ಕನ್ನಡಪ್ರಭ ವಾರ್ತೆ ಮೂಲ್ಕಿ
ಅಧ್ಯಾಪಕರ ಮುಂದೆ ಕೂತು ಪಾಠ ಕೇಳುವುದರಿಂದ, ಮರುಚಿಂತನೆಯಿಂದ, ಸಹಪಾಠಿಗಳ ಜೊತೆ ಚರ್ಚೆಯಿಂದ ಹಾಗೂ ಜೀವನದ ಅನುಭವದ ಪಾಠದಿಂದ ಕಲಿಯಬೇಕು. ಕೆಟ್ಟ ಮೇಲೆ ಬುದ್ಧಿ ಬರುವುದು, ಬೇರೆಯವರ ತಪ್ಪುಗಳನ್ನು ಕಂಡು ಪಾಠ ಕಲಿಯುವುದು ಹೀಗೆ ಅನುಭವದ ಪಾಠಗಳು ಮುಖ್ಯ. ಅಧ್ಯಯನವೇ ಒಂದು ಪೂಜೆ. ತಲೆಬಾಗಿ ತಿಳಿಯುವ ಅಹಂಕಾರವಿಲ್ಲದೆ ಕಲಿಯುವ ಗುಣಬೇಕು. 5000 ವರ್ಷಗಳ ಹಿಂದೆ ಮಹಾಭಾರತ ನಡೆದಿತ್ತು ಎನ್ನುವುದನ್ನು ಸಂಶೋಧನೆಗಳು ತಿಳಿಸಿವೆ. ರಾಮಾಯಣ ಮಹಾಭಾರತದ ಕತೆಗಳು ಕೇವಲ ಕಾವ್ಯಗಳಲ್ಲ. ಮೌಲ್ಯಗಳನ್ನು, ಧರ್ಮದ ನೆಲೆಯನ್ನು, ಜೀವನದ ಪಾಠವನ್ನು ಹೇಳಿಕೊಡುವಂತಹವು. ಹಬ್ಬಗಳ ಮಹತ್ವವನ್ನು ಅರಿತು ಆಚರಿಸಿದರೆ ಉತ್ತಮ. ಕೃಷ್ಣ ಯಾವತ್ತಿಗೂ ಅತ್ತದ್ದಿಲ್ಲ ಎನ್ನುವುದೂ ನಾವು ಕಲಿಯಬೇಕಾದ್ದೆ. ಒಳ್ಳೆಯ ಕೆಲಸಗಳಲ್ಲಿ, ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಪ್ರಜೆಯಾಗುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಇರಬೇಕೆಂದು ಅವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಕುಸುಮಾವತಿ, ಯಕ್ಷಗಾನ ಗುರು ಲಕ್ಷ್ಮಣ ಮರಕಡ, ಉಪನ್ಯಾಸಕ ಚಂದ್ರಹಾಸ್, ಅಮೃತಾ, ವಿದ್ಯಾರ್ಥಿ ನಾಯಕ ಶಿವಮನ್ಯು ಉಪಸ್ಥಿತರಿದ್ದರು. ತಪಸ್ಯಾ ಸ್ವಾಗತಿಸಿದರು. ವೈಷ್ಣವಿ ನಿರೂಪಿಸಿದರು.