ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಕೆಇಬಿ ಕಚೇರಿ ಮುಂದೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತ ಭಾರತ ಪಕ್ಷದಿಂದ ಹಮ್ಮಿಕೊಂಡಿರುವ 7ನೇ ಪೂರೈಸಿದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಯ ಗೃಹ ಜ್ಯೋತಿ ಯೋಜನೆಯಿಂದ ಬಡವರನ್ನು ವಂಚಿಸುವ ಉದ್ದೇಶ ರಾಜ್ಯ ಸರ್ಕಾರ ಹೊಂದಿದೆ ಎಂದು ಗಂಭೀರ ಆರೋಪ ಮಾಡಿದರು.ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಲಿಂಗರಾಜ ಬಿದರಕುಂದಿ ಮಾತನಾಡಿ, ರೈತ ಭಾರತ ಪಕ್ಷದಿಂದ ಹಮ್ಮಿಕೊಂಡಿರುವ ಹೋರಾಟವು ಜನಪರವಾಗಿದೆ. ಕೂಡಲೇ ಅಧಿಕಾರಿಗಳು ಹಾಗೂ ಜಿಲ್ಲೆಯ ಶಾಸಕರು ಸಚಿವರು ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.ಮುಖಂಡ ನೀಲಾಂಬಿಕಾ ಬಿರಾದಾರ ಮಾತನಾಡಿ, ಕಳೆದ 7 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಕೂಡಾ ಅಧಿಕಾರಿಗಳು ಮತ್ತು ಸರ್ಕಾರ ಜನರ ಬೇಡಿಕೆಗೆ ಸ್ಪಂದಿಸದೇ ಇರುವುದು ಪ್ರಜಾಪ್ರಭುತ್ವದ ದುರಂತವಾಗಿದೆ. ಕೂಡಲೇ ಜನರಿಗೆ ಆಗುತ್ತಿರುವ ವಿದ್ಯುತ್ ಸಂಪರ್ಕ ಸಮಸ್ಯೆಯನ್ನು ಬಗೆ ಹರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ, ಕೆ.ಎಂ.ಹುಂಡೇಕಾರ, ಚಾಂದಸಾಬ್ ಗೊಳಸಂಗಿ, ಸುಂದರ ಚವ್ಹಾಣ, ಲಾಯಪ್ಪ ಇಂಗಳೆ, ಅನೀಲ ಇಕ್ಕಡೆ, ವಿಠ್ಠಲ ಕರಿಗಾರ, ಎಂ.ಎಚ್.ಬಿದರಕುಂದಿ, ಹರೂಮಶೇಖ, ಅಂಬಣ್ಣ ಗುನ್ನಾಪೂರ, ಅಶೋಕ ವಾಲಿಕಾರ, ಗಣೇಶ ಡೋಣೂರ, ಶರಣು ಕಿರಾಣಗಿ, ಅಶೋಕ ಚೋಳಕೆ, ಪರಶುರಾಮ ಗಾಯಕವಾಡ, ಮಲ್ಲಿಕಾರ್ಜುನ ಲಂಗೋಟಿ, ಮಲ್ಲಿಕಾರ್ಜುನ ಉಮರಾಣಿ, ರಾಜು ಕುಮಟಗಿ, ಅಶೋಕ ಚೋಳಕೆ, ಅನೀಲ ಪವಾರ, ರವೀಂದ್ರ ಜಾಧವ, ಎಸ್.ಎಸ್.ಉಪ್ಪಲದಿನ್ನಿ, ಎಸ್.ಎಸ್.ಮುಜಾವರ, ಎಸ್.ಎಸ್.ಮೆಂಡೇಗಾರ, ದೀಪಕ ರಾಠೋಡ, ಎಸ್.ಎಸ್.ಸಾಲೋಟಗಿ, ಎ.ಎಚ್.ಪಟೇಲ, ಐ.ಎಂ.ಸುತಾರ, ರಫೀಕ್ ಬಾಗವಾನ, ಇಸಾಕಅಹ್ಮದ್ ಮೇಟಿ, ಎಂ.ಐ.ಪಟೇಲ, ಎನ್.ಎಸ್.ಅಪಬರ, ಬಿ.ಜಿ.ಶಿಂಧೆ, ಎಸ್.ಬಿ.ಶಿಂಧೆ, ಎಂ.ಹುಸೇನ, ಸಿದ್ದಪ್ಪ ಬಿಸನಾಳ, ಜಗದೇವ ಸೂರ್ಯವಂಶಿ, ಸುರೇಶ ನಿನ್ನೆ ಸೇರಿದಂತೆ ಮುಂತಾದವರು ಇದ್ದರು.