ಕನ್ನಡಪ್ರಭ ವಾರ್ತೆ ತುಮಕೂರು
ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಇಂಗ್ಲಿಷ್ ವಿಭಾಗದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಗಿರೀಶ್ ಕಾರ್ನಾಡರ ಹಯವದನ, ಯಯಾತಿ, ತಲೆದಂಡ ನಾಟಕಗಳ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಭಾಷೆ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗಬಾರದು. ಕನ್ನಡ ನಮ್ಮ ಬದುಕಿನ ಪ್ರತಿದಿನದ ಭಾಷೆಯಾಗಬೇಕು. ನಿತ್ಯಕನ್ನಡವು ವಿಶ್ವಕನ್ನಡವಾಗಿ ಬೆಳೆಯಬೇಕು. ಭಾಷೆಯ ಮೇಲಿನ ಪ್ರೀತಿ ಒಂದು ತಿಂಗಳ ಆಚರಣೆಗೆ ಸೀಮಿತವಾಗದೆ, ನಮ್ಮ ಆಲೋಚನೆ, ಅಭಿವ್ಯಕ್ತಿ ಹಾಗೂ ಜೀವನದ ಭಾಗವಾಗಬೇಕು ಎಂದು ಹೇಳಿದರು.ಗಿರೀಶ್ ಕಾರ್ನಾಡರು ಕನ್ನಡ ಭಾಷೆಗೆ ಅಪಾರ ಕೊಡುಗೆ ನೀಡಿದವರು. ಕನ್ನಡದ ಮೂಲಕ ಜಗತ್ತನ್ನು ಕಾಣಲು ಪ್ರಯತ್ನಿಸಿದ ಅವರು, ತಮ್ಮ ಸಾಹಿತ್ಯ ಮತ್ತು ನಾಟಕಗಳ ಮೂಲಕ ಭಾರತೀಯ ಸಮಾಜದ ಸಂಕೀರ್ಣತೆಗಳನ್ನು ಅನಾವರಣಗೊಳಿಸಿದರು. ಅವರಲ್ಲಿದ್ದ ಕ್ರಿಯಾಶೀಲತೆ, ಅಚಲ ಶ್ರದ್ಧೆ ಮತ್ತು ಧೈರ್ಯ ಇಂದಿನ ಯುವಜನರಿಗೆ ಅತ್ಯಗತ್ಯವಾದ ಗುಣಗಳಾಗಿವೆ ಎಂದು ರಘುನಂದನ ಅಭಿಪ್ರಾಯಪಟ್ಟರು.ಕಲ್ಯಾಣ ಎನ್ನುವುದು ಕೇವಲ ಆಶಯ ಅಥವಾ ಕನಸಿನಿಂದ ಸಾಕಾರಗೊಳ್ಳುವುದಿಲ್ಲ. ಅದನ್ನು ನಾವೆಲ್ಲರೂ ನಿರಂತರ ಪರಿಶ್ರಮ, ಬದ್ಧತೆ ಮತ್ತು ಕ್ರಿಯಾಶೀಲತೆಯ ಮೂಲಕ ಸಾಧಿಸಿಕೊಳ್ಳಬೇಕು. ಯುವಜನರು ಓದು, ಚಿಂತನೆ ಮತ್ತು ಸೃಜನಶೀಲತೆಯ ಮೂಲಕ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.