ಕನ್ನಡಪ್ರಭ ವಾರ್ತೆ ಮೈಸೂರು
ಕಾರ್ಮಿಕರ ದಿನಾಚರಣೆ ಹಿನ್ನೆಲೆಯಲ್ಲಿ ತಮ್ಮ ಗೃಹ ಕಚೇರಿಯಲ್ಲಿ ಗುರುವಾರ ವಿವಿಧೆಡೆಯಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರನ್ನು ಅಭಿನಂದಿಸಿ ಮಾತನಾಡಿದ ಅವರು, ರಾಷ್ಟ್ರ ಅಭಿವೃದ್ಧಿ ಆಗಬೇಕಾದರೆ ಕಾರ್ಮಿಕರ ಕೊಡುಗೆ ಅಪಾರವಾಗಿದೆ. ಅವರನ್ನು ದುಡಿಸಿಕೊಂಡು ಅವರ ಸೇವೆಯನ್ನು ನಿರ್ಲಕ್ಷ ಮಾಡಬಾರದು. ಅದು ಮಾನವೀಯತೆ ಆಗುವುದಿಲ್ಲ ಎಂದರು.
ಕಾರ್ಮಿಕರು ಬಹಳ ಒತ್ತಡದಿಂದ ಕೆಲಸ ನಿರ್ವಹಿಸುತ್ತಾರೆ. ಅವರ ಆರೋಗ್ಯದ ಬಗ್ಗೆ ಹೆಚ್ಚು ಒತ್ತು ಕೊಡುವ ವಾತಾವರಣ ನಿರ್ಮಾಣವಾಗಬೇಕು. ಅವರಿಗೆ ಎಲ್ಲಿವರೆಗೆ ಶಕ್ತಿ ಇರುತ್ತದೆ ಅಲ್ಲಿವರೆಗೆ ಮಾತ್ರ ಅವರ ದುಡಿಮೆಗೆ ಬೆಲೆ ಇರುತ್ತದೆ. ಅವರಿಗೆ ದುಡಿಯಲು ಶಕ್ತಿ ಇಲ್ಲದಿದ್ದಾಗ ಆರ್ಥಿಕವಾಗಿ ಅತ್ಯಂತ ದುರ್ಬಲರಾಗಿಬಿಡುತ್ತಾರೆ. ಇದನ್ನು ಸಮಾಜ ಮತ್ತು ಸರ್ಕಾರ ಮನಗಾಣಬೇಕು. ಅವರೂ ವಿಶ್ರಾಂತ ಜೀವನವನ್ನು ನೆಮ್ಮದಿಯಿಂದ ಕಳೆಯಲು ವಾತಾವರಣ ನಿರ್ಮಿಸಬೇಕು ಎಂದು ಅವರು ಹೇಳಿದರು.ಈ ವೇಳೆ ಜೊಮ್ಯಾಟೋ ಮಹದೇವಸ್ವಾಮಿ, ಭದ್ರತಾ ಸಿಬ್ಬಂದಿ ನಾಗರಾಜು, ಆಟೋ ಚಾಲಕ ವೆಂಕಟೇಶ್, ಜಾಕಿ ಗಾರ್ಮೆಂಟ್ಸ್ ನ ಲಕ್ಷ್ಮಿ, ಪೌರಕಾರ್ಮಿಕರಾದ ಚೆನ್ನಮ್ಮ, ಕೆಎಸ್ಐಸಿಯ ಎನ್.ಸಿ. ಚೈತ್ರಾ, ವಸಂತಾ ಅವರನ್ನು ಸನ್ಮಾನಿಸಲಾಯಿತು.
ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ. ಸೋಮಶೇಖರ್, ಶ್ರೀಧರ್, ಮುಖಂಡರಾದ ರವಿಶಂಕರ್, ವಿಜಯ್ ಕುಮಾರ್, ಗುಣಶೇಖರ್, ಮಹ್ಮದ್ ಫಾರೂಖ್, ಮಹೇಂದ್ರ, ಸಂತೋಷ್, ಅಭಿಷೇಕ್, ರಾಮನ್, ನಾಗಮಹದೇವ ಮೊದಲಾದವರು ಇದ್ದರು.