ಒಂದು ಸಮುದಾಯದ ಓಲೈಕೆ ಎದ್ದು ಕಾಣುತ್ತಿದೆ: ಛಲವಾದಿ ನಾರಾಯಣಸ್ವಾಮಿ

KannadaprabhaNewsNetwork | Published : Sep 14, 2024 1:46 AM

ಸಾರಾಂಶ

ಟಾರ್ಗೆಟ್ ಮಾಡಿ ಕೆಲವರ ಅಂಗಡಿಗಳಿಗೆ ಬೆಂಕಿ ಹಾಕಲಾಗಿದೆ. ಇದರ ಹಿಂದಿನ ಉದ್ದೇಶ ಏನು..? ಯಾರು ಮಾಡಿದ್ರು ಗೊತ್ತಾಗಬೇಕು. ಕಳೆದ ವರ್ಷವೂ ಇಲ್ಲಿ ಗಲಾಟೆ ನಡೆದಿದೆ. ಸರ್ಕಾರ ಎಚ್ಚೆತ್ತು ಶ್ರದ್ಧೆ ವಹಿಸಬೇಕಿತ್ತು. ಗಣಪತಿ ಮೆರವಣಿಗೆ ವೇಳೆ ಭದ್ರತೆ ಒದಗಿಸಬೇಕಿತ್ತು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಗಣೇಶಮೂರ್ತಿ ಮೆರವಣಿಗೆ ವೇಳೆ ಪಟ್ಟಣದಲ್ಲಿ ಉಂಟಾದ ಕೋಮುಗಲಭೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಶುಕ್ರವಾರ ಮಧ್ಯಾಹ್ನ ಪಟ್ಟಣಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ನಾಗಮಂಗಲದ ಕೋಮುಗಲಭೆ ವಿಷಯ ಗಂಭೀರವಾಗಿದೆ. ಇಲ್ಲಿನ ಸ್ಥಿತಿ ನೋಡಿದರೆ ಮನಕುಲಕುತ್ತದೆ. ಒಂದು ಸಮುದಾಯವನ್ನು ಓಲೈಕೆ ಮಾಡುತ್ತಿರುವುದು ಎದ್ದು ಕಾಣಿತ್ತಿದೆ ಎಂದರು.

ಹಿಂದುಗಳು ಹಬ್ಬ ಆಚರಣೆ ಮಾಡುವುದು ಕಾನೂನು ಬಾಹಿರವೇ. ಹೀಗೆ ಮುಂದುವರೆದರೆ ದೇಶ ಎಲ್ಲಿಗೆ ಹೋಗಿ ನಿಲ್ಲಬಹುದು ಎಂದು ಪ್ರಶ್ನಿಸಿದರು.

ಟಾರ್ಗೆಟ್ ಮಾಡಿ ಕೆಲವರ ಅಂಗಡಿಗಳಿಗೆ ಬೆಂಕಿ ಹಾಕಲಾಗಿದೆ. ಇದರ ಹಿಂದಿನ ಉದ್ದೇಶ ಏನು..? ಯಾರು ಮಾಡಿದ್ರು ಗೊತ್ತಾಗಬೇಕು. ಕಳೆದ ವರ್ಷವೂ ಇಲ್ಲಿ ಗಲಾಟೆ ನಡೆದಿದೆ. ಸರ್ಕಾರ ಎಚ್ಚೆತ್ತು ಶ್ರದ್ಧೆ ವಹಿಸಬೇಕಿತ್ತು. ಗಣಪತಿ ಮೆರವಣಿಗೆ ವೇಳೆ ಭದ್ರತೆ ಒದಗಿಸಬೇಕಿತ್ತು ಎಂದರು.

ಹಿಂದು ಆಚರಣೆ ವಿರೋಧಿಸಿದರೆ ಮುಂದೆ ಅವರ ಆಚರಣೆಗಳನ್ನು ವಿರೋಧಿಸಬೇಕಾಗುತ್ತದೆ. ಗಲಭೆಯಿಂದ ಬಡ ಜನರು ಬೀದಿಗೆ ಬಂದಿದ್ದಾರೆ. ವಿಧಾನ ಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದವರನ್ನು ಲೆಕ್ಕಕ್ಕೆ ಇಡಲಿಲ್ಲ. ಕಾಂಗ್ರೆಸ್ ಮುಖವಾಡ ಧರಿಸಿ ಮತೀಯ ಶಕ್ತಿ ತಲೆ ಎತ್ತುತ್ತಿದೆ. ಪ್ರಕರಣದ ಎಫ್‌ಐಆರ್ ರದ್ದುಪಡಿಸಿ ಬೆಂಕಿ ಇಟ್ಟವರನ್ನು ಎ-1 ಆರೋಪಿ ಮಾಡಬೇಕು. ಸಂತ್ರಸ್ಥರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಕೇಂದ್ರ ಸಚಿವರೆದುರು ಮಹಿಳೆಯರ ಅಳಲು

ನಾಗಮಂಗಲ: ನಾಗಮಂಗಲ ಪಟ್ಟಣದಲ್ಲಿ ನಡೆದಿರುವ ಗಲಭೆ ವಿಚಾರವಾಗಿ ಬಂಧನಕೊಳಗಾದ ಕುಟುಂಬಸ್ಥರು ಕೇಂದ್ರಸಚಿವ ಎಚ್.ಡಿ.ಕುಮಾರಸ್ವಾಮಿ ಅವರೆದುರು ಅಳಲು ವ್ಯಕ್ತಪಡಿಸಿದರು. ಅಮಾಯಕರನ್ನು ಬಂಧಿಸಿ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.ವಿಡಿಯೋದಲ್ಲಿ ಇಲ್ಲದಿದ್ದರೆ ವಾಪಸ್ ಕಳುಹಿಸುತ್ತೇನೆ ಎಂದಿದ್ದರು. ಈಗ ಜೈಲಿಗೆ ಕಳುಹಿಸಿ ದೌರ್ಜನ್ಯ ಮಾಡಿದ್ದಾರೆಂದು ಕಣ್ಣೀರಿಟ್ಟರು.

ವೈಯಕ್ತಿಕ ಪರಿಹಾರ ಘೋಷಣೆ:ನಾಗಮಂಗಲ ಗಲಭೆಯಲ್ಲಿ ನಷ್ಟಕ್ಕೊಳಗಾದ ವ್ಯಾಪಾರಿಗಳಿಗೆ ವೈಯಕ್ತಿಕವಾಗಿ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ. ಎಲ್ಲ ಸಮುದಾಯದವರಿಗೂ ಸಮಾನವಾಗಿ ಪರಿಹಾರ ನೀಡುತ್ತೇನೆ. ನಾನು ಎರಡೂ ಧರ್ಮದವರ ಪರವಾಗಿದ್ದು, ಎರಡೂ ಕಡೆಯವರಿಗೂ ನೆರವು ನೀಡುವುದಾಗಿ ಸ್ಪಷ್ಟಪಡಿಸಿದರು.

Share this article