ತೆಂಗು, ತಾಳೆ ಬೆಳೆಯು ಗ್ರಾಮೀಣ ಆರ್ಥಿಕತೆಯಾಗಿದೆ

KannadaprabhaNewsNetwork |  
Published : Nov 05, 2025, 01:03 AM IST
55 | Kannada Prabha

ಸಾರಾಂಶ

ನಮ್ಮ ತಾಲೂಕಿನಲ್ಲಿ ಅತಿ ಹೆಚ್ಚು ತೆಂಗು ಮತ್ತು ಅಡಿಕೆ ಬೆಳೆಗಾರರನ್ನು ಕಾಣುತ್ತೇವೆ,

ಕನ್ನಡಪ್ರಭ ವಾರ್ತೆ ನಂಜನಗೂಡು

ತೆಂಗು ಮತ್ತು ತಾಳೆ ಬೆಳೆಯು ಗ್ರಾಮೀಣ ಆರ್ಥಿಕತೆ ಆಗಿದೆ, ರೈತರು ನವೀನ ಮಾದರಿಯ ತಾಂತ್ರಿಕತೆಯನ್ನು ಅಳವಡಿಸಿಕೊಂಡು ತೆಂಗು ಸಮಗ್ರ ಬೇಸಾಯ ಮಾಡುವುದರಿಂದ ಉತ್ಪಾದನೆಯನ್ನು ಹೆಚ್ಚುಗೊಳಿಸಿ ಆರ್ಥಿಕವಾಗಿ ಲಾಭಗಳಿಸಬಹುದು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.

ಪಟ್ಟಣದ ತೋಟಗಾರಿಕಾ ಇಲಾಖೆಯ ಕಚೇರಿಯಲ್ಲಿ ತೋಟಗಾರಿಕಾ ಇಲಾಖೆ ವತಿಯಿಂದ ತೆಂಗು ಮತ್ತು ತಾಳೆ ಬೆಳೆಯ ಸಮಗ್ರ ಕೃಷಿ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ತಾಲೂಕಿನಲ್ಲಿ ಅತಿ ಹೆಚ್ಚು ತೆಂಗು ಮತ್ತು ಅಡಿಕೆ ಬೆಳೆಗಾರರನ್ನು ಕಾಣುತ್ತೇವೆ, ತಾಲೂಕಿನಲ್ಲಿ ಸುಮಾರು 5 ಸಾವಿರ ಹೆಕ್ಟೇರ್ ನಷ್ಟು ತೆಂಗು ಬೆಳೆಯಿದೆ, ಸುಮಾರು 150 ಹೆಕ್ಟೇರ್ ಪ್ರದೇಶದಲ್ಲಿ ತಾಳೆ ಬೆಳೆಯನ್ನು ಕಾಣುತ್ತೇವೆ, ಇಂದಿನ ಆಧುನಿಕ ಯುಗದಲ್ಲಿ ಹವಾಮಾನ ಏರುಪೇರು ಆಗುತ್ತಿದ್ದು, ಅದಕ್ಕೆ ಹೊಂದಾಣಿಕೆ ಮಾಡಿಕೊಂಡು ಕೃಷಿ ಅನುಸರಿಸುವುದು ಕಷ್ಟದಾಯಕ ಕೆಲಸ, ಅಲ್ಲದೆ ಇತ್ತೀಚಿನ ದಿನಗಳಲ್ಲಿ ಕಾಡು ಹಂದಿಗಳ ಹಾವಳಿಯಿಂದಲೂ ಕೂಡ ತೆಂಗಿನ ಬೆಳೆಗೆ ಕೊಳೆರೋಗ ಬರುತ್ತಿದೆ, ಆದ್ದರಿಂದ ವಿಜ್ಞಾನಿಗಳು ರೈತರ ತಾಕುಗಳಿಗೆ ಭೇಟಿ ನೀಡಿ ನೈಸರ್ಗಿಕವಾಗಿ ತೋಟಗಾರಿಕೆ ಅನುಸರಿಸುವ ಕ್ರಮ, ಹಾಗೂ ನವೀನ ಮಾದರಿಯ ತಂತ್ರಜ್ಞಾನ ಅಳವಡಿಸಿಕೊಳ್ಳುವ ಬಗೆ, ರೋಗ ನಿರೋಧಕಗಳನ್ನು ಅನುಸರಿಸುವ ಕ್ರಮಗಳನ್ನು ರೈತರಿಗೆ ತಿಳುವಳಿಕೆ ಮೂಡಿಸಿ ಅರಿವು ಮೂಡಿಸಬೇಕು ಎಂದರು.

ಪ್ರಮುಖವಾಗಿ ತೆಂಗಿನ ಉಪಕಸುಬು ಅನುಸರಿಸಿ ಮಾರುಕಟ್ಟೆ ಮಾಡುವುದು, ಮತ್ತು ತೆಂಗಿನ ಸಂಸ್ಕರಣ ವಿಧಾನಗಳನ್ನು ರೈತರಿಗೆ ನಿರಂತರವಾಗಿ ಮಾರ್ಗದರ್ಶನ ಮಾಡುವ ನಿಟ್ಟಿನಲ್ಲಿ ಇಂತಹ ಹೆಚ್ಚಿನ ವಿಚಾರ ಸಂಕೀರ್ಣಗಳ ಆಯೋಜನೆ ಮತ್ತು ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಿ ಅವರನ್ನು ಉದ್ಯಮಿಗಳಾಗುವಂತೆ ಪ್ರೋತ್ಸಾಹ ನೀಡಬೇಕು, ಎಂದು ತೋಟಗಾರಿಕಾ ಅಧಿಕಾರಿಗಳು ಮತ್ತು ವಿಜ್ಞಾನಿಗಳಿಗೆ ಅವರು ಸಲಹೆ ನೀಡಿದರು.

ತೋಟಗಾರಿಕಾ ಸಹಾಯಕ ನಿರ್ದೇಶಕ ಚಂದ್ರು ಮಾತನಾಡಿ, ಕೃಷಿ ತಜ್ಞರು, ವಿಜ್ಞಾನಿಗಳು ರೈತರಿಗೆ ತೆಂಗು ಮತ್ತು ತಾಳೆ ಬೆಳೆಯ ಆರೈಕೆ

ಕುರಿತು ವಿಸ್ತೃತ ಮಾಹಿತಿಯನ್ನು ನೀಡುವ ಜೊತೆಗೆ ಬೆಳೆ ಬೆಳೆಯುವ ಹಂತದಿಂದ ಹಿಡಿದು ಕೊಯ್ಲಿನವರೆಗೆ ಅನುಸರಿಸಬೇಕಾದ ನವೀನ

ಕ್ರಮಗಳು, ರೋಗನಿರೋಧಕ ತಂತ್ರಜ್ಞಾನಗಳು, ಗೊಬ್ಬರದ ಸರಿಯಾದ ಪ್ರಮಾಣ ಮತ್ತು ನೀರಾವರಿ ವ್ಯವಸ್ಥೆಗಳ ಪ್ರಾಮುಖ್ಯತೆ

ಕುರಿತು ಉಪನ್ಯಾಸಗಳನ್ನು ನೀಡುವ ಮೂಲಕ ಮಾರ್ಗದರ್ಶನ ನೀಡಲಾಗಿದೆ, ವಿಶೇಷವಾಗಿ ನೀರಿನ ಸಂರಕ್ಷಣೆ ಮತ್ತು ಮಣ್ಣಿನ ಗುಣಮಟ್ಟ ಕಾಪಾಡುವ ಕ್ರಮಗಳ ಕುರಿತು ಪ್ರಾಯೋಗಿಕ ಮಾಹಿತಿಯನ್ನು ನೀಡಿಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತೆಂಗು ಮತ್ತು ತಾಳೆ ಬೆಳೆಯನ್ನು ಪ್ರೋತ್ಸಾಹ ನೀಡುವ ಸಲುವಾಗಿ ರೈತರಿಗೆ ತಾಳೆ ಸಸಿ ಮತ್ತು ಗೊಬ್ಬರ ವಿತರಣೆ ಮಾಡಲಾಯಿತು.

ಡಾ. ವಿನಯ್, ಪ್ರಸಾದ್, ಪ್ರಸಾದ್ ಬಾಬು, ಚಂದ್ರು, ನಾಗೇಶ್ ರಾಜ್ ಸೇರಿದಂತೆ ವಿವಿಧ ರೈತ ಸಂಘಗಳ ಪ್ರತಿನಿಧಿಗಳು, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮತ್ತು ಅನೇಕ ರೈತರು ಇದ್ದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