ರಾಮನಿಗೆ ಪೇಜಾವರ ಶ್ರೀ ರಜತ ಕಲಶಾಭಿಷೇಕ

KannadaprabhaNewsNetwork |  
Published : Jan 25, 2024, 02:03 AM IST
ಕಲಶ | Kannada Prabha

ಸಾರಾಂಶ

ರಜತಕಲಶಗಳನ್ನು ರಾಮ ಮಂದಿರಕ್ಕೆ ವಾದ್ಯ ಘೋಷಗಳೊಂದಿಗೆ ಮೆರವಣಿಗೆಯಲ್ಲಿ ತರಲಾಯಿತು. ವೈದಿಕರ ವಿವಿಧ ಜಪ ಹೋಮ ಹವನಾದಿಗಳನ್ನು ನಡೆಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಅಯೋಧ್ಯೆಯಲ್ಲಿ ಶ್ರೀ ರಾಮ ದೇವರಿಗೆ ನಡೆಯುತ್ತಿರುವ ಮಂಡಲೋತ್ಸವದ 2ನೇ ದಿನ ಬುಧವಾರ ಪೇಜಾವರ ಶ್ರೀಗಳು ವಿಶೇಷವಾಗಿ ಕಲಶಾರಾಧನೆ ನಡೆಸಿ ರಜತಕಲಶಗಳಿಂದ ಶ್ರೀರಾಮನ ಅಭಿಷೇಕ ನೆರವೇರಿಸಿದರು.

ಇದಕ್ಕೆ ಮೊದಲು ರಜತಕಲಶಗಳನ್ನು ರಾಮ ಮಂದಿರಕ್ಕೆ ವಾದ್ಯ ಘೋಷಗಳೊಂದಿಗೆ ಮೆರವಣಿಗೆಯಲ್ಲಿ ತರಲಾಯಿತು. ವೈದಿಕರ ವಿವಿಧ ಜಪ ಹೋಮ ಹವನಾದಿಗಳನ್ನು ನಡೆಸಿದರು.

ನಂತರ ಶ್ರೀಗಳು ಧರ್ಮಸ್ಥಳದ ವತಿಯಿಂದ ಡಾ.ವೀರೇಂದ್ರ ಹೆಗ್ಗಡೆ ಅವರು ಸಲ್ಲಿಸಿದ್ದ ಬೆಳ್ಳಿಯ ಪೂಜಾ ಪರಿಕರಗಳನ್ನು ಮಂದಿರದ ಟ್ರಸ್ಟ್ ಗೆ ಹಸ್ತಾಂತರಿಸಿದರು. ಈ ಪರಿಕರಗಳಲ್ಲಿದ್ದ ಬೆಳ್ಳಿಯ ಕಶಲದಿಂದಲೇ ರಾಮನಿಗೆ ಕಲಶಾಭಿಷೇಕ ನಡೆಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬು ಬೆಳೆಗಾರರಿಗೆ ₹300 ಕೋಟಿ ಬಿಡುಗಡೆ
ಮಾ.2ಕ್ಕೆ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