ಕನ್ನಡಪ್ರಭ ವಾರ್ತೆ ಮೈಸೂರು
ಹತ್ತು ದಿನಗಳ ಹಿಂದೆ ನಗರಪಾಲಿಕೆ ಕೆಲಸ ಮಾಡುವ ವೇಳೆ ಮೃತಪಟ್ಟ ಬಡ ದಿನಗೂ ಕಾರ್ಮಿಕ ಕುಟುಂಬ ವರ್ಗಕ್ಕೆ ಮೈಸೂರು ನಗರ ಪಾಲಿಕೆಯ ಅಧಿಕಾರಿಗಲು ಪರಿಹಾರವನ್ನು ನೀಡಿಲ್ಲ, ಜತೆಗೆ ಕನಿಷ್ಠ ಪಕ್ಷ ಕುಟುಂಬ ವರ್ಗಕ್ಕೆ ಸಾಂತ್ವನವನ್ನು ಹೇಳಿಲ್ಲ!ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ದುಗ್ಗಹಟ್ಟಿ ಗ್ರಾಮದ ನಿವಾಸಿಯಾದ ನಾಗರಾಜು ಎಂಬವರ ಏಕೈಕ ಪುತ್ರ ಎನ್. ಮನು (26) ಮೃತಪಟ್ಟ ದುದೈವಿ. ಇವರಕು ಮೈಸೂರು ನಗರ ಪಾಲಿಕೆ ಸೇರಿರುವ ಸುಭಾಷ್ ನಗರದಲ್ಲಿ ಬಡಾಮಕಾನ್ ಬಳಿಯ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರುವ ಸಮುದಾಯ ಭವನ ಹಿಂಭಾಗದಲ್ಲಿರುವ ದೊಡ್ಡ ಚರಂಡಿ ಯ ಕಾಮಗಾರಿ ನಡೆಸುವಾಗ ಅ.20 ರಂದು ಮೃತಪಟ್ಟರು. ಜೆಸಿಬಿ ಯಂತ್ರದ ಮೂಲಕ ಅವೈಜ್ಞಾನಿಕವಾಗಿ ಚರಂಡಿಯ ಹೂಳು ತೆಗೆಯುವಾಗ ಮಧ್ಯಾಹ್ನ 3.30ರ ಸಮಯದಲ್ಲಿ ಸಮುದಾಯದ ಕಾಂಪೌಂಡ್ ಬಳಿಯಲ್ಲಿ ಇದ್ದ ಎನ್. ಮನು ಮೇಲೆ ಏಕಾಏಕಿ ಕುಸಿದು ಬಿದಿದ್ದೆ, ತಕ್ಷಣ ಅಲ್ಲಿದ ಸ್ಥಳೀಯ ಕೂಲಿ ಕಾರ್ಮಿಕರ ನೆರವಿನಿಂದ ಆಸತ್ರೆಗೆ ಸಾಗಿಸಲಾಗಿದೆ. ಅಷ್ಟರಲ್ಲಿ ತೀವ್ರವಾದ ಗಾಯವಾದ ಹಿನ್ನೆಲೆ ಮೃತಪಟ್ಟರು. ಈ ಬಗ್ಗೆ ಮೃತನ ತಂದೆ ನಾಗರಾಜು ಅ. 21 ರಂದು ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿಸಿ ಮರಣೋತ್ತರ ಪರೀಕ್ಷೆಯನ್ನು ಮಾಡಿಸಿದ್ದಾರೆ.
