ಬೈಂದೂರು: ಇಲ್ಲಿನ ಸರ್ಕಾರಿ ಪ್ರಥಮದ ರ್ಜೆ ಕಾಲೇಜಿನ ಸಭಾಂಗಣದಲ್ಲಿ ರಾಣಿ ಅಬ್ಬಕ್ಕ ಜಯಂತೋತ್ಸವ ಆಚರಣೆ ಸಮಿತಿ ವತಿಯಿಂದ ರಾಣಿ ಅಬ್ಬಕ್ಕ 500ನೇ ಜಯಂತೋತ್ಸವ ನಡೆಯಿತು. ರಾಣಿ ಅಬ್ಬಕ್ಕನ ಧೀರತ್ವ, ಜೀವನ ಸಾಧನೆ, ಚರಿತ್ರೆ, ಯಶೋಗಾಥೆ ಮತ್ತು ಕೊಡುಗೆಯನ್ನು ವಿದ್ಯಾರ್ಥಿಗಳಿಗೆ ವಿವರಣಾತ್ಮಕವಾದ ಎಐ ವಿಡಿಯೋ ಪ್ರದರ್ಶನದ ಮೂಲಕ ಪ್ರಸ್ತುತಪಡಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ನಾಗರಾಜ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಇಂತಹ ಐತಿಹಾಸಿಕ ಚಾರಿತ್ರ್ಯವುಳ್ಳ ಕರಾವಳಿ ಹೆಣ್ಣು ಮಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ರೂಪಿಸಿದ್ದನ್ನು ಶ್ಲಾಘಿಸಿದರು.ಜೆಸಿಐ ಬೈಂದೂರು ಸಿಟಿಯ ಪೂರ್ವ ಅಧ್ಯಕ್ಷೆ ಅನಿತಾ ಆರ್. ಕೆ., ಉದ್ಯಮಿಗಳಾದ ಗಣೇಶ ಗಾಣಿಗ ಉಪ್ಪುಂದ, ಗೋಪಾಲ್ ವಸ್ರೆ, ಯೋಗೇಂದ್ರ ಶೆಟ್ಟಿ, ರಾಜೇಂದ್ರ ಬಿಜೂರ್ ಉಪಸ್ಥಿತರಿದ್ದರು.
ಉಪನ್ಯಾಸಕ ನವೀನ್ ಎಚ್. ಜೆ. ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ಇತರ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು