ಮಂತ್ರಾಲಯ ಮಠಕ್ಕೆ ತಲೆನೋವಾದ ಆನ್ಲೈನ್ ವಂಚಕರು

KannadaprabhaNewsNetwork |  
Published : Oct 11, 2026, 02:15 AM IST
10ಕೆಪಿಆರ್ಸಿಆರ್ 02:  | Kannada Prabha

ಸಾರಾಂಶ

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಬರುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಭಕ್ತರಿಗೆ ಅನುಕೂಲಕ್ಕಾಗಿ ಶ್ರೀಮಠದಿಂದಲೂ ಹತ್ತು ಹಲವು ರೀತಿಯ ಸವಲತ್ತುಗಳನ್ನು ನಿರಂತರವಾಗಿ ಕಲ್ಪಿಸುತ್ತಲೇ ಇದೆ ಆದರೆ ಶ್ರೀಗುರುಸಾರ್ವಭೌಮರ ಭಕ್ತರನ್ನು ನಂಬಿಸಿ ಕೊಠಡಿಗಳು,ಶ್ರೀಮಠದಲ್ಲಿ ಸೇವೆ, ಪ್ರಸಾದ ಸೇರಿದಂತೆ ಅನೇಕ ವ್ಯವಸ್ಥೆಗಳನ್ನು ಕಲ್ಪಿಸುವುದಾಗಿ ಸುಳ್ಳು ಫೋಸ್ಟ್‌ಗಳನ್ನು ಹಾಕುತ್ತಿರುವ ಆನ್‌ಲೈನ್ ವಂಚಕರಿಂದ ಶ್ರೀಮಠಕ್ಕೆ ತಲೆನೋವಾಗಿ ಪರಿಣಮಿಸುತ್ತಿದೆ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಬರುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಭಕ್ತರಿಗೆ ಅನುಕೂಲಕ್ಕಾಗಿ ಶ್ರೀಮಠದಿಂದಲೂ ಹತ್ತು ಹಲವು ರೀತಿಯ ಸವಲತ್ತುಗಳನ್ನು ನಿರಂತರವಾಗಿ ಕಲ್ಪಿಸುತ್ತಲೇ ಇದೆ ಆದರೆ ಶ್ರೀಗುರುಸಾರ್ವಭೌಮರ ಭಕ್ತರನ್ನು ನಂಬಿಸಿ ಕೊಠಡಿಗಳು,ಶ್ರೀಮಠದಲ್ಲಿ ಸೇವೆ, ಪ್ರಸಾದ ಸೇರಿದಂತೆ ಅನೇಕ ವ್ಯವಸ್ಥೆಗಳನ್ನು ಕಲ್ಪಿಸುವುದಾಗಿ ಸುಳ್ಳು ಫೋಸ್ಟ್‌ಗಳನ್ನು ಹಾಕುತ್ತಿರುವ ಆನ್‌ಲೈನ್ ವಂಚಕರಿಂದ ಶ್ರೀಮಠಕ್ಕೆ ತಲೆನೋವಾಗಿ ಪರಿಣಮಿಸುತ್ತಿದೆ.

ಭಕ್ತಿ ದುರ್ಬಳಕೆ: ಸಾಮಾಜಿಕ ಜಾಲತಾಣಗಳಲ್ಲಿ ಶ್ರೀಮಠದ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ಗಳನ್ನು ರೂಪಿಸುತ್ತಿರುವ ವಂಚಕರು ಭಕ್ತಿಯನ್ನೇ ದುರ್ಬಳಕೆ ಮಾಡಿ ಕೊಂಡು ಅದನ್ನೇ ಬಂಡವಾಳವನ್ನಾಗಿಸಿ ರಾಯರ ಭಕ್ತರನ್ನು ಮೋಸಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು ಇದರಿಂದ ಸಾಕಷ್ಟು ಎಚ್ಚರಿಕೆ ವಹಿಸುವಂತೆ ಭಕ್ತರಿಗೆ ಶ್ರೀಮಠವು ಕಾಲಕಾಲಕ್ಕೆ ಮನವಿ ಮಾಡಿಕೊಳ್ಳುತ್ತಿದ್ದರು ಸಹ ಆನ್ಲೈನ್ ವಂಚನೆ ಘಟನೆಗಳಿಗೆ ಮಾತ್ರ ಬ್ರೇಕ್ ಬೀಳುತ್ತಿಲ್ಲ.

