ಹೆತ್ತ ತಾಯಿ, ಹೊತ್ತ ನೆಲ ಸದಾ ಪೂಜಿಸಬೇಕು

KannadaprabhaNewsNetwork |  
Published : Aug 08, 2025, 02:00 AM IST
ಸೈನ್ಯದಲ್ಲಿ ಸುಮಾರು 24 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತರಾಗಿ ಆಗಮಿಸಿದ ಯೋಧ ಮಹಾಂತೇಶ ಮಾಟೋಳ್ಳಿ ಕುಟುಂಬವನ್ನು ಅಭಿನಂದನಾ ಸಮಾರಂಭದಲ್ಲಿ ಶ್ರೀಗಳು, ಗಣ್ಯರು ಸನ್ಮಾನಿಸಿದರು. | Kannada Prabha

ಸಾರಾಂಶ

ನಮಗೆ ಜನ್ಮ ಕೊಟ್ಟ ತಾಯಿ, ಹೊತ್ತ ನೆಲವನ್ನು ನಿರ್ಲಕ್ಷಿಸದೇ ಸದಾ ಅವರ ಸ್ಮರಣೆ ಮಾಡಿ ಪೂಜಿಸಬೇಕು ಎಂದು ಹೊಸೂರ ಗುರು ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ನಮಗೆ ಜನ್ಮ ಕೊಟ್ಟ ತಾಯಿ, ಹೊತ್ತ ನೆಲವನ್ನು ನಿರ್ಲಕ್ಷಿಸದೇ ಸದಾ ಅವರ ಸ್ಮರಣೆ ಮಾಡಿ ಪೂಜಿಸಬೇಕು ಎಂದು ಹೊಸೂರ ಗುರು ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ ನುಡಿದರು.

