ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಕಾಂಗ್ರೆಸ್ ಭವನದಲ್ಲಿ ನಗರ ಮತ್ತು ಜಿಲ್ಲಾ ಕಾಂಗ್ರೆಸ್‌ಸಮಿತಿಯು ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್‌ಬಹುದ್ದೂರ್‌ಶಾಸ್ತ್ರಿ ಜಯಂತಿಯಲ್ಲಿ ಅವರು, ಜಾಗೃತ ಭಾರತದಲ್ಲಿ ಸಮುದಾಯ ನಾಯಕತ್ವದ ಅನಿವಾರ್ಯತೆ ಕುರಿತು ಮಾತನಾಡಿದರು.
ಭಾರತೀಯರಾದ ನಾವೆಲ್ಲರೂ ಹೆಮ್ಮೆ ಪಡಬೇಕಾದ ದಿನ ಇದಾಗಿದೆ. ಇಂದು ಜಗತ್ತಿನಾದ್ಯಂತ ನಾಯಕತ್ವದ ಸಮಸ್ಯೆ ಎಲ್ಲರನ್ನು ಕಾಡುತ್ತಿದೆ. ಈ ದೇಶಕ್ಕೆ ಎಂತಹ ನಾಯಕತ್ವ ಬೇಕೆಂದು ಜನರು ಚರ್ಚೆ ಮಾಡುತ್ತಾ ಹೋದಾಗ ಪ್ರಜಾಪ್ರಭುತ್ವ ಸೃಷ್ಠಿಯಾದ ದಿನದಂದು ಯುವಜನಾಂಗ ಪ್ರಜಾಪ್ರಭುತ್ವವನ್ನು ಉಳಿಸಿ ಎಂಬ ಹೋರಾಟ ಮಾಡುತ್ತಿದ್ದಾರೆ. ಇದನ್ನು ನೋಡಿದಾಗ ಭಾರತ ಜಾಗೃತಿ ಆಗಿದಿಯಾ ಎಂಬ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.ನಾಯಕರೆಂದರೆ ತ್ಯಾಗ, ಬೇರೆಯವರಿಗಾಗಿ, ಎಲ್ಲರಿಗಾಗಿ ನಾನು ಎಂಬುವವರಾಗಿದ್ದಾರೆ. ಗಾಂಧಿ ಗುಂಡಿಗೆ ಬಲಿಯಾದ ದಿನ ಒಬ್ಬ ವ್ಯಕ್ತಿಯ ಕೊಲೆಯಲ್ಲ ಒಂದು ಸಿದ್ಧಾಂತ, ಒಂದು ವ್ಯಕ್ತಿತ್ವ, ಒಂದು ನಾಯಕತ್ವದ ಕೊಲೆ ಆಯಿತು. ಅವರು ಕಂಡಂತಹ ಸರ್ವೋದಯ ನಾಯಕತ್ವ ಎಂದರೆ ಎಲ್ಲರಿಗೂ ಒಳಿತಾಗುವುದು, ಎಲ್ಲರ ಅಭಿವೃದ್ಧಿಯಾಗಿದೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ನಗರಾಧ್ಯಕ್ಷ ಆರ್. ಮೂರ್ತಿ, ಜಿಲ್ಲಾಧ್ಯಕ್ಷ ಬೀರಿಹುಂಡಿ ಬಸವಣ್ಣ, ಮಾಜಿ ಮೇಯರ್ ಗಳಾದ ಪುಷ್ಪಲತಾ ಚಿಕ್ಕಣ್ಣ, ಟಿ.ಬಿ. ಚಿಕ್ಕಣ್ಣ, ಮುಖಂಡರಾದ ಎಂ. ಶಿವಣ್ಣ, ಈಶ್ವರ ಚಕ್ಕಡಿ, ಡಿ. ನಾಗಭೂಷಣ್, ರವಿ ಮಂಚೇಗೌಡನ ಕೊಪ್ಪಲು, ಜಿ. ಸೋಮಶೇಖರ್, ಕೆ. ಮಹೇಶ್, ಎನ್.ಆರ್. ನಾಗೇಶ್, ಎಂ.ಕೆ. ಅಶೋಕ್, ಆರ್. ಗಿರೀಶ್, ಶಿವಮಲ್ಲು, ಮೋಹನ್, ಆರ್.ಎಚ್. ಕುಮಾರ್, ರಾಣಿ ಮೊದಲಾದವರು ಇದ್ದರು.