂಡು ಬಂದರೆ ಪೊಲೀಸ್ ನವರು ಹಿಡಿದು ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.ಈ ಸಂದರ್ಭದಲ್ಲಿ ರಾತ್ರಿ ವೇಳೆ ವಾಹನ ಹೋಗುತ್ತಿದ್ದರೂ ತಕ್ಷಣಕ್ಕೆ ಗೊತ್ತಾಗುವುದಿಲ್ಲ ಅಂತಹ ವಾಹನಗಳ ಗುರುತಿಸಿ ಟ್ರ್ಯಾಕ್ಟರ್ , ಕಾರುಗಳಿಗೆ ಪೊಲೀಸ್ ಇಲಾಖೆ ಕೆಂಪು ಬಣ್ಣದ ಸ್ಟಿಕ್ಕರ್ ಗಳ ಅಂಟಿಸಲಾಯಿತು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