ಶ್ರೀಕೃಷ್ಣನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು

KannadaprabhaNewsNetwork |  
Published : Sep 05, 2026, 01:30 AM IST
01 | Kannada Prabha

ಸಾರಾಂಶ

ದೇವನಹಳ್ಳಿ: ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಚರಣೆಯ ಪ್ರಯುಕ್ತ ದೇಶದೆಲ್ಲಡೆ ಕೃಷ್ಣ ಜಯಂತಿಯ ಸಂಭ್ರಮಾಚರಣೆ ಮಾಡುವುದರ ಜೊತೆಯಲ್ಲಿ ಅಧರ್ಮ ಹೆಚ್ಚಾದಾಗ ಧರ್ಮಸ್ಥಾಪನೆಗೆ ಜನಿಸಿದ ಕೃಷ್ಣನ ಆದರ್ಶಗುಣಗಳನ್ನು ನಮ್ಮೆಲ್ಲರ ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ದೇವನಹಳ್ಳಿ ತಾಲುಕು ಯಾದವ ಸಂಘದ ಅಧ್ಯಕ್ಷ ಎನ್. ರಘು ಹೇಳಿದರು

ದೇವನಹಳ್ಳಿ: ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಚರಣೆಯ ಪ್ರಯುಕ್ತ ದೇಶದೆಲ್ಲಡೆ ಕೃಷ್ಣ ಜಯಂತಿಯ ಸಂಭ್ರಮಾಚರಣೆ ಮಾಡುವುದರ ಜೊತೆಯಲ್ಲಿ ಅಧರ್ಮ ಹೆಚ್ಚಾದಾಗ ಧರ್ಮಸ್ಥಾಪನೆಗೆ ಜನಿಸಿದ ಕೃಷ್ಣನ ಆದರ್ಶಗುಣಗಳನ್ನು ನಮ್ಮೆಲ್ಲರ ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ದೇವನಹಳ್ಳಿ ತಾಲುಕು ಯಾದವ ಸಂಘದ ಅಧ್ಯಕ್ಷ ಎನ್. ರಘು ಹೇಳಿದರು.

ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಮತ್ತು ಯಾದವ ಸಮಾಜದ ಜೊತೆಗೂಡಿ ಆಚರಿಸಲಾದ ಶ್ರೀ ಕೃಷ್ಣ ಜಯಂತಿ ಅಂಗವಾಗಿ ಗ್ರೇಡ್ ೨ ತಹಶೀಲ್ದಾರ್ ಜಯಕುಮಾರ್ ಶ್ರೀಕೃಷ್ಣನ ಭಾವಚಿತ್ರ ಪೂಜಿಸಿ ಪುಷ್ಪಾರ್ಚನೆ ಮಾಡುವ ತಾಲೂಕು ಆಡಳಿತ ಕಚೇರಿಯಲ್ಲಿ ಪೂಜೆ ನೆರೆವೇರಿಸಿದರು.

ಗ್ರೇಡ್ ೨ ತಹಶೀಲ್ದಾರ್ ಜಯಕುಮಾರ್ ಶ್ರೀಕೃಷ್ಣ ಜನ್ಮವೃತ್ತಾಂತ ಹಾಗು ಮಹಾಭಾರತದಲ್ಲಿ ಕೃಷ್ಣ ಪ್ರಮುಖ ಪಾತ್ರ ವಹಿಸಿದ್ದ ಬಗ್ಗೆ ಸವಿವರವಾಗಿ ಮಾತನಾಡಿದರು.

ಯಾದವ ಸಂಘದ ಖಜಾಂಚಿ ಶ್ರೀಧರ್‌ಮೂರ್ತಿ ಮಾತನಾಡಿ ತಾಲೂಕು ಆಡಳಿತ ಪರವಾಗಿ ಇಲ್ಲಿ ಸರಳವಾಗಿ ಆಚರಿಸುತ್ತಿದ್ದು , ದೇವನಹಳ್ಳಿಯ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿಶೇಷ ಅಲಂಕಾರ ಸಂಜೆ ಯಾದವ ಸಮಾಜ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಕಿರುತೆರೆ ಕಲಾವಿದರಿಂದ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ ಶನಿವಾರ ಶ್ರೀ ವೇಣುಗೋಪಾಲಸ್ವಾಮಿಯನ್ನು ವಿವಿಧ ವಾದ್ಯಗಳ ಕಲಾತಂಡಗಳೊಂದಿಗೆ ಹೂವಿನ ಪಲ್ಲಕ್ಕಿಯ ಮೆರವಣಿಗೆ ಉತ್ಸವಗಳನ್ನು ನಡೆಸಲಾಗುವುದು ಎಂದರು.

