ಕನ್ನಡಪ್ರಭ ವಾರ್ತೆ ಬಾಗಲಕೋಟೆ:ಜನರಲ್ಲಿ ಮತದಾನದ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಉಪ ಕಾರ್ಯದರ್ಶಿಗಳು ಹಾಗೂ ಯೋಜನಾ ನಿರ್ದೇಶಕರು ಬೈಕ್ ರ್‍ಯಾಲಿ ನಡೆಸಿದರು.
ಜಾಗೃತಿ ಅಭಿಯಾನದ ಬೈಕ್ ರ್‍ಯಾಲಿ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ನವನಗರದ ಬಸ್ ನಿಲ್ದಾಣ, ಎಲ್ಐಸಿ ಸರ್ಕಲ್, ನಗರಸಭೆ ಸರ್ಕಲ್, ಸರ್ಕಾರಿ ಆಸ್ಪತ್ರೆ, ಕಾಳಿದಾಸ ಸರ್ಕಲ್, ಬಾಗಲಕೋಟೆ ಬಸ್ ನಿಲ್ದಾಣ, ದಡ್ಡೇನವರ ಆಸ್ಪತ್ರೆ ಮಾರ್ಗವಾಗಿ ಮರಳಿ ಜಿಲ್ಲಾಡಳಿತ ಭವನಕ್ಕೆ ಮುಕ್ತಾಯಗೊಂಡಿತು.
ಮತದಾನ ಜಾಗೃತಿ ಸಂದೇಶವುಳ್ಳ ಟೀ ಶರ್ಟ್ ಮತ್ತು ಕ್ಯಾಪ್‌ಗಳನ್ನು ಧರಿಸಿ ಎಲ್ಲರು ಗಮನ ಸೆಳೆದರು. ಜಾಥಾದಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಅಮರೇಶ ನಾಯಕ, ಯೋಜನಾ ನಿರ್ದೇಶಕ ಶಶಿಕಾಂತ ಶಿವಪುರೆ, ಸರ್ಕಾರಿ ನೌಕರರ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ರಾಜ್ಯ ಪರಿಷತ್ ಸದಸ್ಯ ಸತ್ಯರೆಡ್ಡಿ, ಜಿಲ್ಲಾ ಕಾರ್ಯದರ್ಶಿ ವಿಠಲ ವಾಲಿಕಾರ, ಗೌರವಾಧ್ಯಕ್ಷ ಗೋಪಾಲ ನೀಲನಾಯಕ, ಸುರೇಶ ಇಂಜಿಗನೇರಿ, ಹಿರಿಯ ಉಪಾಧ್ಯಕ್ಷ ರಮೇಶ ಚವ್ಹಾಣ, ಉಪಾಧ್ಯಕ್ಷ ವೆಂಕಟೇಶ ತಿಮ್ಮನಾಯಕ ಸೇರಿದಂತೆ ಸಿಬ್ಬಂದಿ ಹಾಗೂ ನೌಕರರ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.