ಶ್ರೀನಿವಾಸ ಬಬಲಾದಿ
ಲೋಕಾಪುರ ರೈಲು ನಿಲ್ದಾಣವನ್ನು ಗೂಡ್ಸ್ ರೈಲುಗಳ ಸಂಚಾರಕ್ಕೆ ಮುಕ್ತಗೊಳಿಸಿದ್ದು, ಕಾರ್ಖಾನೆಗಳ ಮಾಲೀಕರಿಗೆ ಸಂತಸವಾದರೆ, ಸಾರ್ವಜನಿಕರಿಗೆ ಹಾಗೂ ರೈಲು ಹೋರಾಟಗಾರರಿಗೆ ಬೇಸರ ವ್ಯಕ್ತವಾಗಿದೆ.
ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲ ಆಗಲೆಂದು ಸಾರ್ವಜನಿಕರು ಹಾಗೂ ರೈಲು ಹೋರಾಟಗಾರರು ಬಾಗಲಕೋಟೆ-ಕುಡಚಿ ರೈಲು ಮಾರ್ಗಕ್ಕಾಗಿ ಹಲವು ವರ್ಷಗಳ ಹೋರಾಟದ ತಪಸಿನ ಫಲವಾಗಿ ಇಂದು ರೈಲು ಮಾರ್ಗ ಲೋಕಾಪುರವರೆಗೆ ಬಂದು ತಲುಪಿದೆ. ರೈಲು ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳುತ್ತಿದಂತೆ ಸಾರ್ವನಿಕರ ಪ್ರಯಾಣಕ್ಕೆ ಪ್ಯಾಸೆಂಜರ್ ರೈಲು ಓಡಿಸಿ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದ್ದ ಅಧಿಕಾರಿಗಳು, ಈಗ ಕೇವಲ ಗೂಡ್ಸ್ ರೈಲು ಪ್ರಾರಂಭಿಸಿರುವುದು ಸಾರ್ವಜನಿಕರಲ್ಲಿ ಗೊಂದಲಕ್ಕೆ ದೂಡಿದೆ. ಆದರೆ ರೈಲು ಅಧಿಕಾರಿಗಳು ಈ ಭಾಗದಲ್ಲಿ ಸಕ್ಕರೆ, ಸಿಮೆಂಟ್ ಹಾಗೂ ಸುಣ್ಣದ ಕಲ್ಲು ಕಾರ್ಖಾನೆಗಳ ಹೆಚ್ಚಿಗೆ ಇರುವುದರಿಂದ ಈ ಮಾರ್ಗದಲ್ಲಿ ರೈಲು ಓಡಾಟ ಮಾಲೀಕರಿಗೆ ಅನುಕೂಲವಾಗಲೆಂದು ರೈಲು ಅಧಿಕಾರಿಗಳು ಪ್ರತಿದಿನ ಬೆಳಗ್ಗೆ ೬ ರಿಂದ ರಾತ್ರಿ ೧೦ರವರೆಗೆ ರೈಲು ಓಡಾಟಕ್ಕೆ ಅನಕೂಲ ಮಾಡಿಕೊಟ್ಟಿದ್ದು ಸಾರ್ವಜನಿಕರಿಗೆ ನಿರಾಸೆ ಮೂಡಿಸಿದಲ್ಲದೇ ವಿರೋಧ ವ್ಯಕ್ತ ಪಡಿಸಿದ್ದಾರೆ.ಪೂರ್ಣಗೊಳ್ಳದ ಕಾಮಗಾರಿ:
ಕುಡಚಿ ತಲುಪದ ರೈಲು:
ಸಂಬಂಧಿಸಿದ ಸಂಸದರು ಹಾಗೂ ರೈಲು ಇಲಾಖೆ ಅಧಿಕಾರಿಗಳು ಇತ್ತ ಕಡೆ ಮುತುವರ್ಜಿ ವಹಿಸಿ ಗೂಡ್ಸ್ ರೈಲುಗಳ ಸಂಚಾರಕ್ಕೆ ಮುನ್ನ ಪ್ಯಾಸೆಂಜರ್ ರೈಲು ಓಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರ ಹಾಗೂ ಹೋರಾಟಗಾರ ಒತ್ತಾಯವಾಗಿದೆ.
ಕೋಟ್
-ಕುತುಬುದ್ದೀನ ಖಾಜಿ,ಕುಡಚಿ ರೈಲು ಮಾರ್ಗ ನಿರ್ಮಾಣದ ಹೋರಾಟ ಸಮಿತಿ ಅಧ್ಯಕ್ಷ
ಸಾರ್ವಜನಿಕರಿಗೆ ಅನೂಕುಲವಾಗಲೆಂದು ಈ ಭಾಗದ ರೈತರು ಕುಡಚಿ ರೈಲು ಮಾರ್ಗಕ್ಕೆ ಜಮೀನು ನೀಡಿದ್ದಾರೆ. ಆದರೆ, ಅಧಿಕಾರಿಗಳು ಕಾರ್ಖಾನೆಗಳ ಮಾಲೀಕರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಗೂಡ್ಸ್ ರೈಲು ಪ್ರಾರಂಭಿಸಿದ್ದಾರೆ. ಒಂದು ವೇಳೆ ಪ್ಯಾಸೆಂಜರ್ ರೈಲು ಬೀಡದೆ, ಗೂಡ್ಸ್ ರೈಲು ಬಿಟ್ಟರೆ ನಮ್ಮ ವಿರೋಧವಿದ್ದು ಸಾರ್ವಜನಿಕರೊಂದಿಗೆ ಪ್ರತಿಭಟನೆ ಮಾಡಲಾಗುವುದು.