ಮರಿತಿಬ್ಬೇಗೌಡ ಪರವಾಗಿ ವಿವಿಧೆಡೆ ಎಂ.ಕೆ. ಸೋಮಶೇಖರ್ ಮತಯಾಚನೆ

KannadaprabhaNewsNetwork | Published : Jun 2, 2024 1:48 AM

ಸಾರಾಂಶ

ಜೂ.3 ರಂದು ಕರ್ನಾಟಕ ವಿಧಾನಪರಿಷತ್ತಿಗೆ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದಿಂದ ಮರಿತಿಬ್ಬೇಗೌಡರು ಸ್ಪರ್ಧಿಸಿದ್ದಾರೆ. ಈಗಾಗಲೇ 4 ಬಾರಿ ವಿಧಾನಪರಿಷತ್ತಿಗೆ ಆಯ್ಕೆಯಾಗಿ ತಮ್ಮ ಸಾಮರ್ಥ್ಯ, ಬದ್ಧತೆಯನ್ನೂ ಪ್ರದರ್ಶಿಸಿ ಶಿಕ್ಷಕರ ಪರವಾದ ಒಂದು ಗಟ್ಟಿ ದನಿಯಾಗಿದ್ದಾರೆ. ಶಿಕ್ಷಕರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ, ಅವುಗಳನ್ನು ಪರಿಹರಿಸುವಲ್ಲಿ ಯಾವ ರಾಜಿಗೂ ಸಿದ್ಧರಾಗದೆ ಹೋರಾಡುತ್ತಾ ಬಂದಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ವಿಧಾನಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮರಿತಿಬ್ಬೇಗೌಡ ಅವರ ಪರವಾಗಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅವರು ತೊಣಚಿಕೊಪ್ಪಲು ಹೇಮಾವತಿ ಶಾಲೆ, ಜ್ಞಾನದೀಪ ಕಾಲೇಜು, ಭಾರತ ಸೇವಾದಳ ಅನುದಾನಿತ ಪ್ರೌಢಶಾಲೆ, ಕುವೆಂಪು ಪ್ರೌಢಶಾಲೆ, ಸೆಂಟ್ ಮೆರೀಸ್ ಸಂಸ್ಥೆಗಳಿಗೆ ಭೇಟಿ ನೀಡಿ ಮೊದಲ ಪ್ರಾಶಸ್ತ್ಯದ ಮತ ನೀಡುವಂತೆ ಕೋರಿದರು.

ಈ ವೇಳೆ ಮಾಜಿ ಮೇಯರ್ ಟಿ.ಬಿ. ಚಿಕ್ಕಣ್ಣ, ಪಾಲಿಕೆ ಮಾಜಿ ಸದಸ್ಯ ಜೆ. ಗೋಪಿ, ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ. ಸೋಮಶೇಖರ್, ಮುಖಂಡರಾದ ಜಗನ್ನಾಥ್ ಭೋವಿ, ವಿಶ್ವನಾಥ್, ಶೇಖರ್, ಸುಂದರ್,

ಮಹೇಶ್, ಮಹ್ಮದ್ ಫಾರೂಖ್ ಮೊದಲಾದವರು ಇದ್ದರು.ಮರಿತಿಬ್ಬೇಗೌಡರಿಗೆ ಮೈಸೂರು ವಿಭಾಗ ಮಟ್ಟದ ಎಸ್ಸಿ, ಎಸ್ಟಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಬೆಂಬಲ

ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಅವರನ್ನು ಬೆಂಬಲಿಸಲು ನಿರ್ಧರಿಸಿರುವುದಾಗಿ ಮೈಸೂರು ವಿಭಾಗ ಮಟ್ಟದ ಎಸ್ಸಿ, ಎಸ್ಟಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ತಿಳಿಸಿದರು.

