ನಗರ ಪಾಲಿಕೆ ವಲಯ ಕಚೇರಿ- 3 ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

KannadaprabhaNewsNetwork | Published : Apr 27, 2025 1:30 AM

ಸಾರಾಂಶ

ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಐದು ವಾರ್ಡ್‌ ಹೊಂದಿರುವ ವಲಯ -3ರ ಕಚೇರಿ ಕಟ್ಟಡವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿದರು

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ನಗರ ಪಾಲಿಕೆಯ ವಲಯ ಕಚೇರಿ 3ರ ನೂತನ ಕಟ್ಟಡವನ್ನು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

ಶಾರದಾದೇವಿ ನಗರ ಹೈಟೆನ್ಷನ್‌ ರಸ್ತೆಯ ತಿಬ್ಬಾದೇವಿ ವೃತ್ತದ ಬಳಿ ನಿರ್ಮಿಸಿರುವ ಈ ವಲಯ ಕಚೇರಿಯನ್ನು ಸಿದ್ದರಾಮಯ್ಯ ಟೇಪು ಕತ್ತರಿಸುವ ಮೂಲಕ ಉದ್ಘಾಟಿಸಿ ಶುಭ ಕೋರಿದರು. ಬಳಿಕ ಕಚೇರಿ ಒಳಗಿನ ಡಾ.ಬಿ.ಆರ್‌. ಅಂಬೇಡ್ಕರ್‌ ಪುತ್ಥಳಿಗೆ ಪುಷ್ಪಾರ್ಚನ ನೆರವೇರಿಸಿ ಗೌರವ ಸಲ್ಲಿಸಿದರು. ಕಚೇರಿ ಆವರಣದಲ್ಲಿನ ಅಶೋಕ ಸ್ಥಂಭಕ್ಕೂ ಪುಷ್ಪನಮನ ಸಲ್ಲಿಸಿದರು.

ಈ ವೇಳೆ ಸಿದ್ದರಾಮಯ್ಯ ಅವರಿಗೆ ಶಾಲು ಹೊದಿಸಿ, ಸಂವಿಧಾನ ಗ್ರಂಥ ನೀಡಿ ಗೌರವಿಸಲಾಯಿತು.

ಶಾಸಕ ಜಿ.ಟಿ. ದೇವೇಗೌಡ ಅವರ ಕ್ಷೇತ್ರಕ್ಕೆ ಒಳಪಡುವ ಕಚೇರಿ ಉದ್ಘಾಟನಾ ಸಮಾರಂಭಕ್ಕೆ ಸಿದ್ದರಾಮಯ್ಯ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. 6.5 ಕೋಟಿ ರೂ. ವೆಚ್ಚದಲ್ಲಿ ಈ ಕಟ್ಟಡ ನಿರ್ಮಿಸಲಾಗಿದೆ.

ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಐದು ವಾರ್ಡ್‌ ಹೊಂದಿರುವ ವಲಯ -3ರ ಕಚೇರಿ ಕಟ್ಟಡವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿದರು. ಸಂವಿಧಾನ ಪೀಠಿಕೆ, ನಾಮಫಲಕ ಅನಾವರಣಗೊಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪೂರ್ಣಕುಂಭ ಹೊತ್ತ ಮಹಿಳೆಯರು ಸ್ವಾಗತಿಸಿದರು.

ಇತರೆ ಕಾರ್ಯಕ್ರಮಗಳಿಗೆ ತುರ್ತಾಗಿ ತೆರಳಬೇಕಿದ್ದರಿಂದ ಸಿಎಂ ಸಭಾಂಗಣಕ್ಕೆ ಆಗಮಿಸಲಿಲ್ಲ. ಆಗ ಸಭಾಂಗಣವನ್ನು ಜಿ.ಟಿ. ದೇವೇಗೌಡರೆ ಉದ್ಘಾಟಿಸಿದರು.

ವಿಧಾನ ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ಡಾ.ಡಿ. ತಿಮ್ಮಯ್ಯ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ, ಎಡಿಸಿ ಡಾ.ಪಿ. ಶಿವರಾಜು, ನಗರ ಪಾಲಿಕೆ ಆಡಳಿತಾಧಿಕಾರಿ ಡಿ.ಎಸ್. ರಮೇಶ್, ಉಪ ಆಯುಕ್ತೆ ಕೆ.ಜೆ. ಸಿಂಧು, ಜಿ.ಎಸ್. ಸೋಮಶೇಖರ್, ದಾಸೇಗೌಡ, ವಲಯ ಸಹಾಯಕ ಆಯುಕ್ತ ಟಿ.ಎಸ್. ಸತ್ಯಮೂರ್ತಿ, ಐಜಿಪಿ ಡಾ. ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತ ಸೀಮಾಲಾಟ್ಕರ್, ಡಿಸಿಪಿಗಳಾದ ಎಂ. ಮುತ್ತುರಾಜ್, ಕೆ.ಎಸ್. ಸುಂದರರಾಜ್, ಮುಡಾ ಮಾಜಿ ಅಧ್ಯಕ್ಷ ಕೆ. ಮರೀಗೌಡ, ಮಾಜಿ ಮೇಯರ್‌ ಬಿ.ಎಲ್. ಭೈರಪ್ಪ, ಆರಿಫ್ ಹುಸೇನ್, ಮೋದಾಮಣಿ, ಟಿ.ಬಿ. ಚಿಕ್ಕಣ್ಣ, ಪುಷ್ಪಲತಾ, ನಗರ ಪಾಲಿಕೆ ಮಾಜಿ ಸದಸ್ಯರಾದ ಕೆ.ವಿ. ಮಲ್ಲೇಶ್, ಜೆ. ಗೋಪಿ, ಲೋಕೇಶ್ (ಪಿಯಾ), ಸುನಿಲ್, ಎಸ್. ಜಗದೀಶ್‌ ಗೌಡ, ರಜನಿ ಅಣ್ಣಯ್ಯ, ಶೋಭಾ ಸುನಿಲ್, ನಿರ್ಮಲಾ ಹರೀಶ್ ಮೊದಲಾದವರು ಇದ್ದರು.

Share this article