ಕೆಜಿಬಿವಿ ಶಾಲೆ ಶೈಕ್ಷಣಿಕ, ಸ್ವಚ್ಛತಾ ವ್ಯವಸ್ಥೆಗೆ ಅಧಿಕಾರಿಗಳ ಮೆಚ್ಚುಗೆ

KannadaprabhaNewsNetwork |  
Published : Sep 28, 2026, 02:30 AM IST
27ದದದದ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾದಾಮಿತಾಲೂಕಿನ ಯಂಕಂಚಿ ಮಣಿನಾಗರ ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಗೆ (ಕೆಜಿಬಿವಿ) ಬೆಂಗಳೂರಿನ ಸಮಗ್ರ ಶಿಕ್ಷಣ ಕರ್ನಾಟಕ (ಎಸ್‌ಎಸ್‌ಕೆ) ರಾಜ್ಯ ಯೋಜನಾ ನಿರ್ದೇಶಕರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕಿ ಚಂದ್ರಕಲಾ ಎಚ್.ಎಸ್. ಹಾಗೂ ಎಸ್‌ಎಸ್‌ಕೆ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ವಿಜಯಲಕ್ಷ್ಮಿ ಪಾಟೀಲ ಶನಿವಾರ ಭೇಟಿ ನೀಡಿ ಶಾಲೆಯ ಶೈಕ್ಷಣಿಕ ಹಾಗೂ ವಸತಿ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಬಾದಾಮಿತಾಲೂಕಿನ ಯಂಕಂಚಿ ಮಣಿನಾಗರ ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಗೆ (ಕೆಜಿಬಿವಿ) ಬೆಂಗಳೂರಿನ ಸಮಗ್ರ ಶಿಕ್ಷಣ ಕರ್ನಾಟಕ (ಎಸ್‌ಎಸ್‌ಕೆ) ರಾಜ್ಯ ಯೋಜನಾ ನಿರ್ದೇಶಕರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕಿ ಚಂದ್ರಕಲಾ ಎಚ್.ಎಸ್. ಹಾಗೂ ಎಸ್‌ಎಸ್‌ಕೆ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ವಿಜಯಲಕ್ಷ್ಮಿ ಪಾಟೀಲ ಶನಿವಾರ ಭೇಟಿ ನೀಡಿ ಶಾಲೆಯ ಶೈಕ್ಷಣಿಕ ಹಾಗೂ ವಸತಿ ವ್ಯವಸ್ಥೆಗಳನ್ನು ಪರಿಶೀಲಿಸಿದರು.ಪರೀಕ್ಷೆ ನಡೆಯುತ್ತಿದ್ದ ತರಗತಿ ಕೊಠಡಿಗಳಿಗೆ ಭೇಟಿ ನೀಡಿದ ಅಧಿಕಾರಿಗಳು, ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಪರಿಶೀಲಿಸಿದರು. ಶಾಲಾ ಆವರಣದಲ್ಲಿನ ಹಸಿರು ಪರಿಸರ, ಗೋಡೆಗಳ ಮೇಲಿನ ಐತಿಹಾಸಿಕ ಹಾಗೂ ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ ಚಿತ್ರಗಳು, ಹೂವಿನ ಗಿಡಗಳು, ಹಳೆಯ ವಸ್ತುಗಳನ್ನು ಬಳಸಿಕೊಂಡು ನಿರ್ಮಿಸಿರುವ ಅಲಂಕಾರಿಕ ಗಿಡಗಳ ವ್ಯವಸ್ಥೆ ಹಾಗೂ ತಾವರೆ ಗಿಡಗಳ ಅಲಂಕಾರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಮಾತನಾಡಿದ ಚಂದ್ರಕಲಾ, ಪರೀಕ್ಷೆಯನ್ನು ಶಾಂತವಾಗಿ ಹಾಗೂ ಸ್ವತಂತ್ರವಾಗಿ ಬರೆಯುವಂತೆ ಸಲಹೆ ನೀಡಿದರು. ವಿದ್ಯಾರ್ಥಿಗಳ ಪ್ರಯತ್ನವೇ ಮುಖ್ಯವಾಗಿದ್ದು, ಶಿಕ್ಷಕರು ಮಾರ್ಗದರ್ಶನ ನೀಡುವ ಪಾತ್ರ ವಹಿಸುತ್ತಾರೆ ಎಂದರು. ವಿದ್ಯಾರ್ಥಿಗಳ ಶಿಸ್ತು, ಸಮವಸ್ತ್ರ ಹಾಗೂ ಹಾಜರಾತಿಯ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು.ವಸತಿ ನಿಲಯದ ಬಾತ್‌ರೂಮ್, ಶೌಚಾಲಯ, ಊಟದ ವ್ಯವಸ್ಥೆ, ಡೈನಿಂಗ್ ಹಾಲ್ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಪರಿಶೀಲಿಸಿದರು. 6, 7 ಮತ್ತು 8ನೇ ತರಗತಿ ವಿದ್ಯಾರ್ಥಿಗಳ ವಸತಿ ವ್ಯವಸ್ಥೆಗೆ ಅನುಕೂಲವಾಗುವಂತೆ ಅಗತ್ಯ ಬದಲಾವಣೆ ಮಾಡಿಕೊಳ್ಳುವ ಕುರಿತು ಮುಖ್ಯ ಶಿಕ್ಷಕಿಗೆ ಮಾರ್ಗದರ್ಶನ ನೀಡಿದರು.ಶಾಲಾ ಆವರಣದಲ್ಲಿ ಬೆಳೆದಿರುವ ನುಗ್ಗೆ, ನಿಂಬೆ, ಕರಿಬೇವು, ನೆಲ್ಲಿಕಾಯಿ ಹಾಗೂ ತೆಂಗಿನ ಗಿಡಗಳು ಅಡುಗೆ ಮನೆಗೆ ಉಪಯುಕ್ತವಾಗಿರುವುದನ್ನು ಗಮನಿಸಿದ ಅವರು, ಶಾಲಾ ಆವರಣದ ಹಸಿರು ಪರಿಸರವನ್ನು ಮತ್ತಷ್ಟು ಉತ್ತಮವಾಗಿ ನಿರ್ವಹಿಸುವಂತೆ ಸಲಹೆ ನೀಡಿದರು. ಗಿಡಗಳ ಎಲೆ-ಕೊಂಬೆಗಳನ್ನು ವ್ಯರ್ಥವಾಗಿ ಬಿಸಾಡದೆ ಗೊಬ್ಬರವಾಗಿ ಬಳಸುವಂತೆ ತಿಳಿಸಿದರು.ಶಾಲೆಯ ಪರಿಸರವನ್ನು ‘ಸುಂದರ ವನ, ಶಾಂತಿಯ ತೋಟ’ ಎಂದು ಬಣ್ಣಿಸಿದ ಚಂದ್ರಕಲಾ, ಸಿಬ್ಬಂದಿಯ ಶ್ರಮವನ್ನು ಶ್ಲಾಘಿಸಿದರು.ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ವಿಜಯಲಕ್ಷ್ಮಿ ಪಾಟೀಲ ಮಾತನಾಡಿ, ಇತರೆ ಶಾಲೆಗಳಿಗೆ ಹೋಲಿಸಿದರೆ ಈ ಶಾಲೆ ವಿಭಿನ್ನವಾಗಿದ್ದು, ಪ್ರತಿಯೊಬ್ಬ ಸಿಬ್ಬಂದಿಯೂ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ. ದೊಡ್ಡಪ್ಪನ್ನವರ, ಜಿಲ್ಲಾ ಕಚೇರಿಯ ತಾಂತ್ರಿಕ ಸಹಾಯಕ ಅರವಿಂದ ಜವಳಗಿ, ಶಾಲೆಯ ಮುಖ್ಯ ಗುರುಮಾತೆ ಬಸಮ್ಮ ನರಸಾಪೂರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮನೆಗೆ ಮುತ್ತಿಗೆ
ರಾಜ್ಯ ಗೃಹ ಇಲಾಖೆ ಮೇಲೆ ನಿರೀಕ್ಷೆ ಇಲ್ಲ: ಯತ್ನಾಳ