ಇದೇ ವೇಳೆ ಯಾದವ ಸಮಾಜದ ಶ್ರೀಕೃಷ್ಣ ವಿದ್ಯಾನಿಕೇತನ ಪ್ರಾಥಮಿಕ ಶಾಲೆಯ ಪುಟ್ಟ ಮಕ್ಕಳು ಶ್ರೀ ಕೃಷ್ಣ ವೇಷ ಮತ್ತು ರಾಧೆಯ ವೇಷ ಧರಿಸಿ ಜಯಂತಿಯಲ್ಲಿ ಪಾಲ್ಗೊಂಡಿದ್ದರು. ಮಕ್ಕಳಿಗೆಲ್ಲಾ ಸಿಹಿ ಹಾಗು ನೆನಪಿನ ಕಾಣಿಕೆ ವಿತರಿಸಿದರು.

ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಗೇಡ್ ೨ ತಹಶೀಲ್ದಾರ್ ಜಯಕುಮಾರ್, ಶಿರೇಸ್ತೇದಾರ್ ಸಂತೋಷ್ , ಭರತ್, ಪುರಸಭೆ ಮುಖ್ಯಧಿಕಾರಿ ಶಿವಮೂರ್ತಿ, ತಾಲೂಕು ಯಾದವ ಸಂಘದ ಅಧ್ಯಕ್ಷ ಎನ್.ರಘು. ಉಪಾಧ್ಯಕ್ಷ ಜಿಂಕಲ ಮುನಿರಾಜ್ ತಾಲೂಕು ಪ್ರಧಾನಕಾರ್ಯದರ್ಶಿ ಅಣ್ಣಪ್ಪ, ಖಜಾಂಚಿ ಬಿ.ಎಲ್.ಶ್ರೀಧರಮೂರ್ತಿ, ಸಂಘಟನಾ ಕಾರ್ಯದರ್ಶಿ ಎನ್.ವೆಂಕಟೇಶ, ನಿದೇರ್ಶಕರುಗಳಾದ ಬಿ.ಎಂ. ವೆಂಕಟರಮಣಪ್ಪ, ಸಿ.ಎಂ.ವೆಂಕಟೇಶ್, ವಿ.ಗೋಪಾಲ್, ಶಿವಾನಂದ, ಆರ್.ಕೃಷ್ಣಮೂರ್ತಿ. ಜಿ.ಪ್ರಕಾಶ್, ಡಿ.ಎನ್.ಗೋವಿಂದರಾಜು, ಆರ್.ನಾಗರಾಜ್, ವಿ.ಮುನಿರಾಜ, ದೇವರಾಜ, ಮುನಿರಾಜು, ರಾಘವೇಂದ್ರ, ಬಿ.ಮಂಜುನಾಥ್ , ಅಶ್ವಥ್ಥನಾರಾಯಣಸ್ವಾಮಿ, ಎಂ. ಮೋಹನ ಕುಮಾರ್, ಸಿ.ಎನ್. ನಾರಾಯಣಸ್ವಾಮಿ, ಬಾಲಕೃಷ್ಣ , ಯಾದವ ಯುವಕ ಸಂಘದ ಗೌರವಾಧ್ಯಕ್ಷ ಮರಿಯಪ್ಪ , ಅಧ್ಯಕ್ಷ ಎನ್.ರವಿ ಸೇರಿದಂತೆ ಸಮುದಾಯದ ಮುಖಂಡರು ಮತ್ತು ತಾಲೂಕು ಕಚೇರಿಯ ಸಿಬ್ಬಂದಿ ಮುಖಂಡರು ಭಾಗವಹಿಸಿದ್ದರು.

೦೪ ದೇವನಹಳ್ಳಿ ಚಿತ್ರಸುದ್ದಿ:೦೨ ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ನಡೆದ ಶ್ರೀ ಕೃಷ್ಣ ಜಯಂತಿಯಲ್ಲಿ ಭಾಗವಹಿಸಿದ್ದ ಗ್ರೇಡ್ ೨ ತಹಶಿಲ್ದಾರ್ ಜಯಕುಮಾರ್, ಶಿರಸ್ತೇದಾರ್ ಸಂತೋಷ್, ಯಾದವ ಸಂಘದ ಅಧ್ಯಕ್ಷ ಎನ್.ರಘು , ಖಜಾಂಚಿ ಶ್ರೀಧರಮೂರ್ತಿ ಬಿ.ಎಲ್, ಪ್ರ.ಕಾರ್ಯದರ್ಶಿ ಅಣ್ಣಪ್ಪ ಮತ್ತು ಮುಖಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೀಮಾ ನದಿ ನೀರು ಬಳೂರ್ಗಿ ಕೆರೆಗೆ: ರೈತರಲ್ಲಿ ಆಶಾಕಿರಣ
ಮೂಡುಗೂರು ಇಮ್ಮಡಿ ಉದ್ದಾನೇಶ್ವರ ಮಠದಲ್ಲಿ ವಚನ ಕಲ್ಯಾಣ