ಹಬ್ಬ ಹರಿದಿನಗಳು, ಸಾಲು ಸಾಲು ರಜೆಗಳ ಜೊತೆಗೆ ಶ್ರೀಮಠದ ವಿಶೇಷ ದಿನಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಸುಕ್ಷೇತ್ರ ಮಂತ್ರಾಲಯಕ್ಕೆ ಬರುವುದು ಸಹಜ, ಇಂತಹ ಸಮಯದಲ್ಲಿ ಕೊಠಡಿಗಳನ್ನು ಮುಂಗಡವಾಗಿ ಕಾಯ್ದಿರಿಸುವುದು, ಶ್ರೀರಾಘವೇಂದ್ರ ಸ್ವಾಮಿಗಳಿಗೆ ಪೂಜಾ, ರಥ ಹಾಗೂ ಅನ್ನಪ್ರಸಾದ ಸೇರಿದಂತೆ ಇತರೆ ಸೇವೆಗಳು ಮಾಡಲಾಗುತ್ತದೆ ಅದಕ್ಕಾಗಿಯೂ ಶ್ರೀಮಠದಿಂದ ಅಧಿಕೃತ ವೆಬ್ ಸೈಟ್ ಹಾಗೂ ಮಠದ ಕಚೇರಿಗಳಲ್ಲಿ ಹಣ ಪಡೆದು ರಸೀದಿಯನ್ನು ನೀಡಲಾಗುತ್ತದೆ ಆದರೆ ಆನ್ಲೈನ್ ವಂಚಕರು ಭಕ್ತರನ್ನು ಪುಸಲಾಯಿಸಿ ಹಣವನ್ನು ಪಡೆದು ಮೋಸಮಾಡುತ್ತಿದ್ದು ಈ ಕುರಿತು ಶ್ರೀಮಠದಿಂದ ಪೊಲೀಸ್ ಸೈಬರ್ ವಿಭಾಗಕ್ಕೆ ಹಲವು ದೂರುಗಳನ್ನು ನೀಡಿದ್ದರು ಸಹ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಲು ಸಾಧ್ಯವಾಗುತ್ತಿಲ್ಲ.

ಅಧಿಕೃತ ವೆಬ್ಸೈಟ್‌ನಲ್ಲಿ ವ್ಯವಹರಿಸಲು ಮನವಿ: ರಾಯಚೂರು: ಶ್ರೀರಾಘವೇಂದ್ರ ಸ್ವಾಮಿಗಳ ಮಠದ ವಸತಿ ಗೃಹದ ಹೆಸರಿನಲ್ಲಿ ಅನೇಕರಿಗೆ ವಂಚಿಸುತ್ತಿರುವುದು ಗಮನಕ್ಕೆ ಬಂದಿದೆ.ಶ್ರೀಮಠವು ಅಧಿಕೃತ ವೆಬ್ಸೈಟ್‌ನ ಮಾಹಿತಿಯನ್ನು ಜನರ ಅನುಕೂಲಕ್ಕಾಗಿ ಹಾಕಲಾಗಿದೆ. ಆದರೂ ಕೆಲ ಕಿಡಿಗೇಡಿಗಳ ಮಠದ ಹೆಸರಿನಲ್ಲಿ ವಸತಿ ಗೃಹ ಕಾಯ್ದಿರಿಸುವ(ಬುಕ್) ಮಾಡಲು ನಕಲಿ ವೆಬ್ಸೈಟ್ ಮೂಲಕ ವಂಚನೆಯ ಮಾಡುತ್ತಿದ್ದಾರೆ ಎಂದು ಶ್ರೀಮಠವು ತಿಳಿಸಿದೆ.

ಶ್ರೀಮಠದ ಅಧಿಕೃತವಾಗಿ www.srsmatha.org ನಲ್ಲಿ ಮಾತ್ರ ವೆಬ್‌ಸೈಟ್ ಇದ್ದು ಇದರಲ್ಲೇ ರೂಮ್ ಬುಕ್ಕಿಂಗ್ ಮಾಡಬೇಕು. ಇದರ ಹೊರತಾಗಿ ಯಾವುದೇ ವೆಬ್ ಸೈಟ್ ಇಲ್ಲ ಭಕ್ತರು ದೇಣಿಗೆ (ಡೊನೇಶನ್) ನೀಡುವವರು, ರೂಮ್ ಬುಕ್ಕಿಂಗ್‌ಗಾಗಿ ಇದನ್ನೇ ಬಳಸಬೇಕು. ಆನ್‌ಲೈನ್ ವೆಬ್ ಸೈಟ್‌ನಲ್ಲಿ ರೂಮ್ ಸಿಕ್ಕಿಲ್ಲ ಎಂದು ಬೇರೆ ವೆಬ್‌ಸೈಟ್ ಪರಿಶೀಲನೆ ಮಾಡಿ ವಂಚನೆಗೊಳಗಾಗಬಾರದು. ಅಧಿಕೃತ ವೆಬ್‌ಸೈಟ್ ಹೊರತುಪಡಿಸಿ ಮೂರನೇ ವ್ಯಕ್ತಿಯ ಮಾತು ಆಲಿಸಬೇಡಿ ಎಂದು ಮಠದ ಮಾಧ್ಯಮ ವಕ್ತಾರ ಶ್ರೀನಿಧಿ ಕರ್ಣಂ ಅವರು ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ಫ್ರೀಡಂ ಪಾರ್ಕ್‌, ವಿಧಾನಸೌಧ ಬಳಿ ರೈತರ ಪ್ರತಿಭಟನೆ
ಯುವಶಕ್ತಿಯಿಂದಲೇ ಪ್ರಜಾಪ್ರಭುತ್ವಕ್ಕೆ ಬಲ: ಸರಸ್ವತಿ ಓಲೆಕಾರ್