ಎಲ್ಲ ಧರ್ಮಗಳ ಅರಿವು ಇರಬೇಕು: ಡಾ.ಗುರುಬಸವ ಶ್ರೀ

KannadaprabhaNewsNetwork |  
Published : Sep 22, 2026, 01:45 AM IST
ಸಮಾರಂಭದಲ್ಲಿ ಸೆಪ್ಟೆಂಬರ್ 25-26ರಂದು ನಡೆಯಲಿರುವ ಬಸವ ತತ್ವ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು | Kannada Prabha

ಸಾರಾಂಶ

12ನೇ ಶತಮಾನದ ಮಡಿವಾಳ ಮಾಚಿದೇವರು 64 ವಿದ್ಯೆಗಳನ್ನು ಒಳಗೊಂಡಿರುವ ವಚನಗಳನ್ನು ರಚಿಸಿದವರಾಗಿದ್ದಾರೆ. ಇದರಲ್ಲಿ ಜೀವನದಲ್ಲಿ ಯಾವ ರೀತಿ ಸಂಸ್ಕಾರ ಅನುಸರಿಸಬೇಕು ಎಂಬುದನ್ನು ಮಹಾಶರಣರು ತಿಳಿಸಿಕೊಟ್ಟಿದ್ದು, ಅವುಗಳ ಅರಿವು ಮುಖ್ಯ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಡಾ.ಗುರುಬಸವ ಮಹಾಸ್ವಾಮೀಜಿ ಹೇಳಿದ್ದಾರೆ.

- ಪಾಂಡೋಮಟ್ಟಿ ವಿರಕ್ತ ಮಠದಲ್ಲಿ 887ನೇ ಮಾಸಿಕ ಶಿವಾನುಭವ ಗೋಷ್ಠಿ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

12ನೇ ಶತಮಾನದ ಮಡಿವಾಳ ಮಾಚಿದೇವರು 64 ವಿದ್ಯೆಗಳನ್ನು ಒಳಗೊಂಡಿರುವ ವಚನಗಳನ್ನು ರಚಿಸಿದವರಾಗಿದ್ದಾರೆ. ಇದರಲ್ಲಿ ಜೀವನದಲ್ಲಿ ಯಾವ ರೀತಿ ಸಂಸ್ಕಾರ ಅನುಸರಿಸಬೇಕು ಎಂಬುದನ್ನು ಮಹಾಶರಣರು ತಿಳಿಸಿಕೊಟ್ಟಿದ್ದು, ಅವುಗಳ ಅರಿವು ಮುಖ್ಯ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಡಾ.ಗುರುಬಸವ ಮಹಾಸ್ವಾಮೀಜಿ ಹೇಳಿದರು.

ತಾಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದಲ್ಲಿ ಏರ್ಪಡಿಸಿದ್ದ 887ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಶರಣ ಮಡಿವಾಳ ಮಾಚಿದೇವರ ಸ್ಮರಣೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಯಾವುದೇ ವ್ಯಕ್ತಿಯು ಒಂದು ಧರ್ಮದ ತತ್ವ- ಸಿದ್ದಾಂತಗಳನ್ನು ಅಳವಡಿಸಿಕೊಂಡರೆ ಬಹು ದೇವೋಪಾಸಕರಾಗಲು ಸಾಧ್ಯವಿಲ್ಲ. ಎಲ್ಲ ಧರ್ಮಗಳ ವಿಚಾರಧಾರೆಗಳನ್ನು ತಿಳಿದುಕೊಳ್ಳಬೇಕು. ಸರ್ಪ ಬಲ್ಲದು ವಾಯುಗುಣವ, ಇರುವೆ ಬಲ್ಲದು ಮಧುರದ ಗುಣವ, ಕೋಳಿ ಬಲ್ಲದು ವೇಳೆಯ ಗುಣವ, ಕಾಗೆ ಬಲ್ಲದು ಗೋತ್ರದ ಗುಣವ, ಮಾನವನಾಗಿ ಹುಟ್ಟಿದ ಬಳಿಕ ಶಿವತತ್ವ ಜ್ಞಾನ ತಿಳಿಯದಿದ್ದರೆ ಪ್ರಾಣಿ-ಪಕ್ಷಿಗಳಿಗಿಂತ ಕಡೆಯಾಗಿರುತ್ತಾನೆ ಎಂಬ ಶರಣರ ತತ್ವಾದಾರ್ಶ ಇಂದಿಗೂ ಸತ್ಯವಾಗಿದೆ ಎಂದು ಮಾಚಿದೇವರು ತಿಳಿಸಿದ್ದಾರೆ ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಕೆ.ಲಿಂಗರಾಜ್ ಮಾತನಾಡಿ, ಮಾಚಿದೇವರು ವೀರಭದ್ರ ದೇವರ ಮತ್ತೊಂದು ಅವತಾರವಾಗಿದೆ. ನೇರ, ನಿಷ್ಠುರ ಚಿಂತನೆಗಳನ್ನು ಅಳವಡಿಸಿಕೊಂಡಂತಹ ಮಹಾಶರಣ ಎಂದರು.

ಕಾರ್ಯಕ್ರಮದಲ್ಲಿ ನಾಲ್ಕುವರೆ ವರ್ಷದ ಬೇಬಿ ಬಸವ ಪೂರ್ವ ಎಂಬ ಬಾಲಕಿ 24 ವಚನಗಳನ್ನು ಪಠಿಸಿ ಭಕ್ತರ ಗಮನ ಸೆಳೆದರು. ರಾಷ್ಟ್ರೀಯ ಬಸವ ದಳದ ಜ್ಯೋತಿ ಸದಾನಂದ್ ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಗಳಾಗಿ ಧೃವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರಶಾಂತ್, ಶಿಕಾರಿಪುರ ಉದ್ಯಮಿ ರಮೇಶ್, ಕಲಾವಿದ ಜಗನ್ನಾಥ್, ಕವಿತ ಚಂದ್ರಪ್ಪ, ಸುಮಾ ಯತೀಶ್, ಜ್ಯೋತಿ, ಶಿವಲಿಂಗಯ್ಯ, ಸುವರ್ಣಮ್ಮ, ಶಿವಮೂರ್ತ್ಯಪ್ಪ, ಚನ್ನಬಸಪ್ಪ, ಎಂ.ಬಿ.ನಾಗರಾಜ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸೆ.25-26ರಂದು ನಡೆಯಲಿರುವ ಬಸವ ತತ್ವ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು.

- - -

-31ಕೆಸಿಎನ್ಜಿ3: ಸಮಾರಂಭದಲ್ಲಿ ಬಸವ ತತ್ವ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಬಸ್ ಗ್ಯಾರಂಟಿ ಇಲ್ಲ.. ಖಾಸಗಿ ಬಸ್‌ಗೆ ಕಾಸಿಲ್ಲ!
ಇಂದು ಗಣೇಶ ವಿಸರ್ಜನೆ: ಬಿಗಿ ಬಂದೋಬಸ್ತ್‌