ಶಿರಪುರ ಚೆಕ್‌ಡ್ಯಾಮ್‌ಗೆ ಬಾಗಿನ ಅರ್ಪಣೆ

KannadaprabhaNewsNetwork |  
Published : Oct 04, 2026, 01:15 AM IST
ಫೋಟೋ- ಸಿರಪುರ ಮಾಡೆಲ | Kannada Prabha

ಸಾರಾಂಶ

ಆಳಂದ ತಾಲೂಕಿನ ಚಿತಲಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಶಿರಪುರ್ ಮಾದರಿ ಚೆಕ್ ಡ್ಯಾಮ್‌ಗೆ ಇಂದು ಕಲಬುರಗಿ ಹಾಲು ಒಕ್ಕೂಟದ ಅಧ್ಯಕ್ಷರಾದ ಆರ್‌ ಕೆ ಪಾಟೀಲ್‌ ಅವರು ರೈತರೊಂದಿಗೆ ಸೇರಿಕೊಂಡು ಬಾಗಿನ ಪೂಜೆ ಸಲ್ಲಿಸಿ, ಜಲ ಸಂರಕ್ಷಣೆಯ ಜಾಗೃತಿ ಮೂಡಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿಆಳಂದ ತಾಲೂಕಿನ ಚಿತಲಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಶಿರಪುರ್ ಮಾದರಿ ಚೆಕ್ ಡ್ಯಾಮ್‌ಗೆ ಇಂದು ಕಲಬುರಗಿ ಹಾಲು ಒಕ್ಕೂಟದ ಅಧ್ಯಕ್ಷರಾದ ಆರ್‌ ಕೆ ಪಾಟೀಲ್‌ ಅವರು ರೈತರೊಂದಿಗೆ ಸೇರಿಕೊಂಡು ಬಾಗಿನ ಪೂಜೆ ಸಲ್ಲಿಸಿ, ಜಲ ಸಂರಕ್ಷಣೆಯ ಜಾಗೃತಿ ಮೂಡಿಸಿದರು.ಮಳೆನೀರನ್ನು ಸಂಗ್ರಹಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು, ಕೃಷಿಗೆ ಅಗತ್ಯವಾದ ನೀರಿನ ಲಭ್ಯತೆಯನ್ನು ಸುಧಾರಿಸುವುದು ಹಾಗೂ ರೈತರ ಬದುಕಿಗೆ ಶಾಶ್ವತ ನೀರಿನ ಭದ್ರತೆ ಒದಗಿಸುವುದು ಶಿರಪೂರ್ ಮಾದರಿಯ ಪ್ರಮುಖ ಉದ್ದೇಶವಾಗಿದೆ ಎಂದರು. ‘ನಮ್ಮ ನೀರು – ನಮ್ಮ ಹಕ್ಕು’ ಎಂಬ ಆಶಯದೊಂದಿಗೆ ನಮ್ಮ ಭಾಗದ ಪ್ರತಿಯೊಂದು ಹನಿ ನೀರನ್ನು ಸದ್ಬಳಕೆ ಮಾಡುವ ಸಂಕಲ್ಪ ನಮ್ಮದಾಗಿದೆ. ನೀರಿನ ಸಂರಕ್ಷಣೆ ಕೇವಲ ಇಂದಿನ ಅಗತ್ಯವಲ್ಲ. ಅದು ಮುಂದಿನ ಪೀಳಿಗೆಯ ಭವಿಷ್ಯದ ಭದ್ರತೆಯೂ ಆಗಿದೆ. ಇಂತಹ ಜಲಸಂರಕ್ಷಣಾ ಯೋಜನೆಗಳು ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿವೆ ಎಂದು ಆರ್‌ ಕೆ ಪಾಟೀಲ್‌ ರೈತರಿಗೆ ಮಾಹಿತಿ ನೀಡಿದರು.ಪಿಸಿಸಿ ಸದಸ್ಯ ರಾಜಶೇಖರ್ ಪಾಟೀಲ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ್ ಸಾವಳೇಶ್ವರ, ಮೋಹನಗೌಡ ಪಾಟೀಲ್, ಶೇಖರ್ ವರದಮಾನೆ, ಶರಣಪ್ಪ ಹತ್ತರಕಿ, ಕಲ್ಯಾಣಿ ಮಲಶೆಟ್ಟಿ, ಸಿದ್ದಲಿಂಗಪ್ಪ ಮಲಶೆಟ್ಟಿ, ಶ್ರೀಶೈಲ್ ಉಜಳಂಬೆ, ಶ್ರಾನಾಗರಾಜ್‌ ಕೋರೆ ಸೇರಿದಂತೆ ಅನೇಕ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಗೇಶಪುರವನ್ನು ಮಾದರಿ ಗ್ರಾಮವನ್ನಾಗಿಸುವ ಸಂಕಲ್ಪ
ಕಲಬುರಗಿ: ಟ್ಯಾಂಕರ್‌ನಲ್ಲಿ ನೀರು ಪೂರೈಕೆ