=ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಈ ತರಬೇತಿಯಲ್ಲಿ ನಿರತ ಪ್ರತಿಯೊಬ್ಬರೂ ಇದು ಉದ್ಯೋಗ ಎಂದು ಭಾವಿಸದೆ ಸೇವೆ ಎಂದು ಭಾವಿಸಿ ರೋಗಿಗಳ ಸೇವೆ ಮಾಡಬೇಕು ಎಂದು ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಹೇಳಿದರು.
ಅವರು ಜೆಎಸ್‌ಎಸ್ ನರ್ಸಿಂಗ್ ಶಾಲೆ ಆಯೋಜಿಸಿದ್ದ 22ನೇ ಬ್ಯಾಚ್ ವಿದ್ಯಾರ್ಥಿಗಳಿಗೆ “ಜ್ಯೋತಿ ಬೆಳಗುವಿಕೆ, ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಶುಶ್ರೂಷಕ ವೃತ್ತಿ ಮಮಕಾರ ತೋರುವ ಅತ್ಯಂತ ಪವಿತ್ರ ಹುದ್ದೆಯಾಗಿದೆ. ತಾಯಿಯಂತೆ ಮಮಕಾರ ಮನೋಭಾವ ಬೆಳೆಸಿಕೊಂಡು ರೋಗಿಗಳ ಸೇವೆಯನ್ನು ಮಾಡಬೇಕು. ದಾದಿಯರ ಸೇವೆ ತಾಯಂದಿರರ ಸೇವೆ ಇದ್ದಂತೆ ಎಂದು ವ್ಯಾಖ್ಯಾನಿಸಿದರು. ವನ್ಯಸಂಪತ್ತು ಅತ್ಯಂತ ಅಮೂಲ್ಯ ಸಂಪತ್ತಾಗಿದ್ದು, ಇದನ್ನು ಮುಂದಿನ ಪೀಳಿಗೆಗೂ ಉಳಿಸುವ ಅಗತ್ಯವಿದೆ. ಯುವ ಪೀಳಿಗೆ ಅರಣ್ಯ ಉಳಿಸಿ ಬೆಳೆಸುವಲ್ಲಿ ಮುಂದಾಗಬೇಕು ಎಂದರು.
ನರ್ಸಿಂಗ್ ತರಬೇತಿ ಅತ್ಯಂತ ಪ್ರತಿಷ್ಠಿತವಾದದ್ದು, ರೋಗ ಲಕ್ಷಣಗಳನ್ನು ಅರಿತು ನಿಖರತೆಯಿಂದ ರೋಗಿಗಳ ಸೇವೆ ಸಲ್ಲಿಸಿ ಸಮಯ ಪ್ರಜ್ಞೆ ಮತ್ತು ಸಂಯಮವನ್ನು ಅಳವಡಿಸಿಕೊಳ್ಳಿ, ರೋಗಿಗಳಿಗೆ ನಿಮ್ಮ ಮೇಲಿನ ಗಟ್ಟಿ ನಂಬಿಕೆಯಿಂದಾಗಿ ಗುಣಮುಖರಾಗಲು ಸಹಕಾರಿಯಾಗುವಂತೆ ನಡೆದುಕೊಳ್ಳಿ, ಬೆಲೆಕಟ್ಟಲಾಗದ ಸೇವೆಯೂ ಇದಾಗಿದೆ ಎಂದರು.
ಈ ವೃತ್ತಿ ಅತ್ಯಂತ ಜವಾಬ್ದಾರಿಯುತ ಹುದ್ದೆ. ಇದರ ಘನತೆಗೆ ಎತ್ತಿ ಹಿಡಿಯುವ ಜೊತೆಗೆ ಆತ್ಮೀಯತೆಯಿಂದ ರೋಗಿಗಳನ್ನು ಗುಣಪಡಿಸಬೇಕು, ಅವಕಾಶಗಳು ದೊರೆಯಬೇಕಾದರೆ ವಿದ್ಯಾರ್ಥಿಗಳು ಉತ್ತಮ ಕೌಶಲ್ಯಗಳನ್ನು ಅಳವಡಿಕೊಳ್ಳಬೇಕು, ನಮ್ಮ ಆರೋಗ್ಯ, ರೋಗಿಗಳ ಆರೋಗ್ಯದ ಹಾರೈಕೆ
ಈ ಸಂದರ್ಭದಲ್ಲಿ ಪ್ರಾಂಶುಪಾಲ ಹೇಮೇಶಮೂರ್ತಿ, ಸರ್ಕಾರಿ ಉಪವಿಭಾಗೀಯ ಆಸ್ಪತ್ರೆಯ ಶುಶ್ರೂಷಕರ ಅಧೀಕ್ಷಕಿ ಡಾರತಿ, ಉಪನ್ಯಾಸಕ ನವೀನ್ ಕುಮಾರ್, ಉಪ ಪ್ರಾಂಶುಪಾಲರಾದ ರಂಗನಾಯಕಿ, ಕುಮಾರಿ ಕಾವ್ಯ, ಚೈತ್ರಶ್ರೀ ಇನ್ನಿತರಿದ್ದರು.