ಘಟನೆಯ ಬಗ್ಗೆ ಪಾಲಿಕೆ ಆಯುಕ್ತರು ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ.ಮನೆಗೆ ಆಧಾರವಾಗಿದ್ದ ಮಗ:
ಎನ್. ಮನು ಎರಡು ವರ್ಷಗಳ ಹಿಂದೆ ಪ್ರೀತಿ ಎಂಬವರನ್ನು ವಿವಾಹವಾದಿದ್ದರು. ತಂದೆ ನಾಗರಾಜು, ತಾಯಿ ಚಂದ್ರಮ್ಮ ಅವರಿಗೆ ಆಧಾರವಾಗಿದ್ದ, ಈತನೇ ಕೂಲಿ ಮಾಡಿ ದುಡಿದು ಕುಟುಂಬ ವರ್ಗವನ್ನು ಸಾಕುತ್ತಿದ್ದ, ನಮ್ಮ ಜೀವನಕ್ಕೆ ಆಧಾರವಾಗಿದ್ದ, ಇದರಿಂದ ಮದುವೆ ಹಾಗೂ ಮನೆ ನಿರ್ಮಾಣಕ್ಕೆ ಲಕ್ಷಂತರ ರು. ಗಳನ್ನು ಸಾಲ ಮಾಡಿದ ಹಣವನ್ನು ಇವನ್ನೇ ತೀರಿಸಿಕೊಂಡು ಬರುತ್ತಿದ್ದ, ಆದರೆ ಈತನ ಸಾವಿನಿಂದ ಬಡ ವರ್ಗದ ಕುಟುಂಬವು ಮತ್ತಷ್ಟು ಜೀವನದ ಕಷ್ಟದ ಸಂಕಷ್ಟಕ್ಕೆ ಸಿಲುಕಿದೆ.ಬಾರದ ಅಧಿಕಾರಿಗಳು ಹಾಗೂ ಗುತ್ತಿಗೆದಾರ:
ಮೈಸೂರು ನಗರ ಪ್ರದೇಶದಲ್ಲಿ ನಡೆದಿರುವ ಈ ಕೌಂಪೌಂಡ್ ಕುಸಿತದಿಂದ ಮೃತಪಟ್ಟಿರುವ ಕೂಲಿ ಕಾರ್ಮಿಕ ನಿಧನ ಸುದ್ದಿ ತಿಳಿದ ಗುತ್ತಿಗೆದಾರ ವೆಂಕಟಚಲಪತಿ ಅಥವಾ ಮೈಸೂರು ನಗರಪಾಲಿಕೆ ಸಂಬಂಧಪಟ್ಟ ಎಂಜಿನಿಯರ್, ಆಯುಕ್ತರು ಸೇರಿದಂತೆ ಯಾರು ಈ ಘಟನೆ ಬಗ್ಗೆ ಮಾಹಿತಿ ತಿಳಿದಿದ್ದರೂ ಕೂಡ ಮೃತಪಟ್ಟ ಕುಟುಂಬ ವರ್ಗಕ್ಕೆ ಹಲವು ದಿನಗಳೇ ಕಳೆದರೂ ಸೌಜನ್ಯಕಾದರೂ ಸಾಂತ್ವನ ಹೇಳಿಲ್ಲ.ಸರ್ಕಾರವು ನೆರವು ನೀಡಬೇಕು ಬಡ ವರ್ಗದ ಕೂಲಿ ಕಾರ್ಮಿಕ ಕುಟುಂಬ ವರ್ಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ಈ ಬಗ್ಗೆ ಪರಿಶೀಲಿಸಿ ಈ ಬಡವರ್ಗದ ಕೂಲಿ ಕಾರ್ಮಿಕ ಕುಟುಂಬ ವರ್ಗಕ್ಕೆ ನೆರವನ್ನು ನೀಡುವುದರ ಜತೆಗೆ ಇದಕ್ಕೆ ಕಾರಣರಾದ ಅಧಿಕಾರಿಗಳು ಹಾಗೂ ಗುತ್ತಿಗೆದಾರನ್ನು ವಿರುದ್ಧ ಸೂಕ್ತ ಕಾನೂನು ಕ್ರಮವಹಿಸಬೇಕು ಎಂಬುದು ಪೋಷಕರ ಮನವಿ.
ನಮ್ಮ ಕುಟುಂಬ ವರ್ಗಕ್ಕೆ ಇವನೇ ಆಸರೆಯಾಗಿ ದುಡಿದು ಜೀವನ ಸಾಗಿಸುತ್ತಿದ್ದೇವು, ಆದರೆ ಮೈಸೂರಿನ ನಗರಪಾಲಿಕೆಯ ಕೆಲಸ ಮಾಡುವ ವೇಳೆ ಪಾಲಿಕೆಗೆ ಸೇರಿರುವ ಕಾಂಪೌಂಡ್ ಕುಸಿದು ಬಿದ್ದು ನನ್ನ ಮಗ ಮೃತಪಟ್ಟಿದ್ದು, ಹಲವು ದಿನಗಳು ಕಳೆದಿದ್ದು, ಆದರೂ ಕನಿಷ್ಠ ಪಕ್ಷ ಕುಟುಂಬ ವರ್ಗಕ್ಕೆ ಮೈಸೂರಿನ ಆಯುಕ್ತರು ಸೌಜನ್ಯಕದರು ಭೇಟಿ ನೀಡಿ ಸಾಂತ್ವನ ತುಂಬುವ ಕೆಲಸವನ್ನು ಮಾಡಿಲ್ಲ. ಇದರಿಂದ ನನ್ನ ಮಗನ ಸಾವಿಗೆ ಕಾರಣದವರ ವಿರುದ್ಧ ಸೂಕ್ತ ಕಾನೂನು ಕ್ರಮವಹಿಸಬೇಕಾಗಿದೆ. ಈ ಬಗ್ಗೆ ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಪ್ರಕರಣವನ್ನು ದಾಖಲಿಸಲಾಗಿದೆ.- ನಾಗರಾಜು, ಮೃತ ಮನು ತಂದೆ