ಕನ್ನಡಪ್ರಭ ವಾರ್ತೆ ಚಿತ್ತಾಪುರ
ವಿಧಾನಸಭೆ ವ್ಯಾಪ್ತಿಯ ಭಂಕೂರ ಮತ್ತು ರಾವೂರ ಜಿಪಂ ವ್ಯಾಪ್ತಿಯಲ್ಲಿ ಲೊಕಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಅಚ್ಛೆದಿನ್ ತರುವುದಾಗಿ ಹೇಳಿ ಅಧಿಕಾರಕ್ಕೆ ಬಂದು ಹತ್ತು ವರ್ಷ ಕಳೆದಿದ್ದು ಅಚ್ಛೆದಿನ್ ಬದಲಾಗಿ ಬೆಲೆ ಏರಿಕೆ, ಸಿಲಿಂಡರ್ ಬೆಲೆ, ಪೆಟ್ರೋಲ್, ಡಿಜಲ್, ನಿರುದ್ಯೊಗ, ರೈತರ ಆತ್ಮಹತ್ಯೆ, ಕನಿಷ್ಟ ಬೆಂಬಲ ಬೆಲೆ ಹಾಗೂ ರೈತರ ಆದಾಯ ದ್ವೀಗುಣಗೊಳಿಸುವ ಯಾವ ಅಶ್ವಾಸನೆಗಳು ಈಡೇರಿಲ್ಲಾ. ಅವರಿಂದ ದೊಡ್ಡ ಉದ್ದಿಮೆದಾರರಿಗೆ ಅನುಕೂಲವಾಗಿದೆಯೇ ಹೊರತು ಸಾಮಾನ್ಯ ಜನರ ಸಮಸ್ಯೆಗಳಲ್ಲಾ ಎಂದರು. ಈಗ ನಮ್ಮ ಗ್ಯಾರಂಟಿಗಳನ್ನು ಕಾಫಿ ಮಾಡಿರುವ ಪ್ರಧಾನಿ ಮೊದಿ ಹೆಸರಲ್ಲಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ಅವುಗಳಿಗೆ ವಾರಂಟಿ ಇಲ್ಲಾ ಅವರದ್ದು ಏನಿದ್ದರೂ ಪೇಪರ ಮೇಲಿನ ಗ್ಯಾರಂಟಿಗಳು ನಮ್ಮ ಗ್ಯಾರಂಟಿಗಳು ಜನರ ಕೈಯಲ್ಲಿ ಇವೆ ಎಂದು ಟೀಕಿಸಿದರು.
ನಮ್ಮ ಜಿಲ್ಲೆಯ ಸಂಸದಾರಾಗಿ ೫ ವರ್ಷಗಳಲ್ಲಿ ಅವರ ಸಾಧನೆಯನ್ನು ಮತದಾರರ ಮುಂದೆ ಇಡದೇ ಸೊಲುವ ಭೀತಿಯಿಂದ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ನನ್ನ ವಿರುದ್ದ ಸುಳ್ಳು ಆರೊಪಗಳನ್ನು ಮಾಡುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ. ತಾವು ತಮ್ಮ ಊರಿಗೆ ಸಂಸದ ಡಾ. ಜಾಧವ ಬಂದಾಗ ನಿನ್ನ ಅವಧಿಯಲ್ಲಿನ ಅಭಿವೃದ್ದಿ ಏನು ಎಂದು ಪ್ರಶ್ನೆ ಮಾಡಬೇಕು ಎಂದರು.ಮಾಜಿ ಸಚಿವ ಬಾಬುರಾವ ಚಿಂಚನಸೂರ ಮಾತನಾಡಿ ಡಾ. ಉಮೇಶ ಜಾಧವ ಸುಳ್ಳುಗಾರ ಅವರು ಕೊಲಿ ಸಮಾಜವನ್ನು ಎಸ್‌ಟಿ ಸೇರಿಸುವದಾಗಿ ಹೇಳಿದ್ದರಿಂದ ನಾನು ಬಿಜೆಪಿಗೆ ಹೊಗಿದ್ದೇ. ಆದರೆ ಮೊಸ ಮಾಡಿದ ಅವನ ಮಾತನ್ನು ನಂಬಬೇಡಿ ಎಂದು ಹೇಳಿದರು.
ಕಾಂಗ್ರೆಸ್ ಲೊಕಸಭೆ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ನಾಗರೆಡ್ಡಿ ಪಾಟೀಲ್ ಕರದಾಳ, ಶಿವಾನಂದ ಪಾಟೀಲ್ ಮಾತನಾಡಿದರು.