ಪಟ್ಟಣದ ಮುರಗೋಡ ರಸ್ತೆಯ ಗಣಾಚಾರಿ ಕಲ್ಯಾಣ ಮಂಟಪದಲ್ಲಿ ಬುಡರಕಟ್ಟಿಯ ನಿವೃತ್ತ ಯೋಧ ಮಹಾಂತೇಶ ಮಾಟೋಳ್ಳಿ ಗೆಳೆಯರ ಬಳಗ, ತಾಲೂಕು ಮಾಜಿ ಸೈನಿಕರ ಸಮನ್ವಯ ಸಮಿತಿ ಹಮ್ಮಿಕೊಂಡ ಸ್ವಾಗತ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಯುವಕರು ರಾಷ್ಟ್ರದ ಶಕ್ತಿಯಾಗಿದ್ದು, ಸೈನ್ಯ ಸೇರಿ ಸೇವೆ ಮಾಡುವ ಅವಕಾಶ ಪಡೆದುಕೊಳ್ಳಬೇಕು ಎಂದರು.ನಿವೃತ್ತ ಯೋಧ ಮಹಾಂತೇಶ ಮಾಟೊಳ್ಳಿ ಸತ್ಕಾರ ಸ್ವೀಕರಿಸಿ ಮಾತನಾಡಿ, ಸುಮಾರು 24 ವರ್ಷಗಳ ಸೈನಿಕ ಸೇವೆ ಸಂತೃಪಿ ತಂದಿದೆ. ಸಮಾಜ ನಮಗೇನು ಮಾಡಿದೆ ಎನ್ನುವುದು ಮೂರ್ಖತನವಾಗಿದ್ದು, ಸಮಾಜದ ಅಭಿವೃದ್ಧಿಗಾಗಿ ನಮ್ಮ ಶ್ರಮ ವಿನಿಯೋಗಿಸದಾಗ ಮಾತ್ರ ಜೀವನ ಸಾರ್ಥಕ ಆಗಲಿದೆ. ದೇಶ ಸೇವೆಗೆ ನನ್ನ ಅವಕಾಶಕ್ಕಿಂತ ನನಗೆ ಜನ್ಮ ನೀಡಿದ ಜನನಿಯನ್ನು ಯಾವತ್ತೂ ಮರೆಯಲ್ಲ. ಏಕೆಂದರೇ ಸೈನಿಕನಾಗಲು ಪ್ರೇರೇಪಣೆ ಮಾಡಿದವರೇ ಅವಳಾಗಿದ್ದಾಳೆ ಎಂದರು. ಶಾಖಾ ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮಾಜಿ ಸೈನಿಕರ ಸಮನ್ವಯ ಸಮಿತಿಯ ತಾಲೂಕಾಧ್ಯಕ್ಷ ಬಿ.ಬಿ.ಬೋಗೂರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಿವನವ್ವ ಮಡಿವಾಳಪ್ಪ ಮಾಟೊಳ್ಳಿ, ಬೆಳಗಾವಿಯ ಮುನೀಶ್ವರ ಮೋಟರ್ಸ್‌ ವ್ಯವಸ್ಥಾಪಕ ಲಿಂಗರಾಜ ಜಗಜಂಪಿ, ಕಿತ್ತೂರು ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಶಿವಾನಂದ ಕೋಲಕಾರ ಇದ್ದರು.ಮಾಜಿ ಸೈನಿಕರಾದ ಬಸನಗೌಡ ಪಾಟೀಲ, ಶಿವರುದ್ರಪ್ಪ ಮಂಗಳಗಟ್ಟಿ, ಶಂಕ್ರಯ್ಯ ಪೂಜೇರ, ರಾಜಕುಮಾರ ಸವಟಗಿ, ಬಸವರಾಜ ಹೊಂಡಪ್ಪನವರ, ದೇಮಪ್ಪ ಶಿವಬಸನ್ನವರ, ಗಂಗಪ್ಪ ಬಬಲಿ, ಈರಣ್ಣ ತಡಕೋಡ, ಶಿವಪ್ಪ ಗರಗದ, ವೆಂಕಟೇಶ ಬಂಡಿವಡ್ಡರ, ಸುಭಾಶ ಅಂಬೋಜಿ, ಬಸವರಾಜ ಹಡಪದ, ಗೂಳಪ್ಪ ಗೂಳಣ್ಣವರ, ಸೋಮಯ್ಯ ಪೂಜೇರ, ಬಸವರಾಜ ಮಡಿವಾಳರ ಮುಂತಾದವರು ಉಪಸ್ಥಿತರಿದ್ದರು. ಉಪನ್ಯಾಸಕ ರಾಮಚಂದ್ರ ಕಾಕಡೆ ಸ್ವಾಗತಿಸಿ, ನಿರೂಪಿಸಿದರು. ಇದಕ್ಕೂ ಮೊದಲು ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಿಂದ ಕಾರ್ಯಕ್ರಮದ ಸ್ಥಳದವರೆಗೆ ಮಾಜಿ ಸೈನಿಕರಿಂದ ಬೈಕ್ ರ್‍ಯಾಲಿ ನಡೆಯಿತು. ಚನ್ಮಮ್ಮನ ಮೂರ್ತಿಗೆ ಮಾಲೆ ಅರ್ಪಿಸಿ ನಂತರ ಸಮಾಧಿಗೆ ನಿವೃತ್ತ ಯೋಧರ ಕುಟುಂಬ ನಮನ ಸಲ್ಲಿಸಿದರು. ನಿವೃತ್ತ ಯೋಧ ಮಹಾಂತೇಶ ಮಾಟೋಳ್ಳಿ ಅಭಿಮಾನಿಗಳ ಬಳಗ, ಮಾಜಿ ಸೈನಿಕರ ಸಮನ್ವಯ ಸಮಿತಿ ವತಿಯಿಂದ ಮಾಟೋಳ್ಳಿ ಕುಟುಂಬದವರನ್ನು ಸನ್ಮಾನಿಸಲಾಯಿತು. ಹಲವಾರು ಮಾಜಿ ಸೈನಿಕರು ಸಾರ್ವಜನಿಕರು ಪಾಲ್ಗೊಂಡಿದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