ಇತ್ತೀಚೆಗೆ ವಿಭಾಗ ಮಟ್ಟದ ಎಸ್ಸಿ, ಎಸ್ಟಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ನಡೆದ ಸಭೆಯಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಅವರನ್ನು ಬೆಂಬಲಿಸಲು ತೀರ್ಮಾನಿಸಲಾಯಿತು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮರಿತಿಬ್ಬೇಗೌಡ ಅವರು ಕಳೆದ 4 ಬಾರಿಯೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪರವಾಗಿ ಕೆಲಸ ಮಾಡಿದ್ದಾರೆ. ಹಿಂದಿನಿಂದಲೂ ಸಾಮಾಜಿಕವಾಗಿ ಎಲ್ಲಾ ಸಮುದಾಯಗಳ ಪರವಾಗಿ ನಿಂತಿದ್ದಾರೆ. ಅದರಲ್ಲೂ ಈ ಭಾಗದಲ್ಲಿ 135 ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಮಾನವಾಗಿ ಅನುದಾನ ಹಂಚಿಕೆ ಮಾಡಿದ್ದಾರೆ. ತಮ್ಮ ವ್ಯಾಪ್ತಿಯಲ್ಲಿ ಆದಷ್ಟು ನೆರವು ನೀಡುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆಗಿಳಿದಿರುವ ಅವರಿಗೆ ಮತ್ತೆ ಮತ ನೀಡುವ ಮೂಲಕ ಅವರನ್ನು ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.ಒಕ್ಕೂಟದ ಚನ್ನಮಲ್ಲಯ್ಯ, ಸೌಕಯ್ಯ ಇದ್ದರು.

ಮರಿತಿಬ್ಬೇಗೌಡರಿಗೆ ಮೊದಲ ಪ್ರಾಶಸ್ತ್ಯ ಮತ ನೀಡಲು ಕೆ.ವಿ. ಮಲ್ಲೇಶ್ ಮನವಿಕನ್ನಡಪ್ರಭ ವಾರ್ತೆ ಮೈಸೂರು

ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಅವರಿಗೆ ನಿಮ್ಮ ಮೊದಲ ಪ್ರಾಶಸ್ತ್ಯದ ಮತ ನೀಡುವಂತೆ ನಗರ ಪಾಲಿಕೆಯ ಮಾಜಿ ಸದಸ್ಯ ಹಾಗೂ ಅನಿಕೇತನ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವಿ. ಮಲ್ಲೇಶ್ ಮನವಿ ಮಾಡಿದ್ದಾರೆ.

ಜೂ.3 ರಂದು ಕರ್ನಾಟಕ ವಿಧಾನಪರಿಷತ್ತಿಗೆ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದಿಂದ ಮರಿತಿಬ್ಬೇಗೌಡರು ಸ್ಪರ್ಧಿಸಿದ್ದಾರೆ. ಈಗಾಗಲೇ 4 ಬಾರಿ ವಿಧಾನಪರಿಷತ್ತಿಗೆ ಆಯ್ಕೆಯಾಗಿ ತಮ್ಮ ಸಾಮರ್ಥ್ಯ, ಬದ್ಧತೆಯನ್ನೂ ಪ್ರದರ್ಶಿಸಿ ಶಿಕ್ಷಕರ ಪರವಾದ ಒಂದು ಗಟ್ಟಿ ದನಿಯಾಗಿದ್ದಾರೆ. ಶಿಕ್ಷಕರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ, ಅವುಗಳನ್ನು ಪರಿಹರಿಸುವಲ್ಲಿ ಯಾವ ರಾಜಿಗೂ ಸಿದ್ಧರಾಗದೆ ಹೋರಾಡುತ್ತಾ ಬಂದಿದ್ದಾರೆ ಎಂದು ತಿಳಿಸಿದ್ದಾರೆ.ಶಿಕ್ಷಕರ ಸ್ಥಿತಿಗತಿ ಶಕ್ತಿ ಸಾಮರ್ಥ್ಯ ಸಮಸ್ಯೆಗಳ ಬಗ್ಗೆ ಅವರಿಗಿರುವ ತಿಳಿವಳಿಕೆ, ಜ್ಞಾನ ಅಗಾಧವಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಮರಿತಿಬ್ಬೇಗೌಡರು ತಮ್ಮ ಸರಳತೆ ಮತ್ತು ಸ್ನೇಹಶೀಲ ಗುಣಗಳಿಂದ ಬಹಳ ದೊಡ್ಡ ಪ್ರೀತಿ ಸಂಪಾದಿಸಿದ್ದಾರೆ. ಹೀಗಾಗಿ, ಮರಿತಿಬ್ಬೇಗೌಡ ಅವರಿಗೆ ನಿಮ್ಮ ಮೊದಲ ಪ್ರಾಶಸ್ತ್ಯದ ಮತನೀಡಿ. ಶಿಕ್ಷಕರನ್ನು ಪ್ರತಿನಿಧಿಸಲು ಅವರಿಗಿಂತ ಯೋಗ್ಯರು ಇಲ್ಲಿ ಯಾರೂ ಇಲ್ಲ ಎಂಬುದು ನಿಮಗೂ ಗೊತ್ತು ಎಂದು ಅವರು ಹೇಳಿದ್ದಾರೆ.

Share this article