ಮೂರ್ನಾಡು- ಬಲಮುರಿ ರಸ್ತೆ ಯುದ್ಧಕ್ಕೂ ಕಾಡು ಗಿಡಗಂಟಿಗಳು ಬೆಳೆದಿದ್ದು ವಿದ್ಯುತ್ ಸಂಪರ್ಕಕ್ಕೆ ಅಡ್ಡಿಯಾಗುತ್ತಿದ್ದು ಕಡಿದು ಸ್ವಚ್ಛಗೊಳಿಸಲಾಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ಮೂರ್ನಾಡು- ಬಲಮುರಿ ರಸ್ತೆ ಯುದ್ಧಕ್ಕೂ ಕಾಡು ಗಿಡಗಂಟಿಗಳು ಬೆಳೆದಿದ್ದು ವಿದ್ಯುತ್ ಸಂಪರ್ಕಕ್ಕೆ ಅಡ್ಡಿಯಾಗುತ್ತಿದ್ದು ಕಡಿದು ಸ್ವಚ್ಛಗೊಳಿಸಲಾಯಿತು. ಚಾಮುಂಡೇಶ್ವರಿ ವಿದ್ಯುತ್ ಪ್ರಸರಣಾ ಘಟಕ ಮೂರ್ನಾಡುವಿನಿಂದ ಬಲಮುರಿ ಪೈಸಾರಿಗೆ ಹೋಗುವ ವಿದ್ಯುತ್ ಸಂಪರ್ಕ ಕಾವೇರಿ ನದಿಯ ಪಕ್ಕದಲ್ಲಿದ್ದು ರಸ್ತೆಯ ಬದಿಯಲ್ಲಿ ಹಾದುಹೋಗಿದ್ದರಿಂದ, ಬಿದುರಿನ ಮೆಳೆಗಳು, ಮರ, ಗಿಡ ಬಳ್ಳಿಗಳು ಹಬ್ಬಿಕೊಂಡಿದ್ದು ಅಪಾಯದ ಅಂಚಿನಲ್ಲಿತ್ತು. ಇಲಾಖೆಯ ಲೈನ್ ಮ್ಯಾನ್ ಗಳಾದ ಕಿಶೋರ್ ಮತ್ತು ಜೀವನ್ ಮುಂದಾಳತ್ವದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಕಾಡು ಗಿಡ ಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು. ಪಾರಾಣೆ ಗ್ರಾಮ ಪಂಚಾಯಿತಿ ಪಿಡಿಒ ಬಿದ್ದಪ್ಪ ಎನ್. ಎನ್ ಮತ್ತು ಸಿಬ್ಬಂದಿ ಹೈದರ ಎನ್.ಎಂ. ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.