ಪುನಶ್ಚೇತನಗೊಂಡ ಚನ್ನಳ್ಳಿ ಕೆರೆಗೆ ಬಾಗಿನ ಅರ್ಪಣೆ

KannadaprabhaNewsNetwork |  
Published : Aug 21, 2024, 12:30 AM ISTUpdated : Aug 21, 2024, 12:31 AM IST
೧೯ಎಚ್‌ಕೆಆರ್೨ | Kannada Prabha

ಸಾರಾಂಶ

ನಮ್ಮೂರು ನಮ್ಮ ಕೆರೆ ಯೋಜನೆ ಅಡಿಯಲ್ಲಿ ಪುನಶ್ಚೇತನಗೊಂಡ ತಾಲೂಕಿನ ಚನ್ನಳ್ಳಿ ಗ್ರಾಮದ ಕೆರೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೆರೆ ಅಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಬಾಗಿನ ಅರ್ಪಿಸಲಾಯಿತು.

ಹಿರೇಕೆರೂರು: ನಮ್ಮೂರು ನಮ್ಮ ಕೆರೆ ಯೋಜನೆ ಅಡಿಯಲ್ಲಿ ಪುನಶ್ಚೇತನಗೊಂಡ ತಾಲೂಕಿನ ಚನ್ನಳ್ಳಿ ಗ್ರಾಮದ ಕೆರೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೆರೆ ಅಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಬಾಗಿನ ಅರ್ಪಿಸಲಾಯಿತು.ಗಂಗಾಮಾತೆಗೆ ಮೊದಲು ಪೂಜೆ ಸಲ್ಲಿಸಿ ನಂತರ ಕೆರೆಗೆ ಬಾಗಿನ ಅರ್ಪಣೆ ಮಾಡಲಾಯಿತುಈ ವೇಳೆ ಮಾತನಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರು ಶಿವರಾಯ ಪ್ರಭು, ಚನ್ನಳ್ಳಿ ಗ್ರಾಮ ಪಂಚಾಯತ ಮತ್ತು ಕೆರೆ ಅಭಿವೃದ್ಧಿ ಸಮಿತಿಯಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅಭಿವೃದ್ಧಿಗೊಳಿಸಿದ ಚನ್ನಳ್ಳಿ ಗ್ರಾಮದ ಕೆರೆ ಬಾಗಿನ ಅರ್ಪಿಸಲಾಗಿದೆ. ರಾಜ್ಯಾದ್ಯಂತ ಈಗಾಗಲೇ ಸುಮಾರು ೭೫೦ ಕೆರೆಗಳ ಪುನಶ್ಚೇತನಗೊಳಿಸಿದೆ. ಚನ್ನಳ್ಳಿ ಕೆರೆಯು ಸ್ವಚ್ಛಂದವಾಗಿ ಮಾದರಿ ಕೆರೆಯಾಗಿದೆ. ಕೃಷಿ ಚಟುವಟಿಕೆಗಳಿಗೂ ಸಾಕಷ್ಟು ಅನುಕೂಲವಾಗಲಿದೆ ಹಾಗೂ ಕೆರೆಗಳು ಹೆಚ್ಚು ಕಾಲ ತಮ್ಮ ಒಡಲಲ್ಲಿ ನೀರು ಉಳಿಸಿಕೊಳ್ಳುವುದರಿಂದ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಸುಧಾರಿಸುತ್ತದೆ ಎಂದರು.ತಾಲೂಕು ಯೋಜನಾಧಿಕಾರಿ ಮಂಜುನಾಥ ಎಂ. ಯೋಜನೆಯ ವತಿಯಿಂದ ಸ್ವಸಹಾಯ ಸಂಘದ ಸದಸ್ಯರಿಗೆ ಬ್ಯಾಂಕ್ ಮುಖಾಂತರ ಕಿರು ಆರ್ಥಿಕ ವ್ಯವಹಾರಗಳನ್ನು ಹಾಗೂ ವಾಸ್ತಲ್ಯ ಮನೆ ರಚನೆ. ಕೃಷಿ ಪೂರ್ವಕ ಚಟುವಟಿಗಳಿಗೆ ಅನುದಾನ ಕುರಿತು ಮಾಹಿತಿ ನೀಡಿದರು.ಗ್ರಾಪಂ ಸದಸ್ಯ ರಾಜು ಲಮಾಣಿ ಮಾತನಾಡಿ, ಪರಿಸರದ ಸಂರಕ್ಷಣೆಯ ಸದೃಢತೆಗೆ ನಮ್ಮೆಲ್ಲರ ಹೊಣೆಯಾಗಿದೆ. ಪುನಶ್ಚೇತನಗೊಂಡ ಕೆರೆಯಿಂದ ನಮ್ಮ ಗ್ರಾಮಕ್ಕೆ ಹೆಚ್ಚು ಅನುಕೂಲವಾಗಿದೆ. ಕೆರೆ ಸುತ್ತಲೂ ತಂತಿ ಬೆಲೆ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಕೆರೆ ಸಮಿತಿಯ ಅಧ್ಯಕ್ಷರಾದ ಮೋಹನಗೌಡ ನಿಂಗಜ್ಜರ, ಕೆರೆಯ ಕಾಮಗಾರಿ ತುಂಬಾ ಚೆನ್ನಾಗಿ ನಡೆದಿದೆ, ಇದಕ್ಕೆ ಗ್ರಾಮಸ್ಥರ ಸಹಕಾರ ಕಾರಣವಾಗಿದೆ. ಇದೇ ರೀತಿಯಾಗಿ ನಾವು ನಮ್ಮೂರಿನ ಕೆರೆಯನ್ನು ಸ್ವಚ್ಛತೆಯಿಂದ ಉಳಿಸಿಕೊಳ್ಳೋಣ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹನುಮಂತಪ್ಪ ಎಂ. ಏಶಪ್ಪ ಕೆ., ಪಿಡಿಒ ಪರಶುರಾಮ್ ಆಲೂರು, ಲೋಕಸ್ವಾಮಿ ಮಠದ, ಮಲ್ಲಿಕಾರ್ಜುನ, ವೇದಮೂರ್ತೆಪ್ಪ, ನಿಂಗಪ್ಪ, ಲಲಿತಮ್ಮ ಮಠದ ಸೇರಿದಂತೆ ಕೆರೆ ಸಮಿತಿಯ ಸದಸ್ಯರು, ಸ್ವ ಸಹಾಯ ಸಂಘದ ಸದಸ್ಯರು ಗ್ರಾಮಸ್ಥರು ಇದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